Get Updates
Get notified of breaking news, exclusive insights, and must-see stories!

ದಕ್ಷಿಣ ಗಾಜಾದ ರಫಾ ಪ್ರದೇಶವನ್ನು ವಶಪಡಿಸಿಕೊಂಡ ಇಸ್ರೇಲ್‌ ಸೇನೆ

ವಿಶ್ವದಲ್ಲಿ ಈಗ ಯುದ್ಧದ ವಾತಾವರಣ ನಿಲ್ಲುವ ರೀತಿ ಕಾಣುತ್ತಿಲ್ಲ. ಒಂದು ಕಡೆ ರಷ್ಯಾ-ಉಕ್ರೇನ್‌ ನಡುವೆ ಫೈಟ್‌ ನಡೆದರೆ, ಇತ್ತ ಇಸ್ರೇಲ್‌ ಹಾಗೂ ಗಾಜಾ ನಡುವಿನ ಯುದ್ಧವೂ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ದಿನಕಳೆದಂತೆ ಯುದ್ಧದ ಸ್ವರೂಪ ಬದಲಾಗುತ್ತಿದೆ.

ಯುದ್ಧ ಸ್ಥಳದಲ್ಲಿ ನೆಲೆಸಿರುವ ಜನರಿಗೆ ಕ್ಷಣ ಕ್ಷಣಕ್ಕೂ ಭಯ ಆರಂಭವಾಗಿದೆ. ಯಾವಾಗ ಶತ್ರು ಸೇನೆ ತಮ್ಮ ಮೇಲೆ ಅಟ್ಯಾಕ್‌ ಮಾಡುತ್ತದೋ ಎನ್ನುವ ಆತಂಕದಲ್ಲೇ ಜೀವನವನ್ನು ನಡೆಸುತ್ತಿದ್ದಾರೆ. ಅಕ್ಟೋಬರ್ 7 ರಂದು ನಡೆದ ದಾಳಿಗೆ ಇಸ್ರೇಲ್ ಹಮಾಸ್‌ಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಗಾಜಾದ ಹಲವು ಪ್ರದೇಶಗಳನ್ನು ನಾಶ ಮಾಡಿರುವ ಇಸ್ರೇಲ್‌ ಈಗ ದಕ್ಷಿಣ ಗಾಜಾದ ರಫಾಹ್ ನಗರವನ್ನು ಪ್ರವೇಶಿಸಿದೆ.

Israel Takes Control of Gaza s Rafah Crossing US Downplays Invasion Fears

ದಕ್ಷಿಣ ಗಾಜಾ ಪ್ರವೇಶ

ಇಸ್ರೇಲ್‌ ಎಷ್ಟು ಆಕ್ರಮಣಕಾರಿ ನಿಲುವು ಪಡೆಯಬಹುದು ಎಂದು ಎಲ್ಲರಿಗೂ ಅರಿವಿದೆ. ಇನ್ನು ಇದೇ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಗಾಜಾ ಪಟ್ಟಣವಾಸಿಗಳಿಗಂತೂ ಇದರ ತೀವ್ರತೆ ಗೊತ್ತು. ಇಸ್ರೇಲ್‌ ದೊಡ್ಡ ಮಟ್ಟದ ಸೇನಾ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಹೇಳುತ್ತಲೇ, ಗಾಜಾದ ದಕ್ಷಿಣ ಗಾಜಾದ ರಫಾಹ್ ನಗರವನ್ನು ಪ್ರವೇಶಿಸಿದೆ. ಇನ್ನು ಇಸ್ರೇಲ್‌ ಸಿಟ್ಟು ಎಷ್ಟು ಎಂಬುದನ್ನು ಅರಿಯಲು ಈ ಒಂದು ಸನ್ನಿವೇಶವೇ ಸಾಕು ಎನಿಸುತ್ತದೆ.

ಸೈನ್ ಬೋರ್ಡ್ ಧ್ವಂಸ

ಇಸ್ರೇಲ್‌ನ ಕೋಪವನ್ನು ಅದರ ಟ್ಯಾಂಕ್‌ಗಳು ಗಾಜಾದಲ್ಲಿ ಹಾಕಿದ್ದ ಸೈನ್ ಬೋರ್ಡ್ ಅನ್ನು ನಾಶ ಮಾಡಿರುವದರಿಂದಲೇ ತಿಳಿಯುತ್ತದೆ. ಇಸ್ರೇಲಿ ಸೇನೆಯು ಸೇಡಿನ ಬೆಂಕಿ ಎಷ್ಟು ಆಳವಾಗಿ ಉರಿಯುತ್ತಿದೆ ಮತ್ತು ಭವಿಷ್ಯದಲ್ಲಿ ಅದು ಏನು ಮಾಡಬಹುದು ಎಂಬುದನ್ನು ಇದು ತೋರಿಸಿದಂತಿದೆ.

