ಉಗ್ರರ ವಿರುದ್ಧ ಗುಡುಗಿದ ಇಸ್ರೇಲ್.. ನಲುಗಿದ ಗಾಜಾ ಪಟ್ಟಿ..

ಇಸ್ರೇಲ್: ತನ್ನ ನೆಲದ ಮೇಲೆ ದಾಳಿ ನಡೆದರೆ ಉಗ್ರರನ್ನು ಸರ್ವನಾಶ ಮಾಡದೆ ಬಿಡುವುದಿಲ್ಲ ಎಂದು ಪಣತೊಟ್ಟಿರುವ ಇಸ್ರೇಲ್, ಮತ್ತೆ ಉಗ್ರರ ನೆಲೆಗಳನ್ನೇ ಗುರಿಯಾಗಿಸಿ ಭರ್ಜರಿ ರಾಕೆಟ್ ದಾಳಿ ನಡೆಸಿದೆ. ಪ್ಯಾಲೆಸ್ಟೀನ್ ಸೇರಿದಂತೆ ಗಾಜಾ ಪಟ್ಟಿ ಹಾಗೂ ಲೆಬನಾನ್ ಗಡಿ ಭಾಗದಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿದ ಕಡೆ ಗುರಿಯಿಟ್ಟು ರಾಕೆಟ್ ಉಡಾಯಿಸಲಾಗಿದೆ. ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕೃತವಾಗಿ ಹೊರಬಿದ್ದಿಲ್ಲ.

ಕೆಲದಿನದಿಂದ ಇಸ್ರೇಲ್ ಗಡಿಯಲ್ಲಿ ಎಲ್ಲವೂ ಸರಿಯಿಲ್ಲ. ಅದರಲ್ಲೂ ಜೆರುಸಲೇಂ ಓಲ್ಡ್ ಸಿಟಿಯ ಭಾಗದಲ್ಲಿ ಪ್ರಾರ್ಥನೆ ನಡೆಸುತ್ತಿದ್ದವರ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ ಎಂಬ ಮಾಹಿತಿ ಹೊರಬಿದ್ದ ನಂತರ ಹಿಂಸಾಚಾರ ತೀವ್ರವಾಗಿದೆ. ಇದೇ ಸಮಯವನ್ನು ತಮ್ಮ ಲಾಭಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದ್ದ ಉಗ್ರರಿಗೆ ಇಸ್ರೇಲ್ ಸೇನೆ ಬಿಸಿ ಮುಟ್ಟಿಸಿದೆ.

Israeli forces targets Hamas terrorists and launches air strikes on Gaza Strip, Lebanon

ಉಗ್ರರ ನೆಲೆ ಉಡೀಸ್: ಒಂದು ಕಡೆ ಇಸ್ರೇಲ್ ನೆಲಕ್ಕೆ ರಾಕೆಟ್ ಹಾರಿಸಿ ತಣ್ಣಗಿದ್ದ ಉಗ್ರರನ್ನು ಹುಡುಕಿ, ಹುಡುಕಿ ಕೊಲ್ಲುತ್ತಿದೆ ಇಸ್ರೇಲ್. ಹೀಗೆ ಹತ್ತಾರು ರಾಕೆಟ್‌ಗಳನ್ನು ಹಾರಿಸಿ ಉಗ್ರರು ಅಡಗಿರುವ ಜಾಗಗಳಲ್ಲಿ ಬ್ಲಾಸ್ಟ್ ಮಾಡಿಸಲಾಗಿದೆ. ಗಾಜಾ ಪಟ್ಟಿಯಲ್ಲಿರುವ ಕಟ್ಟಡಗಳು ಇಸ್ರೇಲ್ ದಾಳಿಯಿಂದ ನೆಲಕ್ಕೆ ಉರುಳಿದ್ದು, ಇಸ್ರೇಲ್ ಪ್ರಧಾನಿ ಉಗ್ರರಿಗೆ ಎಚ್ಚರಿಕೆ ನೀಡಿದರೆ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

