ಇಸ್ರೇಲ್ ಕಂಡು ಹಿಡಿದ ಹೊಸ ಕೊರೊನಾ ವೈರಸ್ ಟೆಸ್ಟ್ ಕಿಟ್ ವಿಶೇಷವೇನು?
ಇಸ್ರೇಲ್, ಮಾರ್ಚ್ 22: ಒಂದೇ ಬಾರಿಗೆ 12ಕ್ಕೂ ಕೊರೊನಾ ವೈರಸ್ ಸೋಂಕಿತರನ್ನು ತಪಾಸಣೆ ಮಾಡುವ ಕಿಟ್ ಒಂದನ್ನು ಇಸ್ರೇಲ್ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ.
ಇಸ್ರೇಲ್‌ನಲ್ಲಿ ಈ ಪ್ರಯೋಗವನ್ನು ನಡೆಸಿದ್ದು ಯಶಸ್ಸನ್ನು ಕಂಡುಕೊಂಡಿದ್ದಾರೆ. ಇಸ್ರೇಲ್‌ನ ಟೆಕ್ನಿಯನ್ ಯೂನಿವರ್ಸಿಟಿ ಮತ್ತು ರಂಬನ್ ಹೆಲ್ತ್ ಕೇರ್ ಕ್ಯಾಂಪಸ್ ಈ ಹೊಸ ಪ್ರಯೋಗವನ್ನು ಮಾಡಿದೆ.
ರೋಗದ ಗುಣಲಕ್ಷಣ ಹೊಂದಿರುವವರನ್ನು ಮಾತ್ರವಲ್ಲದೆ ಒಂದೇ ಬಾರಿಗೆ ಹನ್ನೆರೆಡು ರೀತಿಯ ತಪಾಸಣೆಯನ್ನೂ ಮಾಡಲಾಗುತ್ತದೆ.

ವಿಶ್ವವೇ ಭಯದಲ್ಲಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಈ ಪ್ರಯೋಗ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ ಈ ಸಂಶೋಧನೆ ಮುಂದಿನ ಮೂರ್ನಾಲ್ಕು ದಿನದ ಒಳಗೆ ಮುಗಿಯುತ್ತದೆ ಎಂದು ಪ್ರೊ. ಉರಿ ಸಿವನ್ ತಿಳಿಸಿದ್ದಾರೆ.
ಇಸ್ರೇಲ್‌ನಲ್ಲಿ ಈಗ ಸಾಮಾನ್ಯವಾದ ಪಿಸಿಆರ್ ಮೆಥೆಡ್‌ನಲ್ಲಿ ತಪಾಸಣೆ ಮಾಡಲಾಗುತ್ತಿದೆ. ಹೀಗೆ ದಿನಕ್ಕೆ 1200 ಮಂದಿಯನ್ನು ತಪಾಸಣೆ ಮಾಡಬಹುದಾಗಿದೆ.ಹಾಗೆಯೇ ಪ್ರತಿಯೊಬ್ಬರನ್ನು ಬೇರೆ ಬೇರೆಯಾಗಿ ಪರೀಕ್ಷೆ ಮಾಡಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಗಂಟೆಗಳ ಸಮಯಾವಕಾಶವೂ ಬೇಕಾಗುತ್ತದೆ.
ಈಗ ಈ ಮಲಿಕ್ಯೂಲರ್ ಟೆಸ್ಟ್ ಒಂದೇ ಸಲಕ್ಕೆ 32,64 ಮಂದಿಯ ರಕ್ತ ಅಥವಾ ಕಫದ ಸ್ಯಾಂಪಲ್‌ಗಳನ್ನು ಪಡೆಯಬಹುದಾಗಿದೆ. ಒಂದೊಮ್ಮೆ ಅದರಲ್ಲಿ ಒಬ್ಬರಿಗೆ ಕೊರೊನಾ ಬಂದಿರುವುದು ಪತ್ತೆಯಾದರೂ ಕೂಡ ಬೇರೆ ಬೇರೆಯಾಗಿ ಪರೀಕ್ಷೆ ಮಾಡಲಾಗುತ್ತದೆ.












Click it and Unblock the Notifications