Coronavirus: ಹಡಗಿನಲ್ಲಿರುವ ಪ್ರಜೆಗಳ ಕರೆಸಿಕೊಳ್ಳಲು ವಿಶೇಷ ವಿಮಾನ

ಬೀಜಿಂಗ್, ಫೆಬ್ರವರಿ.16: ಜಪಾನ್ ನಲ್ಲಿ ಇರುವ ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ ಸಿಲುಕಿಕೊಂಡಿರುವ ತನ್ನ 35 ಮಂದಿ ಪ್ರಜೆಗಳನ್ನು ಕರೆಸಿಕೊಳ್ಳಲು ಇಟಲಿ ಸರ್ಕಾರವು ವಿಶೇಷ ವಿಮಾನ ಕಳುಹಿಸಿ ಕೊಡಲಾಗುವುದು ಹೇಳಿದೆ.

ಶನಿವಾರವೇ ಇಟಲಿ ಸರ್ಕಾರ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕಾಗಿ ವಿಶೇಷ ವಿಮಾನವನ್ನು ಕಳುಹಿಸಿ ಕೊಟ್ಟಿದೆ ಎಂದು ಇಟಲಿ ವಿದೇಶಾಂಗ ವ್ಯವಹಾರಗಳ ಸಚಿವ ಲ್ಯೂಗಿ-ಡಿ-ಮೈಯೊ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ ಇರುವ 3,711 ಪ್ರಯಾಣಿಕರ ಪೈಕಿ 355 ಪ್ರಯಾಣಿಕರಿಗೆ ಸೋಂಕು ತಗಲಿರುವ ಬಗ್ಗೆ ಇದುವರೆಗಿನ ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ ಎಂದು ಜಪಾನ್ ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Italy To Evacuate 35 Nationals From Diamond Princess Ship

ಅಮೆರಿಕಾ, ಹಾಂಗ್ ಕಾಂಗ್ ನಿಂದಲೂ ವಿಮಾನ ವ್ಯವಸ್ಥೆ:

ಇಟಲಿ ಅಷ್ಟೇ ಅಲ್ಲದೇ, ಯುನೈಟೆಡ್ ಸ್ಟೇಟ್ಸ್ ಮತ್ತು ಹಾಂಗ್ ಕಾಂಗ್ ಸರ್ಕಾರಗಳು ಕೂಡಾ ತಮ್ಮ ಪ್ರಜೆಗಳ ರಕ್ಷಣೆಗೆ ಮುಂದಾಗಿವೆ. ಜಪಾನ್ ಹಡಗಿನಲ್ಲಿ ಸಿಲುಕಿರುವ ಪ್ರಜೆಗಳನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳುವುದಕ್ಕಾಗಿ ವಿಶೇಷ ವಿಮಾನಗಳನ್ನು ಕಳುಹಿಸಿ ಕೊಡುವುದಾಗಿ ಈಗಾಗಲೇ ತಿಳಿಸಿವೆ.

ಕಳೆದ ಪೆಬ್ರವರಿ.03ರಂದು ಡೈಮೆಂಡ್ ಪ್ರಿನ್ಸ್ ಹಡಗಿನಲ್ಲಿದ್ದ ಬ್ಯಾಂಕಾಕ್ ಪ್ರಜೆಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅಂದು ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಸೋಂಕು ಇರುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಪಾನ್ ಸರ್ಕಾರವು, ದೇಶವನ್ನು ಪ್ರವೇಶಿಸಲು ಹಡಗಿಗೆ ನಿರ್ಬಂಧ ವಿಧಿಸಲಾಯಿತು. ಫೆಬ್ರವರಿ.19ರವರೆಗೂ ಪ್ರಯಾಣಿಕರನ್ನು ಹಡಗಿನಲ್ಲೇ ನಿರ್ಬಂಧಿಸುವಂತೆ ಸೂಚನೆ ನೀಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+