ಯುದ್ಧಕ್ಕೆ ಏಳು ತಿಂಗಳು

ಇಸ್ರೇಲ್‌ ಹಾಗೂ ಪ್ಯಾಲೆಸ್ಟೈನ್ ನಡುವಿನ ಯುದ್ಧಕ್ಕೆ ಏಳು ತಿಂಗಳೇ ಕಳೆದಿವೆ. ಯುದ್ಧವನ್ನು ನಿಲ್ಲಿಸಲು ಈಜಿಪ್ಟ್ ಮತ್ತು ಕತಾರ್ ಮಂಡಿಸಿದ ಕದನ ವಿರಾಮದ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ. ಇದಾದ ಬಳಿಕ ಉಗ್ರಗಾಮಿ ಗುಂಪು ಹಮಾಸ್ ಮತ್ತಷ್ಟು ಉಗ್ರ ಸ್ವರೂಪವನ್ನು ಪಡೆದುಕೊಂಡಿತು. ಅಲ್ಲದೆ ಇಸ್ರೇಲಿ ಸೇನೆಯು ರಾಫಾ ಮೇಲೆ ಈ ದಾಳಿಯನ್ನು ಪ್ರಾರಂಭಿಸಿತು.

Israel Takes Control of Gaza s Rafah Crossing US Downplays Invasion Fears

ಈ ಯುದ್ಧವು ಮಂಗಳವಾರಕ್ಕೆ ಏಳು ತಿಂಗಳುಗಳನ್ನು ಪೂರ್ಣಗೊಳಿಸಿದೆ. ಸ್ಥಳೀಯ ಆರೋಗ್ಯ ಅಧಿಕಾರಿಗಳ ಪ್ರಕಾರ, 34,700 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಮತ್ತು ಗಾಜಾ ಪಟ್ಟಿಯು ಧ್ವಂಸಗೊಂಡಿದೆ.

ಅಮೆರಿಕದೊಂದಿಗೆ ಬಿರುಕು

ಇಸ್ರೇಲ್‌ ಮತ್ತೆ ಗಾಜಾದ ಮೇಲೆ ದಾಳಿ ನಡೆಸಿದ್ದು, ಅದರ ಬೆಂಬಲಿಗ ರಾಷ್ಟ್ರ ಯುನೈಟೆಡ್‌ ಸ್ಟೇಟ್ಸ್ ನಡುವಿನ ಬಿರುಕನ್ನು ಹೆಚ್ಚಿಸುವ ಸಾಧ್ಯತೆ ಇದೆ. ಗಾಜಾ ನಗರದಲ್ಲಿ ಸಿಕ್ಕಿಬಿದ್ದಿರುವ ಪ್ಯಾಲೆಸ್ಟೈನ್ ಜನರ ಬಗ್ಗೆ ಅಮೆರಿಕ ತನ್ನ ಕಳವಳ ವ್ಯಕ್ತಪಡಿಸಿದೆ. ಗಾಜಾದ ಮೇಲೆ ಮತ್ತೆ ಆಕ್ರಮಣ ನಡೆಸಿದ ಇಸ್ರೇಲ್‌ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬಿಡನ್ ಸೋಮವಾರ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಿದರು.

ಕಪ್ಪು ಹೊಗೆ

ಮಂಗಳವಾರ ಮುಂಜಾನೆ ರಫಾ ಗಡಿಯನ್ನು ಇಸ್ರೇಲ್‌ ಗಾಜಾ ಪ್ರದೇಶವನ್ನು ಪ್ರವೇಶಿಸಿತು. ಮತ್ತು ಈ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾದ ಟ್ಯಾಂಕರ್‌ಗಳ ಮೇಲೆ ಇಸ್ರೇಲಿ ಧ್ವಜಗಳು ಹಾರಿಸಲಾಗುತ್ತಿದೆ. ಗಡಿಯ ಸಮೀಪ ಹಮಾಸ್ ಹೋರಾಟಗಾರರು ನಡೆಸಿದ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮಂಗಳವಾರವೂ ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರಿಂದ ಈ ಪ್ರದೇಶದಲ್ಲಿ ಕಪ್ಪು ಹೊಗೆ ಕಾಣಿಸಿಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+