ವರಮಹಾಲಕ್ಷ್ಮಿ ಹಬ್ಬಕ್ಕೆ ಮಿಸೈಲ್ ಗಿಫ್ಟ್ ಕೊಟ್ಟ ಸರ್ವಾಧಿಕಾರಿ!

ಉತ್ತರ ಕೊರಿಯಾ ಸರ್ವಾಧಿಕಾರಿ ತಣ್ಣಗೆ ಕೂರುವ ಲಕ್ಷಣ ಕಾಣುತ್ತಿಲ್ಲ. ಏನಾದರೊಂದು ಕಿತಾಪತಿ ಮಾಡುವ ಈ ಪಾಪಾತ್ಮ ಈಗ ಮತ್ತೊಂದು ಭಯ ಹುಟ್ಟಿಸಿದ್ದಾನೆ. ಕಿಮ್ ಹೊಸ ಕಿತಾಪತಿ ಏನಂದ್ರೆ ಇಷ್ಟುದಿನ ಬಹಿರಂಗ ಹೇಳಿಕೆ ನೀಡುತ್ತಾ ಕ್ಷಿಪಣಿ ಪರೀಕ್ಷೆ ಮಾಡುತ್ತಿದ್ದ, ಆದ್ರೆ ಈ ಬಾರಿ ಗುಟ್ಟಾಗಿ ಪರೀಕ್ಷೆ ನಡೆಸಿದ್ದಾನೆ. ಹೀಗೆ ರಹಸ್ಯವಾಗಿ ಕಿಮ್ ಜಾಂಗ್ ಉನ್ ತನ್ನ ಕ್ಷಿಪಣಿ ಪರೀಕ್ಷೆ ನಡೆಸಿರುವ ಕಾರಣ ಜಪಾನ್‌ಗೆ ಕೈಕಾಲು ನಡುಗುತ್ತಿದೆ.

ಅಂದಹಾಗೆ ಉತ್ತರ ಕೊರಿಯಾ ಶಂಕಿತ ಖಂಡಾಂತರ ಕ್ಷಿಪಣಿ ಉಡಾಯಿಸಿದೆ ಎಂದು, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಯಾವ ರೀತಿಯ ಕ್ಷಿಪಣಿ ಉಡಾವಣೆ ಮಾಡಲಾಗಿದೆ ಎಂದು ಸ್ಪಷ್ಟವಾಗಿಲ್ಲ. ಆದರೆ ಈ ಕ್ಷಿಪಣಿ ಜಪಾನ್‌ ಮೇಲೆ ಹಾರಾಟ ನಡೆಸಿದೆ ಎಂದಿದ್ದಾರೆ. ಈ ಮೂಲಕ ವರಮಹಾಲಕ್ಷ್ಮಿ ಹಬ್ಬಕ್ಕೆ ಮಿಸೈಲ್ ಉಡುಗೊರೆ ನೀಡಿದಂತೆ ಕಾಣುತ್ತಿದೆ ಉತ್ತರ ಕೊರಿಯಾ ಸರ್ವಾಧಿಕಾರಿ. ಜಪಾನ್ ಈ ಘಟನೆ ನಂತರ ತೀವ್ರ ಆತಂಕಕ್ಕೆ ಒಳಗಾಗಿದೆ. ಯಾಕಂದ್ರೆ ಸರ್ವಾಧಿಕಾರಿ ಕಿಮ್ ಯಾವ ಕ್ಷಣದಲ್ಲಿ ಎಂಥ ನಿರ್ಧಾರ ಕೈಗೊಳ್ತಾನೆ ಗೊತ್ತಿಲ್ಲ. ಹೀಗೆ ಜಪಾನ್ ಆತಂಕ ಹೊರಹಾಕಿದೆ.

tested-intercontinental-ballistic-missile

ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ?

ಕಿಮ್ ಜಾಂಗ್ ಉನ್ ಬಳಿ ಇರುವ ಬಹುತೇಕ ಕ್ಷಿಪಣಿ ಪರಮಾಣು ಸಾಮರ್ಥ್ಯ ಹೊಂದಿವೆ. ಅತಿಹೆಚ್ಚು ಖಂಡಾಂತರ ಕ್ಷಿಪಣಿಗಳು ಈ ಸರ್ವಾಧಿಕಾರಿಯ ಬಳಿ ಇವೆ. ಇದೀಗ ಪರೀಕ್ಷೆಗೆ ಒಳಪಡಿಸಿರುವ ಕ್ಷಿಪಣಿಯು ಕೂಡ ಖಂಡಾಂತರ ಮತ್ತು ಪರಮಾಣು ಸಾಮರ್ಥ್ಯದ ಕ್ಷಿಪಣಿ ಅಂತಾ ಹೇಳಲಾಗಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಜಪಾನ್ ಪ್ರಧಾನಿ ಟ್ವೀಟ್ ಮಾಡಿ ಆತಂಕವನ್ನ ಹೊರಹಾಕಿದ್ದಾರೆ. ಆದರೆ ಅಮೆರಿಕ ಆಗಲಿ ಅಥವಾ ಬೇರೆ ದೇಶಗಳೇ ಆಗಲಿ, ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಈ ಮೂಲಕ ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಭಯ ಆವರಿಸಿದೆ.

