ಶತ್ರುಗಳ ವಿರುದ್ಧ ‘ಒಂದಾಗೋಣ ಬಾ’ ಎಂದ ಚೀನಾ!

ಬೀಜಿಂಗ್: ಅತ್ತ ಚೀನಾಗೂ ಶತ್ರುಗಳು ಹೆಚ್ಚಾಗುತ್ತಿದ್ದಾರೆ, ಇನ್ನೊಂದು ಕಡೆ ಉತ್ತರ ಕೊರಿಯಾಗೂ ಶತ್ರುಗಳ ಕಂಟಕ ಪ್ರತಿ ಕ್ಷಣವೂ ಹೆಚ್ಚಾಗುತ್ತಿದೆ. ಈ ಹೊತ್ತಲ್ಲೇ ಶತ್ರುಗಳನ್ನು ಸರ್ವನಾಶ ಮಾಡಲು ನಮ್ಮೊಂದಿಗೆ ಸಂಬಂಧ ಬೆಸೆಯಿರಿ ಎಂದು ಉತ್ತರ ಕೊರಿಯಾ (north korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ (kim jong un) ಚೀನಾ (china) ಆಹ್ವಾನ ನೀಡಿದೆ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡೆಸುತ್ತಿರುವ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಕಂಡು ಬೆಚ್ಚಿಬಿದ್ದಿರುವ ದಕ್ಷಿಣ ಕೊರಿಯಾ (south korea), ತನ್ನ ಪರಮಾಪ್ತ ಸ್ನೇಹಿತ ಅಮೆರಿಕ ಮತ್ತು ಜಪಾನ್ ಜೊತೆ ಸೇರಿ ಸಮರಾಭ್ಯಾಸ ಆರಂಭಿಸಿದೆ. ಇದು ಸರ್ವಾಧಿಕಾರಿ ಕಿಮ್‌ಗೆ ಕೆಂಡದಂತಹ ಕೋಪ ತರಿಸುವ ಜೊತೆಗೆ ಚೀನಾ ಕಣ್ಣು ಕೂಡ ಈ ಕಡೆ ನೆಡುವಂತೆ ಮಾಡಿದೆ. ಏಕೆಂದರೆ ಉತ್ತರ ಕೊರಿಯಾದ ಶತ್ರುಗಳು ಚೀನಾಗೂ ಶತ್ರುಗಳಾಗಿದ್ದಾರೆ ಎಂಬುದು ವಿಶೇಷ.

Jinping suggested the North Korea to increase communication with China

ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಜಂಟಿಯಾಗಿ ದಕ್ಷಿಣ ಕೊರಿಯಾ ಕಡಲ ತೀರದಲ್ಲಿ ಕ್ಷಿಪಣಿ ನಿಗ್ರಹ ಸಮರಾಭ್ಯಾಸ ನಡೆಸಿವೆ. ಸಮರಾಭ್ಯಾಸದಲ್ಲಿ ಸುಮಾರು 110 ಯುದ್ಧ ವಿಮಾನಗಳ ಭಾಗಿಯಾಗಿವೆ. ಏಪ್ರಿಲ್ 28ರ ವರೆಗೂ ಈ ಜಂಟಿ ಸಮರಭ್ಯಾಸ ನಡೆಸಲು ಅಮೆರಿಕ, ದಕ್ಷಿಣ ಕೊರಿಯಾ ನಿರ್ಧಾರ ಮಾಡಿವೆ. ಈ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚೀನಾ ಅಧ್ಯಕ್ಷ ಜಿನ್‌ಪಿಂಗ್, ಉತ್ತರ ಕೊರಿಯಾಗೆ ಸಲಹೆ ನೀಡಿ ನಮ್ಮ ಜೊತೆ ಪ್ರತಿಯೊಂದು ಮಾಹಿತಿ ಹಂಚಿಕೊಳ್ಳಿ ಎಂದಿದ್ದಾರೆ.

ತೈವಾನ್ ವಿಚಾರಕ್ಕೆ ಕಿರಿಕ್!

ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಅದೇ ಕಿತಾಪತಿ ಮಾಡುತ್ತಿದೆ. ಪದೇಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೊತ್ತಲ್ಲೇ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಇದೇ ತಂತ್ರ ಅನುಸರಿಸುತ್ತಿರುವುದು ಚೀನಾ ಗಮನಕ್ಕೆ ಬಂದಿದೆ. ಹೀಗಾಗಿ ನಮ್ಮ ಜೊತೆ ಮತ್ತಷ್ಟು ಹತ್ತಿರವಾಗಿ, ಶತ್ರುಗಳನ್ನು ಸದೆಬಡಿಯೋಣ ಎಂಬ ಸಂದೇಶ ಚೀನಾ ನೆಲದಿಂದ ಉತ್ತರ ಕೊರಿಯಾಗೆ ತಲುಪಿದೆ.

ಉ.ಕೊರಿಯಾ ಜೊತೆ ಸೇರಿ ದಾಳಿ?

ಚೀನಾ-ತೈವಾನ್ ನಡುವೆ ಆಗಾಗ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿದೆ. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿತ್ತು. ಈಗ ಚರ್ಚೆ ನಡೆಸಿರುವ ಅಂಶ ಗಮನಿಸಿದರೆ, ತೈವಾನ್ ವಿರುದ್ಧ ಚೀನಾ ಯುದ್ಧಕ್ಕೆ ಮುಂದಾದರೆ ಉತ್ತರ ಕೊರಿಯಾ ಸಹಾಯ ಪಡೆಯುವ ಸಾಧ್ಯತೆ ಇದೆ.

Jinping suggested the North Korea to increase communication with China

ಜಪಾನ್ ಬುಡಕ್ಕೂ ಬತ್ತಿ ಪಕ್ಕಾ!

ಕಳೆದ ವಾರವಷ್ಟೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗದ ಮತ್ತು ಶತ್ರುಗಳ ನೆಲವನ್ನ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ್ದ. ಘನ-ಇಂಧನ ಬಳಸಿ ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ನೀಡಲಾಗಿತ್ತು. ಮತ್ತೊಂದು ಕಡೆ ಚೀನಾ ಕೂಡ ಉತ್ತರ ಕೊರಿಯಾ ನೆರವಿಗೆ ಬರುತ್ತಿದ್ದು, ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ನಿದ್ದೆ ಹಾರಿಹೋಗಿದೆ.

100ಕ್ಕೂ ಹೆಚ್ಚು ಕ್ಷಿಪಣಿ ಪ್ರಯೋಗ

ಕಿಮ್ ಜಾಂಗ್ ಉನ್ ಅಮೆರಿಕ ಮತ್ತು ಜಪಾನ್, ದಕ್ಷಿಣ ಕೊರಿಯಾ ವಿರುದ್ಧ ಅದೆಷ್ಟು ರೊಚ್ಚಿಗೆದ್ದಿದ್ದಾನೆ ಎಂದರೆ, ಕಳೆದ 1 ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿದ್ದಾನೆ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸುತ್ತಿದ್ದಾನೆ. ಆದರೂ ಈಗ ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇನೆ ಅಮೆರಿಕದ ಜೊತೆಗೆ ಸೇರಿ ಕಿಮ್ ಕೆಣಕುವ ಕೆಲಸ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+