Billi Village: ಈ ಗ್ರಾಮದ 'ಬೆಕ್ಕು'ಗಳಿಗೆ ಡಾಕ್ಟರ್, ಇಂಜಿನಿಯರ್ ಹಾಗೂ ಶಿಕ್ಷಕರಾಗುವ ಆಸೆ!
ನಮ್ಮ ದೇಶದಲ್ಲಿ ಕೆಲವು ವಿಚಿತ್ರ ಕಾರಣಗಳಿಂದಾಗಿ ಸುದ್ದಿಯಲ್ಲಿರುವ ಹಲವಾರು ಸ್ಥಳಗಳಿವೆ. ಹೀಗೆ ಇಲ್ಲೊಂದು ಗ್ರಾಮದಲ್ಲಿ 'ಬೆಕ್ಕು'ಗಳು ಆಟವಾಡುತ್ತವೆ, ಶಾಲೆಗೆ ಹೋಗುತ್ತವೆ. ಅಷ್ಟೇ ಅಲ್ಲ ಈ ಬೆಕ್ಕುಗಳಿಗೆ ಡಾಕ್ಟರ್, ಇಂಜಿನಿಯರ್ ಹಾಗೂ ಶಿಕ್ಷಕರಾಗುವ ಆಸೆ ಕೂಡ ಇದೆ. ಆಚ್ಚರಿ ಅನಿಸಿದರೆ ಈ ಸ್ಟೋರಿ ಓದಿ...
ಸಾಮಾನ್ಯವಾಗಿ ಬೆಕ್ಕು ಸ್ನೇಹ ಪ್ರಾಣಿ. ಮನುಷ್ಯರೊಂದಿಗೆ ಬಹುಬೇಗ ಬೆರೆಯುತ್ತದೆ. ಇದನ್ನು ಮನೆಯಲ್ಲಿ ಮುದ್ದಾಗಿ ಪ್ರೀತಿಯಿಂದಲೂ ಸಾಕಲಾಗುತ್ತದೆ. ಮನೆಯಲ್ಲಿ ಸಾಕುವ ಬೆಕ್ಕುಗಳು ತಮ್ಮ ಮಾಲೀಕರು ಹೇಳುವಂತೆ ಕೇಳುತ್ತವೆ. ಅವುಗಳ ತುಂಟಾಟ, ಅವುಗಳ ಪ್ರೀತಿ ಅನುಭವಿಸಿದವರೇ ಬಲ್ಲರು. ಆದರೆ ಇಲ್ಲೊಂದು ಗ್ರಾಮದಲ್ಲಿ 'ಬೆಕ್ಕು'ಗಳಿಗೆ ಹಲವಾರು ಆಸೆಗಳಿವೆ.

ಇದನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗೋದ್ರಲ್ಲಿ ಎರಡು ಮಾತಿಲ್ಲ. ಬೆಕ್ಕುಗಳು ಅದು ಹೇಗೆ ಡಾಕ್ಟರ್, ಇಂಜಿನಿಯರ್ ಹಾಗೂ ಶಿಕ್ಷಕರಾಗುವ ಆಸೆ ಹೊಂದಿರುವುತ್ತವೆ ಅನ್ನೋ ಅಚ್ಚರಿ ನಿಮಗೆ ಮೂಡಿರಬಹುದು. ಈ ಬಗ್ಗೆ ತಿಳಿಯಬೇಕು ಅಂದರೆ ಜಾರ್ಖಂಡ್‌ನಲ್ಲಿ ಇರುವ 'ಬಿಲ್ಲಿ ವಿಲೇಜ್' ಬಗ್ಗೆ ತಿಳಿದುಕೊಳ್ಳಬೇಕು.
