ಇರಾನ್ & ಇಸ್ರೇಲ್ ನಡುವೆ ಭೀಕರ ವಾರ್, ಇಸ್ರೇಲ್ ಸೇನೆಯ ಮುಂದಿನ ನಡೆ ಏನು? Israel And Iran

ರಣಭೀಕರ ಕದನಕ್ಕೆ ಸಾಕ್ಷಿ ಆಗುತ್ತಿರುವ ಇರಾನ್ & ಇಸ್ರೇಲ್ ಯುದ್ಧದಲ್ಲಿ, ಭಾರಿ ದೊಡ್ಡ ಪ್ರಮಾಣದ ನಷ್ಟವೇ ಇದೀಗ ಮುಂದುವರಿದಿದೆ. ಇರಾನ್ ತನ್ನ ಮೇಲೆ ದಾಳಿ ಮಾಡಿದೆ ಅಂತಾ ಇಸ್ರೇಲ್ ಅಟ್ಯಾಕ್ ಮಾಡಿ ಸಮರ್ಥಿಸಿಕೊಂಡಿತ್ತು. ಆದ್ರೆ ಇದೀಗ ಇರಾನ್ ಮತ್ತೊಂದು ಸುತ್ತಿನ ದಾಳಿ ಮಾಡುವ ಮೂಲಕ ಇಸ್ರೇಲ್ ನೆಲದಲ್ಲಿ ಹೊಸ ಭಯ ಹುಟ್ಟುಹಾಕಿದೆ. ಈ ಮೂಲಕ ಇರಾನ್ & ಇಸ್ರೇಲ್ ಯುದ್ಧದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಎಲ್ಲವೂ ಹಾಳಾಗಿ ಹೋಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಯುದ್ಧ ಒಂದು ಶುರುವಾದರೆ ಮೊದಲು ಹೆಣವಾಗಿ ಹೋಗುವುದು ಸಾಮಾನ್ಯ ಜನರು ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾಕಂದ್ರೆ ಶಕ್ತಿಶಾಲಿ ವ್ಯಕ್ತಿಗಳ ನಡುವಿನ ತಿಕ್ಕಾಟದಲ್ಲಿ ಮೊದಲು ಬಲಿಯಾಗುವುದೇ ಶ್ರೀಸಾಮನ್ಯರು... ಹೀಗಿದ್ದಾಗಲೇ ಇರಾನ್ & ಇಸ್ರೇಲ್ ನಡುವಿನ ಯುದ್ಧ ಹೊಸ ಆತಂಕ ಹುಟ್ಟು ಹಾಕಿದ್ದು, ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾ ಯುದ್ಧದ ಭಯ ಮೂಡುವಂತೆ ಮಾಡಿದೆ. ಯಾಕಂದ್ರೆ ಇರಾನ್ & ಇಸ್ರೇಲ್ ಕೈಯಲ್ಲಿ ಪರಮಾಣು ಅಸ್ತ್ರ ಬಳಕೆ ಮಾಡುವ ಶಕ್ತಿ ಇದ್ದು, ಘೋರ ದುರಂತ ಎದುರಾಗುವ ಭಯ ಕೂಡ ಕಾಡುತ್ತಿದೆ.

Israel Said This After The Iran Attack On Main Cities

ಇರಾನ್ ವಿರುದ್ಧ ಇಸ್ರೇಲ್ ಘೋರ ದಾಳಿ?

ಇಸ್ರೇಲ್ & ಇರಾನ್ ಮಧ್ಯೆ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಆರಂಭವಾಗಿ, ಭಯದ ವಾತಾವರಣ ಎದುರಾಗಿದೆ. ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಇಸ್ರೇಲ್ ಸೇನೆಯಿಂದ ಕೂಡ ದಾಳಿ ಆರಂಭವಾಗಿದೆ. ಇಸ್ರೇಲ್ ದೇಶದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಕೂಡ ಕೈಕೊಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಘೋರ ಯುದ್ಧ ಬೆಂಕಿ ಈಗ ಧಗಧಗಿಸಿದೆ. ಧಗಧಗ ಅಂತಿರುವ ಈ ಯುದ್ಧ ಮತ್ತೊಂದು ತಿರುವು ಪಡೆಯುತ್ತಿದ್ದು, ಇದರ ಜೊತೆ ಇಸ್ರೇಲ್ ಮತ್ತೊಂದು ಭೀಕರ ದಾಳಿ ನಡೆಸುವ ಆತಂಕ ಇರಾನ್ ದೇಶಕ್ಕೆ ಕಾಡುತ್ತಿದೆ...

ಇಸ್ರೇಲ್ ಬಳಿ ಇದೆ ಭಯಾನಕ ಅಸ್ತ್ರಗಳು!

ಹೌದು, ಇಸ್ರೇಲ್ ಸಣ್ಣ ರಾಷ್ಟ್ರವೇ ಆಗಿದ್ದರೂ ಅದರ ಬಳಿ ಭಯಾನಕ ಅಸ್ತ್ರಗಳ ರಾಶಿಯೇ ಇದೆ. ಹೀಗಾಗಿ ಇಸ್ರೇಲ್‌ನ ಬಗ್ಗೆ ಇರಾನ್ ಸೇನೆಗೆ ಕೂಡ ಭಯ ಕಾಡುತ್ತಿದೆ. ಯಾಕಂದ್ರೆ ಅಕಸ್ಮಾತ್ ಇರಾನ್ ವಿರುದ್ಧ ಇಸ್ರೇಲ್ ಭಯಾನಕ ಅಸ್ತ್ರದ ಬಳಕೆ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವುದು ಗ್ಯಾರಂಟಿ. ಹೀಗಾಗಿಯೇ ಇರಾನ್ & ಇಸ್ರೇಲ್ ಯುದ್ಧದ ಬಗ್ಗೆ ಭಯದ ವಾತಾವರಣ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಮುಂದಿನ ಪರಿಸ್ಥಿತಿ ಬಗ್ಗೆ ಆತಂಕ ಶುರುವಾಗಿದೆ. ಯುದ್ಧದ ನಡುವೆ ಇಸ್ರೇಲ್ ಸೇನೆ ಅಮೆರಿಕದ ಸಹಾಯ ಪಡೆದು ಪರಮಾಣು ಅಸ್ತ್ರ ಬಳಕೆ ಮಾಡುತ್ತಾ? ಅನ್ನೋ ಚರ್ಚೆ ಕೂಡ ಇದೀಗ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+