ಕೊರಿಯಾದ ಹೈಡ್ರೋಜನ್ ಬಾಂಬ್ ಅಣುಬಾಂಬ್ ಗಿಂತ ಅಪಾಯ
ಉತ್ತರ ಕೊರಿಯಾದ ಹೈಡ್ರೋಜನ್ ಬಾಂಬ್, ಹಿರೋಷಿಮಾ ಮೇಲೆ ಬಿದ್ದಿದ್ದ ಅಣು ಬಾಂಬ್ ಗಿಂತಲೂ ಹೆಚ್ಚು ಅಪಾಯಕಾರಿ. ಜಪಾನ್ ಸರ್ಕಾರದ ರಕ್ಷಣಾ ಸಚಿವ ಇತ್ಸುನೋರಿ ಒನೊಡೆರಾ ಹೇಳಿಕೆ.
ಟೋಕಿಯೋ, ಸೆಪ್ಟೆಂಬರ್ 6: ಅಮೆರಿಕಕ್ಕೆ ಎಚ್ಚರಿಕೆ ನೀಡಲು ಇತ್ತೀಚೆಗೆ ಉತ್ತರ ಕೊರಿಯಾ ಸರ್ಕಾರ ನಡೆಸಿದ್ದ ಹೈಡ್ರೋಜನ್ ಬಾಂಬ್ ನ ಶಕ್ತಿ 2ನೇ ಮಹಾಯುದ್ಧದಲ್ಲಿ ಜಪಾನ್ ನ ಹಿರೋಷಿಮಾವನ್ನು ನಾಶ ಮಾಡಿದ್ದ ಅಣುಬಾಂಬ್ ಗಿಂತಲೂ 10 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಜಪಾನ್ ಸರ್ಕಾರ ಹೇಳಿದೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಪಾನ್ ಸರ್ಕಾರದ ರಕ್ಷಣಾ ಸಚಿವ ಇತ್ಸುನೋರಿ ಒನೊಡೆರಾ ಅವರು ಈ ವಿಚಾರ ತಿಳಿಸಿದ್ದಾರೆ.

ಜಪಾನ್ ಮೇಲೆ ಅಮೆರಿಕ ಸರ್ಕಾರವು 1945ರಲ್ಲಿ ಹಾಕಿದ್ದ ಅಣು ಬಾಂಬ್ ನ ತೂಕ ಸುಮಾರು 15 ಕಿಲೋ ಟನ್ ಗಳಷ್ಟಿತ್ತು. ಆದರೆ, ಉತ್ತರ ಕೊರಿಯಾ ಸರ್ಕಾರವು ಹೊಂದಿರುವ ಜಲಜನಕ (ಹೈಡ್ರೋಜನ್) ಬಾಂಬ್ ನ ತೂಕ ಸುಮಾರು 160 ಕಿಲೋ ಟನ್ ಗಳಷ್ಟಿದೆ ಎಂದು ಒನೊಡೆರಾ ಅವರು ತಿಳಿಸಿದರು.
ಈ ಬಗ್ಗೆ ಈಗಾಗಲೇ ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿಗಳ ಜತೆಗೆ ತಾವು ಮಾತುಕತೆ ನಡೆಸಿ, ತಮಗೆ ಸಿಕ್ಕಿರುವ ಮಾಹಿತಿಗಳನ್ನು ಹಂಚಿಕೊಂಡಿರುವುದಾಗಿ ಅವರು ತಿಳಿಸಿದರು.
ಏತನ್ಮಧ್ಯೆ, ಅಮೆರಿಕಕ್ಕೆ ಮತ್ತೆ ಎಚ್ಚರಿಕೆ ಕೊಟ್ಟಿರುವ ಉತ್ತರ ಕೊರಿಯಾ ಸರ್ಕಾರ, ಜಲಜನಕ ಬಾಂಬ್ ನಂಥ ಅನೇಕ ಗಿಫ್ಟ್ ಗಳನ್ನು ಅಮೆರಿಕ ಶೀಘ್ರದಲ್ಲೇ ಸ್ವೀಕರಿಸಲಿದೆ ಎಂದು ತಿಳಿಸಿದೆ.












Click it and Unblock the Notifications