ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ಸಾಕು, ಶಾಂತಿ ಬೇಕು..! ಉತ್ತರ ಕೊರಿಯಾ ಜೊತೆ ಜಪಾನ್ ಸಂಧಾನ..!

|
Google Oneindia Kannada News

ಅದು 2ನೇ ಮಹಾಯುದ್ಧದ ಸಂದರ್ಭ. ಪಾಶ್ಚಿಮಾತ್ಯ ರಾಷ್ಟ್ರಗಳು ಎಷ್ಟೇ ಹೇಳಿದರೂ ಸೈಲೆಂಟ್ ಆಗದ ದ್ವೀಪ ರಾಷ್ಟ್ರ ಜಪಾನ್, ಅಮೆರಿಕ ಮತ್ತು ಮಿತ್ರಪಡೆಗಳಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿತ್ತು.

ಆದ್ರೆ ಈ ವರ್ತನೆ ಆ ದೇಶಕ್ಕೆ ದೊಡ್ಡ ಗಂಡಾಂತರ ತಂದಿತ್ತು. ಹೀಗೆ ಕೆಲವು ದಶಕಗಳ ಹಿಂದೆ ಯುದ್ಧದ ಹಪಾಹಪಿಗೆ ಸಿಲುಕಿದ್ದ ಜಪಾನ್‌ಗೆ ಸದ್ಯ ಯುದ್ಧ ಬೇಡವಾಗಿದೆ. ಅದರಲ್ಲೂ ನೆರೆಯ ರಾಷ್ಟ್ರಗಳ ಜೊತೆ ಸಂಧಾನ ಸೂತ್ರ ಅನುಸರಿಸಲು ಜಪಾನ್‌ ಮುಂದಾಗಿದೆ.

ಹೌದು ರೈತನ ಮಗನಾಗಿ ಹುಟ್ಟಿ ಜಪಾನ್‌ ಪ್ರಧಾನಿ ಹುದ್ದೆಗೇರಿರುವ ಯೋಶಿಹಿದೆ ಸುಗಾ ಈಗ ಇತಿಹಾಸ ತಿರುಗಿ ನೋಡುವಂತಹ ನಿರ್ಧಾರ ಕೈಗೊಂಡಿದ್ದಾರೆ. ಜಪಾನ್‌ನ ಆಜನ್ಮ ಶತ್ರು ಉತ್ತರ ಕೊರಿಯಾದ ಜೊತೆ ಸಂಧಾನಕ್ಕೆ ಯೋಶಿಹಿದೆ ಸುಗಾ ಮುಂದಾಗಿದ್ದಾರೆ.

ಷರತ್ತುಗಳು ಇಲ್ಲದೆ ಚರ್ಚೆಗೆ ಸಿದ್ಧ

ಷರತ್ತುಗಳು ಇಲ್ಲದೆ ಚರ್ಚೆಗೆ ಸಿದ್ಧ

ಉತ್ತರ ಕೊರಿಯಾ ಜೊತೆ ಯಾವುದೇ ಷರತ್ತುಗಳು ಇಲ್ಲದೆ ಚರ್ಚೆಗೆ ಸಿದ್ಧ ಎಂದು ಜಪಾನ್ ಪ್ರಧಾನಿ ತಿಳಿಸಿದ್ದಾರೆ. ಜಪಾನ್ ಹಾಗೂ ಉತ್ತರ ಕೊರಿಯಾ ಹಾವು-ಮುಂಗಸಿ ಇದ್ದಂತೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗೋದಿಲ್ಲ. ಆದರೆ ಈಗ ಬದಲಾವಣೆ ಲಕ್ಷಣ ಗೋಚರಿಸಿದೆ.

 ಉತ್ತರ ಕೊರಿಯಾ ಏನಂತು..?

ಉತ್ತರ ಕೊರಿಯಾ ಏನಂತು..?

