Israel-Lebanon War: ಇಸ್ರೇಲ್ ಸೇನೆಯಿಂದ ಮತ್ತಷ್ಟು ದಾಳಿ, ಲೆಬನಾನ್ ಒಳಗೆ ನುಗ್ಗಿದ ಇಸ್ರೇಲಿ ಮಿಲಿಟರಿ!
ಇಸ್ರೇಲ್ ಸೇನೆಯ ದಾಳಿಗೆ ಧೂಳಿಪಟ ಆಗಿರುವ ಲೆಬನಾನ್ ನಲುಗಿ ಹೋಗುತ್ತಿದೆ. ಹೀಗಾಗಿ ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನದಲ್ಲಿ ಮಧ್ಯಪ್ರಾಚ್ಯ ದೇಶಗಳು, ಇದೀಗ ಚಿಂತನೆ ನಡೆಸುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ ಇಸ್ರೇಲ್ ಸೇನೆ ಹೊಸ ರೀತಿಯ ಪ್ಲಾನ್ ಮಾಡಿ ಮುಂದೆ ನುಗ್ಗುತ್ತಿದ್ದು, ಲೆಬನಾನ್ ದೇಶದಲ್ಲಿ ನೆಲದ ಮೂಲಕ ಕೂಡ ದಾಳಿ ಶುರು ಮಾಡಿದೆ. ದಕ್ಷಿಣ ಲೆಬನಾನ್ ಭಾಗದ ಮೇಲೆ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿರುವ, ಇಸ್ರೇಲಿ ಮಿಲಿಟರಿ ಇದೀಗ ದಕ್ಷಿಣ ಲೆಬನಾನ್ ಭಾಗದ ಮೇಲೆ ಭಾಗಶಃ ಹಿಡಿತ ಸಾಧಿಸಿದೆ.
ಕಳೆದ ತಿಂಗಳ ಅಂತ್ಯಕ್ಕೆ ಅಂದ್ರೆ ಸೆಪ್ಟೆಂಬರ್ ಕೊನೆ ಎರಡು ವಾರ ಮಧ್ಯಪ್ರಾಚ್ಯ ಹಲವಾರು ಭೀಕರ ಘಟನೆಗಳಿಗೆ ಸಾಕ್ಷಿಯಾಗಿತ್ತು. ಅದರಲ್ಲೂ ಲೆಬನಾನ್ ವಿರುದ್ಧ ಇಸ್ರೇಲ್ ಆರಂಭಿಸಿದ್ದ ಭೀಕರ ದಾಳಿ ಹಲವು ಪ್ರಮುಖ ಘಟನೆಗಳಿಗೆ ಕಾರಣವಾಗಿತ್ತು. ಹೀಗಿದ್ದಾಗಲೇ ಶಾಂತಿ ಸ್ಥಾಪನೆ ಮಾಡಿ, ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನಗಳು ಕೂಡ ಫ್ಲಾಪ್ ಆಗಿಬಿಟ್ಟವು. ಹೀಗಾಗಿ, ಮಧ್ಯಪ್ರಾಚ್ಯ ಈಗಲೂ ಕೊತ ಕೊತ ಕುದಿಯುತ್ತಿದೆ. ಇರಾನ್ ಈಗಾಗಲೇ ಒಂದು ಬಾರಿ ತನ್ನ ಕ್ಷಿಪಣಿಗಳ ಮೂಲಕ ಇಸ್ರೇಲ್ ಮೇಲೆ ಡೆಡ್ಲಿ ಅಟ್ಯಾಕ್ ಕೂಡ ಮಾಡಿದೆ. ಪರಿಸ್ಥಿತಿ ಈಗಾಗಲೇ ಕೈಮೀರಿ ಹೋಗಿದ್ದು, ಇದೀಗ ಲೆಬನಾನ್ ವಿರುದ್ಧ ಭೂ ದಾಳಿಯನ್ನು ಕೂಡ ಆರಂಭಿಸಿದೆ ಇಸ್ರೇಲ್ ಮಿಲಿಟರಿ.

ದಕ್ಷಿಣ ಲೆಬನಾನ್ ಛಿದ್ರ ಛಿದ್ರ
ಇಸ್ರೇಲ್ ಮಾಡುತ್ತಿರುವ ಆರೋಪದ ಪ್ರಕಾರ ಲೆಬನಾನ್ ದೇಶದ ದಕ್ಷಿಣ ಭಾಗದಲ್ಲಿ ಇದೀಗ ಹಿಜ್ಬುಲ್ಲಾ ಮುಖಂಡರು & ನಾಯಕರು ಅಡಗಿ ಕೂತಿದ್ದಾರೆ. ಹೀಗಾಗಿ ಅವರನ್ನು ಮಗಿಸಿ & ಸೇಡು ತೀರಿಸಿಕೊಳ್ಳಲು ಇದೀಗ ಇಸ್ರೇಲ್ ಸೇನೆ ಘೋರ ದಾಳಿ ಆರಂಭ ಮಾಡಿದೆ. ಇದರಿಂದ ಈಗಾಗಲೇ ದಕ್ಷಿಣ ಲೆಬನಾನ್ ಭಾಗ ಸಂಪೂರ್ಣ ನಲುಗಿ ಹೋಗಿದ್ದು, ಕಟ್ಟಡಗಳು ಕೂಡ ಛಿದ್ರ ಛಿದ್ರವಾಗಿವೆ. ಮತ್ತೊಂದು ಕಡೆ ಜೀವ ಉಳಿಸಿಕೊಳ್ಳಲು ಜನರು ಓಡಿ ಹೋಗುತ್ತಿದ್ದು, ಪರಿಸ್ಥಿತಿ ಕಠಿಣವಾಗಿದೆ.
ಮತ್ತೊಂದು ಕಡೆ ಇಸ್ರೇಲ್ & ಹಮಾಸ್ ಯುದ್ಧಕ್ಕೆ ಇದೀಗ ಒಂದು ವರ್ಷ ಪೂರ್ತಿಯಾಗಿದೆ. ಅಕ್ಟೋಬರ್ 7, 2023 ರಂದು ಯಾರೂ ಊಹಿಸದ ಘಟನೆ ನಡೆದಿತ್ತು. ಎರಡು ದೇಶಗಳ ಮಧ್ಯೆ ಇದೇ ದಿನ ಭೀಕರ ಯುದ್ಧ ಶುರುವಾಗಿತ್ತು. ಇಸ್ರೇಲ್ ಮತ್ತು ಹಮಾಸ್ ದಿಢೀರ್ ಯುದ್ಧದ ಬೆಂಕಿ ಹೊತ್ತಿಸಿದ್ದವು. ಬಡಿದಾಟವು ಕೂಡ ಶುರುವಾಗಿತ್ತು. ಹೀಗೆ ಅಲ್ಲಿ ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 1 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ, ಯುದ್ಧ ನಿಲ್ಲಿಸುವ ಯತ್ನ ಕೂಡ ಫ್ಲಾಪ್ ಆಗುತ್ತಿವೆ. ಹಾಗಾದರೆ ಈ ಯುದ್ಧ ನಿಲ್ಲುವುದು ಯಾವಾಗ? ಎಂಬ ಬಿಲಿಯನ್ ಡಾಲರ್ ಪ್ರಶ್ನೆ ಇದೀಗ ಎಲ್ಲೆಲ್ಲೂ ಕಾಡತೊಡಗಿದೆ.












Click it and Unblock the Notifications