ಜಾರ್ಖಂಡ್ ಬಿಲ್ಲಿ ವಿಲೇಜ್
ಜಾರ್ಖಂಡ್‌ನಲ್ಲಿ ಒಂದು ಗ್ರಾಮವಿದೆ. ಈ ಗ್ರಾಮ ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದೆ ಎಂದರೆ ಇದಕ್ಕಿರುವ ಹೆಸರಿನಿಂದಾಗಿ. ಈ ಗ್ರಾಮ ತನ್ನ ಹೆಸರಿನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಊರ ಹೆಸರು ಹೇಳಲು ಸ್ಥಳೀಯರು ನಾಚಿಕೊಳ್ಳುತ್ತಾರೆ. ಯಾಕೆಂದರೆ ಈ ಗ್ರಾಮದ ಹೆಸರು ಬಿಲ್ಲಿ (ಬೆಕ್ಕು) ವಿಲೇಜ್ (ಗ್ರಾಮ). ಈ ಗ್ರಾಮವು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿದೆ.

ಈ ಗ್ರಾಮದ ಜನ ಯಾವುದೇ ಶಾಲೆಗೆ ಹೋಗಲಿ, ಕಾಲೇಜ್ ಹೋಗಲಿ, ಯಾವುದೇ ಕಚೇರಿಗೇ ಹೋಗಲಿ ಇಲ್ಲಿನ ಜನರು ತಮ್ಮ ಗ್ರಾಮದ ಹೆಸರನ್ನು ಹೇಳಲು ತುಂಬಾ ಸಂಕೋಚಪಡುತ್ತಾರೆ. ಈ ಗ್ರಾಮದ ಜನರನ್ನು ಬಿಲ್ಲಿ(ಬೆಕ್ಕು) ಅಂತಲೇ ಕರೆಯಲಾಗುತ್ತದೆ. ಈ ಗ್ರಾಮದವರ ಹೆಸರಿನ ನಂತರ ಬಿಲ್ಲಿ ಎಂಬ ಪದವನ್ನು ಸೇರಿಸಿ ಕರೆಯುವುದರಿಂದ ಜನ ಈ ಗ್ರಾಮದ ಹೆಸರನ್ನು ಧೈರ್ಯವಾಗಿ ಹೇಳಲು ಮುಜುಗರ ಪಡುತ್ತಾರೆ.
ಸಾಮಾನ್ಯವಾಗಿ ಬೆಕ್ಕುಗಳು ಕದ್ದು ಹಾಲು ಕುಡಿದು ಓಡಿ ಹೋಗುವುದು, ಮನೆಯಲ್ಲಿರುವ ಆಹಾರ ತಿಂದು ಪರಾರಿಯಾಗುವುದರಿಂದಾಗಿ ಬೆಕ್ಕುಗಳನ್ನು ಕಂಡರೆ ಪ್ರೀತಿಸುವ ಜನರ ನಡುವೆ ದ್ವೇಷಿಸುವವ ಜನರೂ ಇದ್ದಾರೆ. ಬೆಕ್ಕುಗಳ ಈ ತುಂಟಾಟಗಳಿಂದಾಗಿ ತಮ್ಮನ್ನೂ ಅದೇ ರೀತಿ ಜನ ನೋಡುತ್ತಾರೆನ್ನುವುದು 'ಬಿಲ್ಲಿ' ಗ್ರಾಮದ ಜನರ ಸಂಕೋಚಕ್ಕೆ ಕಾರಣವಾಗಿದೆ. ಇದರಿಂದಾಗಿ ತಾವು ಬಿಲ್ಲಿ ಗ್ರಾಮದವರು ಎಂದು ಹೇಳುವುದು ಕಷ್ಟವಾಗಿದೆ. ಹೀಗಿರುವಾಗ ಈ ಊರಿನ ಜನ ಈ ಊರಿನ ಹೆಸರು ಹೇಳಲು ನಾಚಿಕೆ ಪಡುತ್ತಾರೆ.

ಸಾಮಾನ್ಯವಾಗಿ ಬಿಲ್ಲಿ ಗ್ರಾಮದ ಜನರಿಗೆ ಡಾಕ್ಟರ್, ಇಂಜಿನಿಯರ್ ಮತ್ತು ಶಿಕ್ಷಕರಾಗುವ ಕನಸು ಇದೆ. ಆದರೆ ಗ್ರಾಮದ ಹೆಸರಿನಿಂದಾಗಿ ಎಲ್ಲದರೂ ಹೋಗಲು ಅಲ್ಲ ತಮ್ಮ ಹೆಸರು ಹೇಳಲು ಮುಜುಗರ ಪಡುತ್ತಾರೆ.
