ಜಪಾನ್ ಸಂಸತ್ ವಿಸರ್ಜನೆ, ಅಕ್ಟೋಬರ್ 31ಕ್ಕೆ ಚುನಾವಣೆ

ಟೋಕಿಯೋ, ಅಕ್ಟೋಬರ್ 15: ಜಪಾನ್ ಸಂಸತ್ ವಿಸರ್ಜನೆಗೊಂಡಿದ್ದು ಅಕ್ಟೋಬರ್ 31ಕ್ಕೆ ಚುನಾವಣೆ ನಡೆಯಲಿದೆ. ಕಳೆದ 10 ದಿನಗಳ ಹಿಂದಷ್ಟೆ ಜಪಾನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಫುಮಿಯೋ ಕಿಶಿದಾ ಅವರು ತಮ್ಮ ನಿರ್ಧಾರಳಿಗೆ ಜನ ಬೆಂಬಲ ಪಡೆದುಕೊಳ್ಳುವ ಸಲುವಾಗಿ ಸಂಸತ್‌ನ ಕೆಳಮನೆಯನ್ನು ವಿಸರ್ಜನೆ ಮಾಡಿದ್ದು, ಹೊಸದಾಗಿ ಚುನಾವಣೆಗೆ ತೆರಳಲಿದ್ದಾರೆ.

ಲೋಕಸಭೆ ಮಾದರಿಯ ಜಪಾನಿನ ಸಂಸತ್ ಸದಸ್ಯರ ಆಯ್ಕೆಗೆ ಅಕ್ಟೋಬರ್ 31 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಕಿಶಿದಾ ಅವರು ಕೆಳಮನೆಯನ್ನು ವಿಸರ್ಜನೆ ಮಾಡಿದ್ದಾರೆ. ತಮ್ಮ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಜನ ಬೆಂಬಲ ಪಡೆಯಬೇಕಿದೆ. ಅದಕ್ಕಾಗಿ ಚುನಾವಣೆಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

ಹೊಸ ಚುನಾವಣೆಗೆ ಮಂಗಳವಾರದಿಂದ ಪ್ರಚಾರ ಆರಂಭವಾಗಿದ್ದು, ಕಿಶಿದಾ ಮೊದಲ ಸಭೆ ನಡೆಸಿದ್ದಾರೆ. ಚೀನಾ ಮತ್ತು ಉತ್ತರ ಕೊರಿಯಾದಿಂದ ಎದುರಾಗುವ ಬೆದರಿಕೆಗಳನ್ನು ನಿಭಾಯಿಸುವುದು ಮತ್ತು ಆರ್ಥಿಕ ಪುನಶ್ಚೇತನಕ್ಕೆ ತಮ್ಮ ಸರ್ಕಾರ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಜನ ಬೆಂಬಲ ಬೇಕು ಎಂದು ಕಿಶಿದಾ ಹೇಳಿದ್ದಾರೆ.

Japans Prime Minister Dissolves Parliament Ahead Of October 31 General Election

2017ರಲ್ಲಿ ಆಗಿನ ಪ್ರಧಾನ ಶಿಂಜೋ ಅಬೆ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ಅವರ ಉತ್ತರಾಧಿಕಾರಿಯಾಗಿ ಯೋಶಿಹಿದೆ ಸುಗಾ ಆಡಳಿತ ನಡೆಸಿದ್ದರು. ಕೊರೊನಾ ಕಾಲಘಟ್ಟದಲ್ಲಿ ಆಡಳಿತವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿಲ್ಲ ಎಂಬ ಆಕ್ರೋಶಕ್ಕೆ ಸುಗಾ ಒಳಗಾದರು.

ಟೋಕಿಯೋ ಒಲಿಂಪಿಕ್ ಹೊರತಾಗಿಯೂ ಜಪಾನ್‌ನಲ್ಲಿ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳಲಿಲ್ಲ. ಇದು ಜನರನ್ನು ಕೆರಳಿತ್ತು. ಜನಾಕ್ರೋಶವನ್ನು ತಣಿಸಲು ಆಡಳಿತಾರೂಢ ಪಕ್ಷ ಮತ್ತು ಮಿತ್ರ ಪಕ್ಷಗಳು ನಾಯಕತ್ವ ಬದಲಾವಣೆಗೆ ಮುಂದಾದವು.

ಆ ವೇಳೆ ಕಿಶಿದಾ ಅಗತ್ಯ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇತ್ತಿಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಕಿಶಿದಾ ವಿಶ್ವಾಸಮತ ಯಾಚನೆ ಮಾಡುವಾಗ 465 ಸಂಸದರು, ಬಂಝೈ (ಬೆಂಬಲವಿದೆ) ಎಂದು ಮೂರು ಬಾರಿ ಹೇಳಿ ಹೋಗಿದ್ದರು. ಆದರೆ ಈಗ ಆ ಸಂಸದರು ಮಾಜಿಗಳಾಗಿದ್ದಾರೆ.

ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ:ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿದಾ ಅಧಿಕಾರ ಸ್ವೀಕರಿಸಿದ್ದಾರೆ. ಜಪಾನಿನ ಮಾಜಿ ವಿದೇಶಾಂಗ ಸಚಿವ ಫುಮಿಯೋ ಕಿಶಿದಾ ಅವರು ಆಡಳಿತಾರೂಢ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ಇದಿಗ ನೂತನ ಪ್ರಧಾನಿಯಾಗಿ ಅಧಿಕಾರ ಗದ್ದುಗೆ ಏರಿದ್ದಾರೆ

ಅವರ ಪೂರ್ವಾಧಿಕಾರಿ ಯೋಷಿಹಿದೆ ಸುಗಾ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಕೇವಲ ಒಂದು ವರ್ಷದ ಅಧಿಕಾರದ ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದರು.

ಸಂಸತ್ತಿನಲ್ಲಿ ಎಲ್ಡಿಪಿ ಹಾಗೂ ಅದರ ಮಿತ್ರಪಕ್ಷ ಬಹುಮತವನ್ನು ಹೊಂದಿದೆ. ಪ್ರಧಾನಿ ಹುದ್ದೆಗಾಗಿ ಸ್ಪರ್ಧೆಯಲ್ಲಿದ್ದ ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಸಾನೆ ಟಿಕಾಯಿಚಿ ಹಾಗೂ ಸೀಕೋ ನೊಡಾ ಅವರನ್ನು ಮೊದಲ ಸುತ್ತಿನಲ್ಲಿ ಹಿಂದಿಕ್ಕಿದ ಕಿಶಿದಾ ಬಳಿಕ ಲಸಿಕೆ ಸಚಿವ ತಾರೊ ಕೊನೊ ಅವರನ್ನು ಹಿಮ್ಮೆಟ್ಟಿಸಿದ್ದರು. ಜಪಾನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಫುಮಿಯೊ ಕಿಶಿದಾ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಉದ್ಯೋಗಿಗಳ ಸಂಬಳ ಹೆಚ್ಚಿಸುವುದೇ ಪರಿಹಾರ ಎಂದು ಹೇಳಿದ್ದಾರೆ.

ಕಿಶಿದಾ ಈ ಹಿಂದೆ ಎಲ್‌ಡಿಪಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು ಮತ್ತು 2012-17ರ ನಡುವೆ ವಿದೇಶಾಂಗ ಸಚಿವರಾಗಿದ್ದರು. ಈ ಸಮಯದಲ್ಲಿ ಅವರು ದಕ್ಷಿಣ ಕೊರಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಅವರು 2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಹಿರೋಶಿಮಾಗೆ ಕರೆತರಲು ಸಹಾಯ ಮಾಡಿದ್ದರು. ಈ ಹಿಂದಿನ ಪ್ರಧಾನಿ ಶಿಂಜೊ ಅಬೆ ಅವರು 'ಮೇಕ್ ಜಪಾನ್ ಗ್ರೇಟ್ ಅಗೇನ್' ಎನ್ನುವ ಅಭಿಯಾನದಡಿ ಹಲವು ಆರ್ಥಿಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪ್ರಗತಿ ಹಳ್ಳ ಹಿಡಿದಿತ್ತು.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಫುಮಿಯೋ ಕಿಶಿದಾ ಅವರಿಗೆ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಕೋವಿಡ್ ಸಾಂಕ್ರಾಮಿಕ, ಆರ್ಥಿಕ ವ್ಯವಸ್ಥೆಯ ಚೇತರಿಕೆ, ಅಮೆರಿಕದೊಂದಿಗೆ ಸಂಬಂಧ ವೃದ್ಧಿ ಮತ್ತು ಪ್ರಾದೇಶಿಕ ಭದ್ರತಾ ಅಪಾಯಗಳನ್ನು ತಡೆಯುವ ಸವಾಲುಗಳಿವೆ.

ಕೋವಿಡ್ ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ ಮತ್ತು ಉತ್ತರ ಕೊರಿಯಾದಿಂದ ಬೆದರಿಕೆಗಳನ್ನು ಎದುರಿಸುವುದು ಸೇರಿದಂತೆ ಹಲವಾರು ಕಠಿಣ ಸಮಸ್ಯೆಗಳನ್ನು ನೂತನ ಪ್ರಧಾನಿ ಎದುರಿಸಲಿದ್ದಾರೆ. ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಆರ್ಥಿಕ ಸಹಾಯದ ಪ್ಯಾಕೇಜುಗಳನ್ನು ನೂತನ ಪ್ರಧಾನಿ ಅರ್ಥ ವ್ಯವಸ್ಥೆಗೆ ನೀಡಬಹುದು ಎಂಬ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+