Gaza War: ಯುದ್ಧ.. ಯುದ್ಧ.. ಯುದ್ಧ.. ಇಸ್ರೇಲ್ ವಿರುದ್ಧ ತಿರುಗಿಬಿದ್ದ ಕೆನಡಾ & ಫ್ರಾನ್ಸ್!

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸಾಕಷ್ಟು ನಿಯಮ ಮೀರಿದ ವರ್ತನೆ ತೋರಿಸುತ್ತಿದೆ ಅಂತಾನೇ ಇದೀಗ ಆರೋಪ ಮಾಡಲಾಗುತ್ತಿದೆ. ಅದರಲ್ಲೂ ಗಾಜಾ ನೆಲದಲ್ಲಿ ಈವರೆಗೂ ಸಾಕಷ್ಟು ಜನ ಬಲಿಯಾಗಿದ್ದು, ಅರ್ಧ ಲಕ್ಷ ಜೀವಗಳು ಬಲಿಯಾಗಿರುವ ಆರೋಪ ಇದೆ. ಹೀಗಿದ್ದಾಗ ಕೂಡ ಯುದ್ಧ ನಿಲ್ಲಿಸಲು ಇಸ್ರೇಲ್ ಮನಸ್ಸು ಮಾಡುತ್ತಿಲ್ಲ, ಹಾಗೇ ಮತ್ತೊಂದು ಕಡೆ ಜಾಗತಿಕವಾಗಿ ಕೂಡ ಈ ಯುದ್ಧದ ಬಗ್ಗೆ ಆಕ್ರೋಶ ಮೊಳಗಿದೆ. ಇಂತಹ ಸಮಯದಲ್ಲೇ ಕೆನಡಾ ಜೊತೆಗೆ ಬ್ರಿಟನ್ & ಫ್ರಾನ್ಸ್ ಕೂಡ ಇಸ್ರೇಲ್‌ಗೆ ಎಚ್ಚರಿಕೆ ಸಂದೇಶ ರವಾನಿಸಿವೆ.

ಮಧ್ಯಪ್ರಾಚ್ಯದ ಪರಿಸ್ಥಿತಿ ಇದೀಗ ಒಡೆದ ಮನೆಯಾಗಿದ್ದು, ಯಾವಾಗ ಬೇಕಾದ್ರೂ ಇಲ್ಲಿನ ಕಿಚ್ಚು ಮತ್ತೊಂದು ಮಹಾಯುದ್ಧಕ್ಕೆ ನಾಂದಿ ಹಾಡುವ ಅಪಾಯ ಕೂಡ ಇದೀಗ ಕಾಡುತ್ತಲೇ ಇದೆ. ಹಮಾಸ್ ಇಸ್ರೇಲ್ ಮೇಲೆ ಮಿಸೈಲ್ & ರಾಕೆಟ್ ಮೂಲಕ ದಾಳಿ ಮಾಡಿ, ಆ ನಂತರ ನೇರವಾಗಿ ಇಸ್ರೇಲ್ ಒಳಗೆ ನುಗ್ಗಿ ನೂರಾರು ಪ್ರಜೆಗಳನ್ನ ಒತ್ತೆಯಾಳು ರೂಪದಲ್ಲಿ ಕಿಡ್ನಾಪ್ ಮಾಡಿದ್ದರೆಂಬ ಆರೋಪ ಕೇಳಿ ಬಂದಿತ್ತು. 2023 ಅಕ್ಟೋಬರ್ ಮೊದಲ ವಾರದಲ್ಲಿ ನಡೆದಿದ್ದ ಘಟನೆ ನಂತರ ಇಡೀ ಮಧ್ಯಪ್ರಾಚ್ಯ ಅಲ್ಲಾಡಿ ಹೋಗಿದೆ.

Israel Warned By UK And France Along With Canada For Allegedly Continues Offensive In Gaza

ಇಸ್ರೇಲ್‌ಗೆ ವಾರ್ನಿಂಗ್ ಕೊಟ್ಟ ಕೆನಡಾ?

ಅಂದಹಾಗೆ ಗಾಜಾ ಪಟ್ಟಿ ಪ್ರದೇಶದಲ್ಲಿ ತಕ್ಷಣ ಮಿಲಿಟರಿ ದಾಳಿ ನಿಲ್ಲಿಸದೇ ಇದ್ದರೆ ಇಸ್ರೇಲ್ ವಿರುದ್ಧ ಕ್ರಮ ಗ್ಯಾರಂಟಿ ಅಂತಾ ಗುಡುಗಿದೆ ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ. ಹಾಗೇ ಇದೇ ವೇಳೆ ನೆರವು ನಿರ್ಬಂಧಗಳನ್ನು ತೆಗೆದುಹಾಕಿ ಎಂಬ ಆಗ್ರಹ ಕೂಡ ಮಾಡಲಾಗಿದೆ. ಇಸ್ರೇಲ್ ಈ ಆದೇಶ ಪಾಲನೆ ಮಾಡದೇ ಇದ್ದರೆ ಇಸ್ರೇಲ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಇದೀಗ ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ನಾಯಕರು ವಾರ್ನಿಂಗ್ ಕೊಟ್ಟಿದ್ದಾರೆ. ಒಂದೂವರೆ ವರ್ಷದಿಂದಲೂ ಈ ಯುದ್ಧ ನಡೆಯುತ್ತಿದ್ದು, ಈಗಿನ ಪರಿಸ್ಥಿತಿಯಲ್ಲಿ ಯುದ್ಧ ನಿಲ್ಲಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಗಾಜಾ ಪಟ್ಟಿ ಇಸ್ರೇಲ್ ವಶಕ್ಕೆ?

ಕಳೆದ ಒಂದೂವರೆ ವರ್ಷದಿಂದಲು ಹಮಾಸ್ ಬಂಡುಕೋರರ ವಿರುದ್ಧ, ಇಸ್ರೇಲ್ ಸಮರ ಸಾರಿ ದಾಳಿ ನಡೆಸುತ್ತಿದೆ. ಹೀಗಿದ್ದಾಗಲೇ ದಿಢೀರ್ ಅತ್ತ ಕೆನಡಾ & ಫ್ರಾನ್ಸ್ ಜೊತೆಗೆ ಕೆನಡಾ ಕೂಡ ರೊಚ್ಚಿಗೆದ್ದಿದೆ. ಹಾಗೇ ಎಚ್ಚರಿಕೆಯ ಸಂದೇಶವು ಕೂಡ ರವಾನೆ ಆಗಿದ್ದು, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಮತ್ತಷ್ಟು ಒತ್ತಡ ಹೇರುವ ಪ್ರಯತ್ನ ಶುರುವಾಗಿದೆ ಎನ್ನುವ ಮಾತು ಇದೀಗ ಕೇಳಿ ಬಂದಿದೆ. ಆದರೆ ಈ ಎಚ್ಚರಿಕೆಗೆ ಇಸ್ರೇಲ್ ಯಾವ ರೀತಿಯ ರಿಯಾಕ್ಷನ್ ನೀಡುತ್ತೆ? ಅನ್ನೋ ಕುತೂಹಲ ಮೂಡಿದೆ. ಇಸ್ರೇಲ್ ಇಡೀ ಗಾಜಾ ಪಟ್ಟಿಯನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ ಬೆನ್ನಲ್ಲೇ ಈ ರೀತಿಯಾಗಿ ಕೆನಡಾ ಸೇರಿದಂತೆ ಮೂರು ಶಕ್ತಿಶಾಲಿ ದೇಶಗಳು ಎಚ್ಚರಿಕೆ ಕೊಟ್ಟಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+