ಹೊಡಿ.. ಹೊಡಿ.. ಅಂತಾ ರೊಚ್ಚಿಗೆದ್ದು ಹೊಡೆಯುತ್ತಿರುವ ಇಸ್ರೇಲ್, ಬೆಂಕಿಯಲ್ಲಿ ಬಿದ್ದ ಇರಾನ್... Israel And Iran
ಯುದ್ಧದ ಭೀಕರತೆಗೆ ಸಾಕ್ಷಿಯಾಗಿ ನಾಶವಾಗಿ ಹೋಗುತ್ತಿರುವ ಇರಾನ್ ದೇಶದಲ್ಲಿ ಇಸ್ರೇಲ್ ಸೇನೆಯ ದಾಳಿ ಭಯ ಮೂಡಿಸಿದೆ. ನೋಡ ನೋಡುತ್ತಲೇ ಇಡೀ ಇರಾನ್ ದೇಶವೇ ದೊಡ್ಡ ಅಪಾಯಕ್ಕೆ ಸಿಲುಕಿದ್ದು, ಇದೇ ರೀತಿಯಾಗಿ ಇಬ್ಬರ ನಡುವೆ ಹೊಡೆದಾಟ ನಡೆಯುತ್ತಿದ್ದರೆ ಮತ್ತೊಂದು ಜಾಗತಿಕ ಯುದ್ಧ ಆರಂಭ ಆಗುವುದು ಗ್ಯಾರಂಟಿ ಎನ್ನಬಹುದು. ಹೀಗಿದ್ದಾಗಲೇ ಇಸ್ರೇಲ್ ತನ್ನ ಉಗ್ರಾಣದಲ್ಲಿ ಇದ್ದ ಅತ್ಯಂತ ವಿನಾಶಕಾರಿ ಮಿಸೈಲ್ ಹೊರಗೆ ತೆಗೆದಿದೆ. ಅರೆ ಹಾಗಾದ್ರೆ ಇರಾನ್ ಕಥೆ ಮುಂದೇನು?
ಇರಾನ್ ರಾಜಧಾನಿ ಟೆಹ್ರಾನ್ ಇದೀಗ ನಲುಗಿ ಹೋಗಿದ್ದು, ಇರಾನ್ ಸೇನೆಯಿಂದ ನುಗ್ಗಿ & ನುಗ್ಗಿ ಬರುತ್ತಿರುವ ಕ್ಷಿಪಣಿಗಳು ಒಂದೊಂದಾಗಿ ಎಲ್ಲವನ್ನೂ ನಾಶ ಮಾಡಿ ಹಾಕುತ್ತಿವೆ. ಹೀಗೆ ನೋಡ ನೋಡುತ್ತಲೇ ಇರಾನ್ ದೇಶದಲ್ಲಿ ಒಂದೊಂದೇ ಬೃಹತ್ ಕಟ್ಟಡಗಳು ಸರ್ವನಾಶವಾಗಿ ಹೋಗುತ್ತಿವೆ. ಜನರು ಕೂಡ ಊರು ಖಾಲಿ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದು, ಯಾವ ಕ್ಷಣದಲ್ಲಿ ಇಡೀ ಇರಾನ್ ಹೊತ್ತಿ ಉರಿಯುತ್ತದೋ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಸಮಯದಲ್ಲೇ ಇಸ್ರೇಲ್ ವಿರುದ್ಧ ಕೂಡ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡಲು ಈಗ ಇರಾನ್ ಸಕಲ ಸಿದ್ಧತೆ ನಡೆಸಿದೆ ಎಂಬ ಸುದ್ದಿ ಇನ್ನಷ್ಟು ಭಯ ಮೂಡಿಸಿದೆ.

ಯುದ್ಧ ಮತ್ತಷ್ಟು ಜೋರಾಗೋದು ಗ್ಯಾರಂಟಿ?
ಅಂದಹಾಗೆ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಇರಾನ್ & ಇಸ್ರೇಲ್ ನಡುವೆ ಯುದ್ಧ ತೀವ್ರತೆ ಇನ್ನಷ್ಟು ಜೋರಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಯಾಕಂದ್ರೆ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ದ್ವೇಷ ಸಾಧಿಸುತ್ತಿದ್ದು, ಹೀಗೆ ಇದು ಮುಂದುವರಿದರೆ ಇಬ್ಬರ ನಡುವೆ ಇನ್ನು ಕೆಲವೇ ದಿನಗಳಲ್ಲಿ ಪರಮಾಣು ಬಾಂಬ್ ಬಳಕೆ ಆಗುವ ಆತಂಕ ಕಾಡುತ್ತಿದೆ.
ಹೀಗಾಗಿಯೇ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಮುಂದಿನ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆ ಕೂಡ ಭಾರಿ ಆತಂಕ ವ್ಯಕ್ತಪಡಿಸುತ್ತಿದೆ. ಹೀಗಾಗಿಯೇ ಇರಾನ್ & ಇಸ್ರೇಲ್ ಕೂತು ಮಾತುಕತೆ ಮೂಲಕ ಈಗ ಉಂಟಾಗಿರುವ ಗೊಂದಲ ಬಗೆಹರಿಸಿಕೊಳ್ಳಲಿ, ಅಂತಾ ಜಾಗತಿಕ ನಾಯಕರು ಮನವಿ ಕೂಡ ಮಾಡುತ್ತಿದ್ದಾರೆ. ಆದರೆ ಇದು ವರ್ಕೌಟ್ ಆಗುತ್ತಾ? ಇರಾನ್ & ಇಸ್ರೇಲ್ ಕೂತು ಸಂಧಾನ ಸಭೆ ನಡೆಸಲಿವೆಯಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications