ನರೇಂದ್ರ ಮೋದಿ ಆಹ್ವಾನಕ್ಕೆ ಟ್ವೀಟ್ ನಲ್ಲಿ ಟ್ರಂಪ್ ಪುತ್ರಿಯಿಂದ ಧನ್ಯವಾದ

ವಾಷಿಂಗ್ಟನ್, ಜೂನ್ 27: ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ನೇತೃತ್ವದ ಉದ್ಯಮಿಗಳ ತಂಡದ ಜತೆ ಭಾರತಕ್ಕೆ ಬರುವಂತೆ ಟ್ರಂಪ್ ಪುತ್ರಿಗೆ ಆಹ್ವಾನ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಮೋದಿಗೆ ಧನ್ಯವಾದ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ 35ರ ಹರೆಯದ ಇವಾಂಕಾ ಟ್ರಂಪ್, "ಜಾಗತಿಕ ಉದ್ಯಮಶೀಲ ಶೃಂಗಕ್ಕೆ ಅಮೆರಿಕಾದ ನಿಯೋಗವನ್ನು ಮುನ್ನಡೆಸಿ ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ," ಎಂದು ಟ್ವೀಟ್ ಮಾಡಿದ್ದಾರೆ.

Ivanka Trump, thanked PM Narendra Modi for his invitation to come India

ಇದಕ್ಕೂ ಮೊದಲು ಜಂಟಿ ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, "ನಾನು ಆಕೆ (ಇವಾಂಕಾ ಟ್ರಂಪ್) ಯನ್ನು ಜಾಗತಿಕ ಉದ್ಯಮಶೀಲ ಶೃಂಗಕ್ಕೆ ಅಮೆರಿಕಾದ ನಿಯೋಗವನ್ನು ಮುನ್ನಡೆಸಿ ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದೆ," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "..ಆಕೆ ಆಹ್ವಾನವನ್ನು ಒಪ್ಪಿಕೊಳ್ಳುತ್ತಾಳೆ ಎಂದು ಭಾವಿಸಿದ್ದೇನೆ," ಎಂದು ಹೇಳಿದ್ದರು.

ಭಾರತಕ್ಕೆ ಬರುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದ್ದರು.

ಇದೀಗ ಟ್ರಂಪ್ ಮಗಳು ಇವಾಂಕಾ ಟ್ರಂಪ್ ಉದ್ಯಮಶೀಲತೆ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ಮಾಜಿ ಮಾಡೆಲ್ ಮತ್ತು ಉದ್ಯಮಿ ಇವಾಂಕ ಟ್ರಂಪ್ ತಂದೆ ಡೊನಾಲ್ಡ್ ಟ್ರಂಪ್ ಗೆ ಸಲಹೆಗಾರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+