ಇಟಲಿಯಲ್ಲಿ ಕೊರೊನಾ ಸಂಭಾವ್ಯ ಲಸಿಕೆ ಪ್ರಯೋಗ ಆರಂಭ
ರೋಮ್, ಆಗಸ್ಟ್ 24: ಇಟಲಿಯಲ್ಲಿ ಸೋಮವಾರದಿಂದ ಕೊವಿಡ್ 19 ಲಸಿಕೆ ಪ್ರಯೋಗ ಆರಂಭವಾಗಿದೆ.
Recommended Video
ಕೊರೊನಾ ಸೋಂಕಿನಿಂದ ಹೆಚ್ಚು ಬಾಧಿತವಾಗಿರುವ ರಾಷ್ಟ್ರಗಳಲ್ಲಿ ಇಟಲಿ ಕೂಡ ಒಂದು. ಜಿಆರ್‌ಎಡಿ ಕೋವ್ 2 ಹೆಸರಿನ ಸಂಭಾವ್ಯ ಲಸಿಕೆಯನ್ನು ರೋಮ್ ಮೂಲದ ರಿಥೆರಾ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಈ ಲಸಿಕೆಯನ್ನು ಮಿಲಾನ್‌ನ ಸುತ್ತಲಿನ ಪ್ರದೇಶಗಳಲ್ಲಿರುವ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಸಕಾರಾತ್ಮಕ ಪರಿಣಾಮ, ಫಲಿತಾಂಶಗಳು ಲಭ್ಯವಾಗಿವೆ.
ಈ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಹೆಚ್ಚು ಪರಿಣತಿ ಪಡೆದಿರುವ ರೋಮ್‌ನ ಲಝಾರೋ ಸ್ಪಲ್ಲಾಂಝನಿ ಇನ್‌ಸ್ಟಿಟ್ಯೂಟ್ ಮಾನವರ ಮೇಲೆ ಪ್ರಯೋಗ ನಡೆಸಲು ಮುಂದಾಗಿದೆ. ಮುಂದಿನ ವಾರ 90 ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗುತ್ತದೆ. ಮುಂದಿನ ವರ್ಷದ ಮಳೆಗಾಲದ ಹೊತ್ತಿಗೆ ಅಧಿಕೃತವಾಗಿ ಲಸಿಕೆ ಲಭ್ಯವಾಗುವ ವಿಶ್ವಾಸವಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಅತಿ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳಿರುವ ಮೆಕ್ಸಿಕೊ ಮತ್ತು ಬ್ರೆಜಿಲ್‌ನಲ್ಲಿ ಎರಡನೇ ಹಂತದ ಲಸಿಕೆ ಪ್ರಯೋಗವನ್ನು ನಡೆಸಲಾಗುತ್ತದೆ.
ಈ ಕುರಿತು ಆರೋಗ್ಯ ನಿರ್ದೇಶಕ ಫ್ರಾನ್ಸಿಸ್ಕೋ ವೈಯಾ ಮಾತನಾಡಿ, ಕೊರೊನಾ ಲಸಿಕೆ ಪ್ರಯೋಗದ ಬಳಿಕ ವ್ಯಕ್ತಿಯನ್ನು ತಕ್ಷಣವೇ ಮನೆಗೆ ಕಳುಹಿಸುವುದಿಲ್ಲ, ನಾಲ್ಕು ತಾಸುಗಳ ಕಾಲ ಅವರ ಮೇಲೆ ನಿಗಾ ಇಡಲಾಗುತ್ತದೆ. ಬಳಿಕ 12 ವಾರಗಳ ಕಾಲ ಆ ವ್ಯಕ್ತಿಯ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ.
ಏನಾದರೂ ದುಷ್ಪರಿಣಾಮ ಉಂಟಾದರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾದರೆ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತದೆ.












Click it and Unblock the Notifications