ಚೀನಾ ಜೊತೆ ಹರಿದು ಹೋದ ಸಂಬಂಧ.. ತೇಪೆ ಹಾಕುತ್ತಿದೆ ಅಮೆರಿಕ!
ಚೀನಾ ಮತ್ತು ಅಮೆರಿಕದ ಸಂಬಂಧ ಛಿದ್ರ ಛಿದ್ರವಾಗಿದೆ. ಇವರಿಬ್ಬರ ಜಗಳದಲ್ಲಿ ಜಗತ್ತಿನ ಆರ್ಥಿಕತೆ ಅಪಾಯ ಎದುರಿಸುತ್ತಿದೆ. ಇದನ್ನು ಅರಿತ ಅಮೆರಿಕ, ಚೀನಾ ಜೊತೆ ದೋಸ್ತಿಗೆ ಮುಂದಾಗಿದೆ. ಹೀಗಾಗಿ ಮೇಲಿಂದ ಮೇಲೆ ಅಧಿಕಾರಿಗಳನ್ನು ಕಳುಹಿಸಿಕೊಡುತ್ತಿದೆ. ಕಳೆದ ತಿಂಗಳು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಚೀನಾಗೆ ಭೇಟಿ ನೀಡಿದರು ಯಾಕೋ ಅದು ವರ್ಕೌಟ್ ಆಗಲಿಲ್ಲ. ಹೀಗಾಗಿ ಹಣಕಾಸು ಕಾರ್ಯದರ್ಶಿ ಚೀನಾಗೆ ಎಂಟ್ರಿ ಕೊಟ್ಟಿದ್ದಾರೆ.
ಅಮೆರಿಕದಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಅಂದ್ರೆ ಹಣಕಾಸು ಸಚಿವೆ ಇದ್ದಂತೆ. ಹೀಗೆ ಅಮೆರಿಕ ಹಣಕಾಸು ಕಾರ್ಯದರ್ಶಿ ಜಾನೆಟ್ ಯೆಲೆನ್ ಚೀನಾ ತಲುಪಿದ್ದು, ಅನೇಕ ಮಹತ್ವದ ವಿಚಾರಗಳ ಚರ್ಚೆಗೆ ಮುಂದಾಗಿದ್ದಾರೆ. ಕಳೆದ ತಿಂಗಳು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ ಅಂದುಕೊಂಡ ಮಟ್ಟಿಗೆ ಸಕ್ಸಸ್ ಕಂಡಿಲ್ಲ. ಇದೇ ಕಾರಣಕ್ಕೆ ಅಮೆರಿಕ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಕಳೆದ ಕೆಲ ವರ್ಷಗಳಿಂದ ಅಮೆರಿಕ ಮತ್ತು ಚೀನಾ ಬಡಿದಾಟಕ್ಕೆ ನಿಂತಂತೆ ಕಾಣುತ್ತಿದೆ, ಎರಡೂ ದೇಶಗಳು ಯುದ್ಧಕ್ಕೆ ಸಿದ್ಧವಾದಂತೆ ಜಗಳ ಆಡುತ್ತಿವೆ. ಹೀಗಾಗಿ ಪರಿಸ್ಥಿತಿ ಸುಧಾರಿಸಲು ಸದ್ಯ ಜಾನೆಟ್ ಯೆಲೆನ್ ಅವರನ್ನ ಕಳುಹಿಸಿದೆ ದೊಡ್ಡಣ್ಣ ಅಮೆರಿಕ.

ಜಾನೆಟ್ ಯೆಲೆನ್ ಕೆಲಸ ಏನು?
ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಮೊದಲ 2 ಸ್ಥಾನಗಳಲ್ಲಿ ಅಮೆರಿಕ ಮತ್ತು ಚೀನಾ ಇದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಚೀನಾ ನಡುವೆ ಘರ್ಷಣೆ ನಡೆಯುತ್ತಿದ್ದರೆ ಪರಿಸ್ಥಿತಿಯ ಲಾಭ ಪಡೆಯಲು 3ನೇ ವ್ಯಕ್ತಿ ಪ್ರಯತ್ನಿಸಬಹುದು. ಇದೇ ಅಜೆಂಡಾ ಇಟ್ಟುಕೊಂಡು, ಈ ಸಂದರ್ಭದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರುಪೇರಗಳನ್ನ ಉದಾಹರಣೆ ನೀಡಿ. ಚೀನಾ ಜೊತೆ ಸಂಬಂಧ ವೃದ್ಧಿಸಿಕೊಳ್ಳಲು ಅಮೆರಿಕ ಮುಂದಾಗಿದೆ. ಜಗಳ ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳಲು ಜಾನೆಟ್ ಯೆಲೆನ್ ಈಗ ಚೀನಾ ಜೊತೆ ಮನವಿ ಮಾಡುವ ಸಾಧ್ಯತೆ ಇದೆ.
ಅಮೆರಿಕದ ಪ್ರಯತ್ನ ವರ್ಕೌಟ್ ಆಗುತ್ತಾ?
ಕೆಲಸ ಇದ್ದಾಗ ಯಾರ ಜೊತೆಗೆ ಬೇಕಾದರೂ ಅಮೆರಿಕ ಚೆನ್ನಾಗಿ ಮಾತನಾಡುತ್ತೆ ಅನ್ನೋ ಆರೋಪ ಮೊದಲಿಂದಲೂ ಇದೆ. ಈಗ ಅದೇ ರೀತಿ ಆರೋಪ ಚೀನಾ ವಿಚಾರದಲ್ಲಿ ಕೂಡ ಕೇಳಿಬಂದಿದೆ. ಅಮೆರಿಕ ತನ್ನ ಕೆಲಸ ಸಾಧಿಸಲು ಚೀನಾ ಜೊತೆಗೆ ಮಾತುಕತೆ ಮಾಡುತ್ತಿದೆ ಎಂಬ ಆರೋಪದ ನಡುವೆ, ಚೀನಾ ಜೊತೆ ಮಹತ್ವದ ಚರ್ಚೆಗೆ ಅಮೆರಿಕ ಮುಂದಾಗಿದೆ. ಆದ್ರೆ ಅಮೆರಿಕದ ಮನವಿಗೆ ಅಥವಾ ಒಪ್ಪಂದಗಳಿಗೆ ಚೀನಾ ಒಪ್ಪಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಈ ನಡುವೆ ಜೂನ್ ತಿಂಗಳ ಮಧ್ಯದಲ್ಲಿ ಚೀನಾಗೆ ಭೇಟಿ ನೀಡಿದ್ದ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ ಚರ್ಚೆಯೂ ಅಷ್ಟಾಗಿ ವರ್ಕೌಟ್ ಆದಂತೆ ಕಾಣ್ತಿಲ್ಲ.
ಚೀನಾ & ಅಮೆರಿಕ ಒಂದಾಗುತ್ತವಾ?
ಇದು ಈಗ ಬಿಲಿಯನ್ ಡಾಲರ್ ಪ್ರಶ್ನೆ, ಏಕೆಂದರೆ ಅಮೆರಿಕ ಆರ್ಥಿಕ ಸ್ಥಿತಿ ನಿಂತಿರುವುದೇ ಚೀನಾ ಮೇಲೆ. ಹಾಗೇ ಚೀನಾ ಇಷ್ಟು ದೊಡ್ಡ ಮಟ್ಟಿಗೆ ಆರ್ಥಿಕವಾಗಿ ಬೆಳವಣಿಗೆ ಕಾಣಲು ಅಮೆರಿಕ ಬೆಂಬಲ ಕೂಡ ಇದ್ದೇ ಇದೆ. ಈ ಕಾರಣಕ್ಕೆ ಜಾನೆಟ್ ಯೆಲೆನ್ ಎದುರು ದೊಡ್ಡ ಸವಾಲು ಇದೆ. ಈಗ ಮುನಿಸಿಕೊಂಡಿರುವ ಚೀನಾ ಜೊತೆ ಮಾತನಾಡಿ, ಆರ್ಥಿಕ ಒಪ್ಪಂದ ಮತ್ತು ರಷ್ಯಾ & ಉಕ್ರೇನ್ ವಿಚಾರ ಮಾತನಾಡಬೇಕು. ಅಕಸ್ಮಾತ್ ಚರ್ಚೆ ನಡೆದು ಅದಕ್ಕೆ ಚೀನಾ ಒಪ್ಪಿಕೊಂಡರೆ ಮಾತ್ರ ಅಮೆರಿಕ ಸಕ್ಸಸ್ ಕಾಣಲು ಸಾಧ್ಯ. ಇಲ್ಲವಾದರೆ ಪರದಾಟ ಕಟ್ಟಿಟ್ಟಬುತ್ತಿ. ಹೀಗಾಗಿ ಚೀನಾದ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಜಾನೆಟ್ ಯೆಲೆನ್ ಮಾತುಕತೆ ನಡೆಸಲಿದ್ದಾರೆ. ಆದರೆ ಚೀನಾ ಅಧ್ಯಕ್ಷರನ್ನು ಭೇಟಿ ಆಗುವುದಿಲ್ಲ ಎನ್ನಲಾಗಿದೆ.
ತೈವಾನ್ ಹಾಗೂ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಅಮೆರಿಕ ಎಂಟ್ರಿ ಆದ ಬಳಿಕ ಚೀನಾ ರೊಚ್ಚಿಗೆದ್ದಿದೆ. ಎರಡೂ ದೇಶದ ನಡುವೆ ಯುದ್ಧ ನಡೆಯುತ್ತಾ? ಅನ್ನೋ ಅನುಮಾನ ಕೂಡ ಮೂಡುವಂತಾಗಿತ್ತು. ಅಮೆರಿಕ & ಚೀನಾ ಎರಡೂ ಬಲಿಷ್ಠ ರಾಷ್ಟ್ರಗಳು. ಜಗತ್ತಿನ ನಂಬರ್ 1 ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ದೇಶಗಳು. ಸ್ಥಿತಿ ಹೀಗಿದ್ದಾಗ ಇಬ್ಬರ ನಡುವೆ ಕಿತ್ತಾಟ ಬಲು ಜೋರಾಗಿ ನಡೆಯುತ್ತಿದೆ. ಹೀಗೆ ವಿಶ್ವದ 2 ದೊಡ್ಡ ಆರ್ಥಿಕ ದೇಶಗಳಾದ ಅಮೆರಿಕ & ಚೀನಾ ಮಧ್ಯೆ ನಿರಂತರ ಸಂಘರ್ಷ ಏರ್ಪಟ್ಟಿದೆ. ಹೀಗಾಗಿ ಅಮೆರಿಕ ತೇಪೆ ಹಾಕುವ ಕೆಲ ಮಾಡ್ತಿದೆ.












Click it and Unblock the Notifications