ಈ ಗ್ರಾಮದ ಜನರಿಗೆ ಗೇಲಿ
ಈ ಹಳ್ಳಿಯ ಬಗ್ಗೆ ಹೇಳಿದಾಗಲೆಲ್ಲ ಜನರಿಗೆ ನಗು ಬರುತ್ತದೆ. ಹೀಗಾಗಿ ತಮ್ಮ ಸ್ಥಳದ ಹೆಸರನ್ನು ಹೇಳಲು ಜನರು ತುಂಬಾ ಮುಜುಗರಪಡುತ್ತಾರೆ. ಯಾಕೆಂದರೆ ಬೇರೆ ಜನರು ಈ ಸ್ಥಳದ ಜನರನ್ನು ಗೇಲಿ ಮಾಡುತ್ತಾರೆ. ಹಾಗಾದರೆ ಈ ಗ್ರಾಮಕ್ಕೆ ಕ್ಯಾಟ್ ಎಂಬ ಹೆಸರು ಹೇಗೆ ಬಂತು ಎಂದು ತಿಳಿಯೋಣ.
ಬೆಕ್ಕಿನ ಆಸಕ್ತಿದಾಯಕ ಇತಿಹಾಸವೇನು?
ಈ ಗ್ರಾಮಕ್ಕೆ ಈ ಹೆಸರು ಬರಲು ಕುತೂಹಲಕಾರಿ ಕಾರಣವಿದೆ. ಬಿಲ್ಲಿ ಗ್ರಾಮದಲ್ಲಿ ಬೆಕ್ಕುಗಳಿಗೆ ಪೂಜೆ ನಡೆಯುತ್ತಿತ್ತು ಎನ್ನುತ್ತಾರೆ ಗ್ರಾಮಸ್ಥರು. ಅಲ್ಲದೆ ಯಾಗ ಕೂಡ ನಡೆಯುತ್ತಿತ್ತಂತೆ. ಹೀಗಾಗಿ ಈ ಗ್ರಾಮಕ್ಕೆ ಬಿಲ್ಲಿ ಗ್ರಾಮ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಇಲ್ಲಿ ಒಟ್ಟು 1200 ಅನೇಕ ಸಮುದಾಯಗಳ ಜನರು ಒಟ್ಟಿಗೆ ವಾಸಿಸುತ್ತಿದ್ದಾರೆ.
ಹೆಸರು ಬದಲಾಯಿಸಲು ಗ್ರಾಮಸ್ಥರ ಚಿಂತನೆ
ಪುರಾತನ ಕಾಲದಿಂದಲೂ ಗ್ರಾಮಕ್ಕೆ ಈ ಹೆಸರು ಇದೆ ಎಂದು ಗ್ರಾಮದ ಜನರು ಹೇಳುತ್ತಾರೆ. ಈ ಹೆಸರನ್ನು ಪೂರ್ವಜರ ಕಾಲದಿಂದಲೂ ಕರೆದುಕೊಂಡು ಬರಲಾಗಿದೆ. ಆದರೆ ಈಗ ಈ ಗ್ರಾಮದ ಹೆಸರನ್ನು ಬದಲಾಯಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಇದೀಗ ಈ ಗ್ರಾಮಕ್ಕೆ ಡಾ.ಭೀಮರಾವ್ ಅಂಬೇಡ್ಕರ್ ಅವರ ಹೆಸರಿಡಲು ಯೋಜನೆ ರೂಪಿಸಲಾಗುತ್ತಿದೆ. ಹೆಸರು ಬದಲಾದರೆ ಜನರು ಬೆಕ್ಕು ಎಂಬ ಹೆಸರಿನಿಂದ ಮತ್ತೊಂದು ಹೆಸರಿಗೆ ಬದಲಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ.












Click it and Unblock the Notifications