ಕಣ್ಣೆದುರೇ ಉಡೀಸ್: ಒಂದು ಕಡೆ ಇಸ್ರೇಲ್ ದಾಳಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದರೆ, ಮತ್ತೊಂದು ಕಡೆ ಪತ್ರಕರ್ತನ ಕರ್ತವ್ಯ ಪ್ರಜ್ಞೆ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತನ್ನ ಎದುರಲ್ಲೇ ಸಾಲು ಸಾಲು ಮಿಸೈಲ್‌ಗಳು ಬಂದು ಅಪ್ಪಳಿಸುತ್ತಿದ್ದರೂ ಒಂಚೂರು ಭಯಪಡದೆ, ನೇರವಾಗಿ ದಾಳಿಯ ಚಿತ್ರೀಕರಣ ಮಾಡಿದ್ದಾನೆ ಪತ್ರಕರ್ತ. ಅದರಲ್ಲೂ ಇಸ್ರೇಲ್ ದಾಳಿಯ ಪರಿಣಾಮ ಕಟ್ಟಡವೊಂದು ಕ್ಷಣಮಾತ್ರದಲ್ಲಿ ನೆಲಕ್ಕೆ ಉರುಳುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೇ ಪತ್ರಕರ್ತನ ಧೈರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ತಣ್ಣಗಾಗಿಲ್ಲ ಪರಿಸ್ಥಿತಿ: ಅಂದಹಾಗೆ ಜೆರುಸಲೇಂ ಓಲ್ಡ್ ಸಿಟಿಯ ಅಲ್-ಅಕ್ಸಾ ಮಸೀದಿ ಆವರಣದಲ್ಲಿ ಯಾವಾಗ ಇಸ್ರೇಲ್ ಸೇನೆ ಕಾರ್ಯಾಚರಣೆ ಆರಂಭಿಸಿತೋ, ಆ ಬಳಿಕ ನಡೆದಿದ್ದೆಲ್ಲಾ ಬರೀ ಹಿಂಸೆ.. ಹಿಂಸೆ.. ಹಿಂಸೆ.. ಕಳೆದ 2-3 ದಿನದಿಂದಲೂ ಈ ಭಾಗ ಹೊತ್ತಿಉರಿಯುತ್ತಿದೆ. ಇನ್ನು ಇಸ್ರೇಲ್ ಸೇನೆ ಕಾರ್ಯಾಚರಣೆ ವಿರೋಧಿಸಿ ಜನ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

Israeli forces targets Hamas terrorists and launches air strikes on Gaza Strip, Lebanon

ಕಠಿಣ ಕ್ರಮ: ಇಸ್ರೇಲ್ ಸೇನೆಯ ಮೇಲೆ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಇಸ್ರೇಲ್ ಪಡೆಗಳು ಹರಸಾಹಸ ಪಡುತ್ತಿವೆ. ಇನ್ನೊಂದು ಕಡೆ ಅಂತಾರಾಷ್ಟ್ರೀಯ ಸಮುದಾಯ ಕೂಡ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೀಗಾಗಿ ಇಸ್ರೇಲ್ ಸೇನೆಗೆ ಜೆರುಸಲೇಂ ಓಲ್ಡ್ ಸಿಟಿಯ ಹಿಂಸಾಚಾರ ನಿಯಂತ್ರಣ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಇಸ್ರೇಲ್ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಒಂದು ಕಡೆ ತನ್ನ ದೇಶದ ಮೇಲೆ ದಾಳಿ ಮಾಡಿರುವ ಹಮಾಸ್ ಉಗ್ರರ ಹೆಡೆಮುರಿ ಕಟ್ಟಲು ಇಸ್ರೇಲ್ ನಿರ್ಧಾರ ಮಾಡಿದೆ. ಇನ್ನೊಂದು ಕಡೆ ಜೆರುಸಲೇಂ ಓಲ್ಡ್ ಸಿಟಿ ಹೊತ್ತಿ ಉರಿಯುತ್ತಿದ್ದು, ಅಲ್ಲಿನ ಗಲಭೆಯ ಭೀಕರ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಂಜಾನ್ ಹೊತ್ತಲ್ಲೇ ಸ್ಥಳೀಯರಿಗೆ ಮತ್ತೊಂದು ಅಡ್ಡಿ ಎದುರಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಇಸ್ರೇಲ್ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+