ಸಂಧಾನ ಪ್ರಕ್ರಿಯೆಗಾಗಿ ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ನೀಡಿರುವ ಆಫರ್‌ಗೆ ಉ.ಕೊರಿಯಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಈ ಬಗ್ಗೆ ತಟಸ್ಥರಾಗಿದ್ದಾರೆ. ಆದ್ರೆ ಜಪಾನ್ ನೀಡಿರುವ ಆಫರ್ ಜಗತ್ತಿನ ಗಮನ ಸೆಳೆದಿದೆ. ಅದರಲ್ಲೂ ಅಮೆರಿಕ ಹಾಗೂ ಯುರೋಪ್‌ನ ಕೆಲ ರಾಷ್ಟ್ರಗಳು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಏಷ್ಯಾ ಭವಿಷ್ಯದ ದೃಷ್ಟಿಯಿಂದ ಉ.ಕೊರಿಯಾ ಹಾಗೂ ಜಪಾನ್ ನಡುವಿನ ಸಂಧಾನ ಸಾಕಷ್ಟು ಮಹತ್ವ ಪಡೆದಿದೆ. ಆದರೆ ಜಪಾನ್ ದಿಢೀರ್ ಸಂಧಾನಕ್ಕೆ ಮುಂದಾಗಿದ್ದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸ್ಟ್ರಾಬೆರಿ ಕೃಷಿಕನ ಮಗ ‘ಸುಗಾ’..!

ಸ್ಟ್ರಾಬೆರಿ ಕೃಷಿಕನ ಮಗ ‘ಸುಗಾ’..!

1948ರ ಡಿಸೆಂಬರ್ 6ರಂದು ಹುಟ್ಟಿದ ಯೋಶಿಹಿದೆ ಸುಗಾ ಅವರಿಗೆ ಈಗ 71 ವರ್ಷ ವಯಸ್ಸು. ರೈತನ ಮಗ ಸುಗಾ ಸಾಕಷ್ಟು ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಗಾಚಿ ಎಂಬ ಜಪಾನ್‌ನ ಗ್ರಾಮೀಣ ಭಾಗದಲ್ಲಿ ಸುಗಾ ಅವರ ತಂದೆ ಸ್ಟ್ರಾಬೆರಿ ಕೃಷಿ ಮಾಡುತ್ತಿದ್ದರು. ಕಷ್ಟಪಟ್ಟು ತಮ್ಮ ಪದವಿ ಮುಗಿಸಿದ್ದ ಸುಗಾ ಹೊಸೈ ವಿವಿಯಿಂದ ಕಾನೂನು ಪದವಿ ಪಡೆದಿದ್ರು. ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದಲ್ಲಿ ಹಂತ ಹಂತವಾಗಿ ಮೇಲೆ ಬಂದಿದ್ದ ಯೋಶಿಹಿದೆ ಸುಗಾ ಪಕ್ಷದ ಅಧ್ಯಕ್ಷರಾಗಿ ಬಳಿಕ ಜಪಾನ್ ಪ್ರಧಾನಿಯೂ ಆಗಿದ್ದಾರೆ.

ಸರ್ವಾಧಿಕಾರಿ ಬಗ್ಗೆ ಊಹಾಪೋಹ..!

ಸರ್ವಾಧಿಕಾರಿ ಬಗ್ಗೆ ಊಹಾಪೋಹ..!

ಕಿಮ್ ಬಗ್ಗೆ ಹಲವು ಕಥೆಗಳು ಹುಟ್ಟಿವೆ. ಆತ ಬರೀ ಮಿಸೈಲ್, ಮಿಲಿಟರಿ ಸಾಧನ ಪ್ರದರ್ಶನಕ್ಕೆ ಇಡೋನಲ್ಲ. ಕಿಮ್ ಹಿಂದೆ ಚಿಕ್ಕಪ್ಪನ ತಲೆಯನ್ನೇ ಕತ್ತರಿಸಿ, ಉತ್ತರ ಕೊರಿಯಾ ಅಧಿಕಾರಿಗಳ ಮುಂದೆ ಪ್ರದರ್ಶನಕ್ಕಿಟ್ಟಿದ್ದ ಎಂಬ ಆರೋಪ ಇದೆ. ಅಲ್ಲದೆ ಉ.ಕೊರಿಯಾದಲ್ಲಿ ಕೊರೊನಾ ಕಂಟ್ರೋಲ್‌ಗೆ ತರಲು ಕಿಮ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಕೊರೊನಾ ಸೋಂಕಿತರನ್ನ ಬರ್ಬರವಾಗಿ ಕೊಲೆ ಮಾಡಿದ ಆರೋಪಗಳನ್ನು ಕಿಮ್ ಜಾಂಗ್ ಎದುರಿಸುತ್ತಿದ್ದು, ತನ್ನ ವಿಚಿತ್ರ ವರ್ತನೆಯಿಂದಲೇ ವರ್ಲ್ಡ್ ಫೇಮಸ್.

English summary
Japan PM Yoshihide Suga said he ready for peace talk with North Korea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X