ತಿನ್ನಲು ಅನ್ನವಿಲ್ಲ.. ಆದರೂ ಶೋಕಿ!

ಕಿಮ್ ಜಾಂಗ್ ಉನ್ ಅಲಿಯಾಸ್ ಉತ್ತರ ಕೊರಿಯಾ ಸರ್ವಾಧಿಕಾರಿ ವಿರುದ್ಧ ಹಲವು ಆರೋಪ ಇದೆ. ಚಿಕ್ಕಪ್ಪನನ್ನೇ ಕೊಂದಿದ್ದು ತನ್ನ ವಿರೋಧಿಗಳನ್ನು ಒಬ್ಬೊಬ್ಬರಾಗಿ ಮುಗಿಸಿದ್ದು. ಹೀಗೆ ಹೇಳುತ್ತಾ ಹೋದ್ರೆ ಅದಕ್ಕೆ ದಿನಗಳೇ ಸಾಲದು. ಇಂತಿಪ್ಪ ಕಿಮ್ ಜಾಂಗ್ ಉನ್ ತನ್ನ ದೇಶದಲ್ಲಿ ಪ್ರಜೆಗಳಿಗೆ ಅನ್ನವಿಲ್ಲದಿದ್ರೂ ತೆಲೆ ಕೆಡಿಸಿಕೊಳ್ಳೋದಿಲ್ಲ. ಉತ್ತರ ಕೊರಿಯಾ ಜನ ಹಸಿವಿನಿಂದ ನರಳಿ ಸಾಯುತ್ತಾರೆ ಅನ್ನೋ ಮಾತಿದೆ. ಇತ್ತೀಚೆಗಷ್ಟೇ ಉತ್ತರ ಕೊರಿಯಾದಲ್ಲಿ ಸೈಕ್ಲೋನ್ ಅಪ್ಪಳಿಸಿ, ರೈತರ ಹೊಲ, ಗದ್ದೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಆದರೂ ಕಿಮ್ ಕ್ಷಿಪಣಿ ಉಡಾಯಿಸಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.

tested-intercontinental-ballistic-missile

ಸರ್ವಾಧಿಕಾರಿಗೆ ಈಗ ಉಪಗ್ರಹದ ಹುಚ್ಚು!

ಉತ್ತರ ಕೊರಿಯಾ ಮತ್ತೆ ಗುಡುಗಲು ಸಜ್ಜಾಗಿದ್ದು ಅದ್ರಲ್ಲೂ ಸೇನಾ ಉಪಗ್ರಹ ಉಡಾವಣೆ ಮೂಲಕ ಶಾಕ್ ಕೊಡಲು ಸಿದ್ಧವಾಗಿದೆ. ಮೇ ತಿಂಗಳಲ್ಲಿ ಇದೇ ರೀತಿ ಮಿಲಿಟರಿ ಸ್ಯಾಟಲೈಟ್‌ನ ಉಡಾವಣೆಗೆ ಯತ್ನಿಸಿದ್ದ ಉತ್ತರ ಕೊರಿಯಾ ಸೋತಿತ್ತು. ಮತ್ತೆ ಪ್ರಯತ್ನಕ್ಕೆ ಕೈಹಾಕಲು ಸಜ್ಜಾಗಿದ್ದು, ಆಗಸ್ಟ್ ಕೊನೆಯಲ್ಲಿ ಇಲ್ಲ ಅಂದ್ರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಈ ಸಾಹಸ ಮಾಡಲು ಸಜ್ಜಾಗಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಹೀಗೆ ಉಪಗ್ರಹದ ಭಯದ ನಡುವೆ ಕ್ಷಿಪಣಿ ಟೆಸ್ಟ್ ಮಾಡಿದ್ದಾನೆ ಈ ಸರ್ವಾಧಿಕಾರಿ ಕಿಮ್.

ಒಟ್ನಲ್ಲಿ ಕಿಮ್ ಜಾಂಗ್ ಉನ್ & ಉತ್ತರ ಕೊರಿಯಾದ ನಿರ್ಧಾರಗಳಿಂದ ಜಪಾನ್ ಹಾಗೂ ದಕ್ಷಿಣ ಕೊರಿಯಾಗೆ ನಡುಕ ಶುರುವಾಗಿದೆ. ಯಾವ ಕ್ಷಣದಲ್ಲಿ ನಮ್ಮ ಮೇಲೆಯೇ ಬಾಂಬ್ ಬಿದ್ದು, ನಾಶವಾಗಿ ಹೋಗ್ತಿವೋ ಅನ್ನೋ ಭಯ ಶುರುವಾಗಿದೆ. ಆದರೆ ಜಪಾನ್ ಮತ್ತು ದಕ್ಷಿಣ ಕೊರಿಯಾದ ಸ್ನೇಹಿತ ರಾಷ್ಟ್ರ ಅಮೆರಿಕ ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ವ್ಯತಿರಿಕ್ತವಾಗುವ ಸಾಧ್ಯತೆ ಇದ್ದು, ಮೂರನೇ ಮಹಾಯುದ್ಧದ ಕಾರ್ಮೋಡ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+