Israel: ಗಾಜಾ ನಗರದ ಮತ್ತೊಂದು ಭಾಗದಲ್ಲೂ ಮಾರಣಾಂತಿಕ ದಾಳಿ ಆರಂಭಿಸಿದ ಇಸ್ರೇಲ್
ಗಾಜಾ ಪಟ್ಟಿ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಮತ್ತೊಂದು ತಿರುವು ಪಡೆದು ಮತ್ತಷ್ಟು ಘೋರವಾಗುತ್ತಿದೆ. ಇಸ್ರೇಲ್ ಸೇನೆ ಈಗ ಗಜಾದ ದೈರ್ ಅಲ್-ಬಲಾಹ್ ಪ್ರದೇಶದಲ್ಲಿ ಮೊದಲ ಬಾರಿ ವಿನಾಶಕಾರಿ ದಾಳಿ ಶುರು ಮಾಡಿದೆ. ಈಗಾಗಲೇ ಭಾಗಶಃ ಗಾಜಾ ಪಟ್ಟಿಯನ್ನು ನಾಶ ಮಾಡಿರುವ ಇಸ್ರೇಲ್ ಸೇನೆ ಇದೀಗ ಬಾಕಿ ಉಳಿದಿರುವ ಅಲ್-ಬಲಾಹ್ ಪ್ರದೇಶಕ್ಕೆ ಕೂಡ ನುಗ್ಗಿದ್ದು, ಭಾರಿ ಘೋರ ದಾಳಿ ಶುರು ಮಾಡಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಗಾಜಾ ಪಟ್ಟಿಯ ಅಲ್-ಬಲಾಹ್ ಪ್ರದೇಶದ ಮೇಲೆ ಇಸ್ರೇಲ್ ದಾಳಿ ಆರಂಭ ಮಾಡಿದ ನಂತರ ಜನ ಕೂಡ ಓಡಿ ಹೋಗುತ್ತಿದ್ರೆ, ಜೀವ ಉಳಿಸಿಕೊಳ್ಳಲು ಹರಸಾಹಸ ಮುಂದುವರಿದಿದೆ. ಸುಮಾರು 59 ಸಾವಿರಕ್ಕೂ ಹೆಚ್ಚು ಜನರು ಈವರೆಗೂ ಗಾಜಾ ಪಟ್ಟಿಯಲ್ಲಿ ಜೀವ ಬಿಟ್ಟಿದ್ದಾರೆ. ಇದನ್ನು ಹೊರತುಪಡಿಸಿ ಹತ್ತಾರು ಸಾವಿರ ಜನ ಗಾಯಗೊಂಡು ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ. ಇಷ್ಟಾದರೂ ಯುದ್ಧ ಮಾತ್ರ ನಿಂತಿಲ್ಲ, ಹೀಗಿದ್ದಾಗ ಮತ್ತೆ ಹೊಸ ಪ್ರದೇಶದ ಮೇಲೆ ಕೂಡ ಇಸ್ರೇಲ್ ದಾಳಿ ಶುರು ಮಾಡಿದೆ. ವಾಯು ದಾಳಿ & ಭೂದಾಳಿ ಮೂಲಕ ಇದೀಗ ಗಾಜಾ ಪಟ್ಟಿಯ ಅಲ್-ಬಲಾಹ್ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಇಸ್ರೇಲ್ ಸೇನೆ ಮುಂದಾಗಿದೆ.

ಯುದ್ಧ ನಿಲ್ಲಿಸಲು ಆಗುತ್ತಿಲ್ಲ ಏಕೆ?
ಇರಾನ್ ಜೊತೆಗೆ ಕೂಡ ಯುದ್ಧ ಶುರು ಮಾಡಿದ್ದ ಇಸ್ರೇಲ್ ಸೇನೆ ಆ ನಂತರ ದಿಢೀರ್ ಯುದ್ಧ ನಿಲ್ಲಿಸಿ & ಶಾಂತಿ ಒಪ್ಪಂದಕ್ಕೆ ಮುಂದಾಗಿತ್ತು. ಆ ನಂತರ ಮಧ್ಯಪ್ರಾಚ್ಯ ಭಾಗದಲ್ಲಿ ಶಾಂತಿ ನೆಲಸಬಹುದು ಎನ್ನುವ ನಿರೀಕ್ಷೆ ಕೂಡ ದಟ್ಟವಾಗಿತ್ತು. ಮಧ್ಯಪ್ರಾಚ್ಯ ಭಾಗದಲ್ಲಿ ಕಳೆದ ಒಂದೂವರೆ ವರ್ಷದಿಂದ ಸಾಲು, ಸಾಲು ಯುದ್ಧಗಳು ಶುರುವಾಗಿ ಟೆನ್ಷನ್ ಕೂಡ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಶಾಂತಿ ನೆಲೆಸಿದರೆ ಭವಿಷ್ಯದಲ್ಲಿ ಈ ಭಾಗದಲ್ಲಿ ಸಮಸ್ಯೆ ಇರುವುದಿಲ್ಲ ಎಂಬ ಲೆಕ್ಕಾಚಾರ ಕೂಡ ಹಾಕಲಾಗಿತ್ತು. ಅದೇ ರೀತಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆ ನಿಲ್ಲಿಸುವ ನಿರೀಕ್ಷೆ ಇತ್ತು. ಆದರೆ ಇದೀಗ ಎಲ್ಲವೂ ಉಲ್ಟಾ ಆಗಿ ಹೋಗಿದೆ.
ರಾತ್ರಿ ಆಕಾಶದಲ್ಲಿ ಕ್ಷಿಪಣಿಗಳ ಆರ್ಭಟ
ಇಸ್ರೇಲ್ ಸೇನೆ ಇದೀಗ ಗಾಜಾ ಪಟ್ಟಿಯ ಕೊನೆಯ ಪ್ರದೇಶವನ್ನು ಕೂಡ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು, ಈ ಮೂಲಕ ಇಡೀ ಗಾಜಾ ಪಟ್ಟಿಯಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ದಿಢೀರ್ ಇಸ್ರೇಲ್ ಸೇನೆ ನಡೆಸುತ್ತಿರುವ ಭೀಕರ ದಾಳಿಯಲ್ಲಿ ಈಗ ಸುಮಾರು 65 ಜನರು ಬಲಿಯಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಈಗ ಆರೋಪ ಮಾಡುತ್ತಿದ್ದಾರೆ. ಇದು ಸಾಲದು ಎನ್ನುವಂತೆ ಇಸ್ರೇಲ್ ಸೇನೆ ಇನ್ನಷ್ಟು ಘೋರವಾಗಿ ವಾಯು ದಾಳಿ ಶುರು ಮಾಡುವ ಭಯ ಆವರಿಸಿದ್ದು, ಈಗಾಗಲೇ ಜನರು ಕೂಡ ಕ್ಷಿಪಣಿ & ಟ್ಯಾಂಕರ್ ದಾಳಿಗೆ ಹೆದರಿ ಓಡಿ ಹೋಗುತ್ತಿದ್ದಾರೆ.












Click it and Unblock the Notifications