Israel & Gaza War: ಗಾಜಾ & ಇಸ್ರೇಲ್ ಯುದ್ಧ ನಿಲ್ಲಿಸುವ ಬಗ್ಗೆ ಇಸ್ರೇಲ್ ಪ್ರಧಾನಿ ಮಹತ್ವದ ಹೇಳಿಕೆ!
ಗಾಜಾ ವಿರುದ್ಧ ಯುದ್ಧ ನಿಲ್ಲಿಸಲು ಇಸ್ರೇಲ್ ತೀರ್ಮಾನ ಮಾಡಿದೆಯಾ? ಯುದ್ಧ ನಿಲ್ಲಿಸಿ, ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಇಸ್ರೇಲ್ ಮಹತ್ವದ ನಿರ್ಧಾರ ಕೈಗೊಂಡಿದೆಯಾ? ಅಂದಹಾಗೆ ಈ ಎಲ್ಲಾ ಪ್ರಶ್ನೆಗಳು ಇದೀಗ ಜಗತ್ತನ್ನು ಕಾಡುತ್ತಿವೆ. ಇಷ್ಟು ಭಾರಿ ಸಂಚಲನ ಮೂಡಲು ಕಾರಣ ಗಾಜಾ ಪಟ್ಟಿ ಭಾಗದಲ್ಲಿ ಬೆಂಕಿ ಹೊತ್ತಿಕೊಂಡ ನಂತರ ಇಡೀ ಜಗತ್ತಿನ ನೆಮ್ಮದಿ ಹಾಳಾಗಿ ಹೋಗಿದೆ. ಹೀಗಿದ್ದಾಗ ಇಸ್ರೇಲ್ ಪ್ರಧಾನಿ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಗಾಜಾ & ಇಸ್ರೇಲ್ ಯುದ್ಧ ನಿಲ್ಲಿಸುವ ಬಗ್ಗೆ ಇಸ್ರೇಲ್ ಪ್ರಧಾನಿ ಹೇಳಿದ್ದು ಏನು?
ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಗೆ ಈಗಾಗಲೇ ಗಾಜಾ ಪಟ್ಟಿ ನಗರ ಸಂಪೂರ್ಣ ನಾಶವಾಗಿದೆ. ಗಾಜಾ ಗಲ್ಲಿ ಗಲ್ಲಿಗಳಲ್ಲೂ ಇದೀಗ ಬರೀ ಶವಗಳೇ ಕಾಣುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಹಮಾಸ್ ಮುಖ್ಯಸ್ಥ ಕೂಡ ಇಸ್ರೇಲ್ ಸೇನೆ ಕೈಯಲ್ಲಿ ಲಾಕ್ ಆಗಿ ಜೀವ ಬಿಟ್ಟಿರುವುದು ಯುದ್ಧ ನಿಲ್ಲುವ ಆಸೆ ಮೂಡಿಸಿದೆ. ಈ ಸಮಯದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಕೂಡ ಇದನ್ನೇ ಹೇಳುತ್ತಿದ್ದು, ಯುದ್ಧ ನಿಲ್ಲಿಸಬೇಕು ಎಂಬ ನಿಲುವು ಹೊಂದಿದೆ. ಹೀಗಿದ್ದಾಗಲೇ ಇಸ್ರೇಲ್ ಪ್ರಧಾನಿ ಯುದ್ಧ ನಿಲ್ಲಿಸುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ!

ಬೆಂಜಮಿನ್ ನೆತನ್ಯಾಹು ಹೇಳಿದ್ದು...
ಇಸ್ರೇಲ್ ತನ್ನ ವಿರುದ್ಧ ತಿರುಗಿಬಿದ್ದ ಪ್ರತಿಯೊಬ್ಬರ ಜೀವ ತೆಗೆಯಲು ಮುಂದಾಗಿದೆ. ಹೀಗೆ ಶತ್ರುಗಳ ಹೆಣ ಬೀಳಿಸಿ, ತನ್ನ ದೇಶವನ್ನ ಸೇಫ್ ಮಾಡಲು ಮುಂದಾಗಿದೆ. ಅದರಲ್ಲೂ ಈ ವಿಚಾರದಲ್ಲಿ ಯಾರನ್ನ ಬೇಕಾದರೂ ಹತ್ಯೆ ಮಾಡಲು ಇಸ್ರೇಲ್ ಹಿಂದೆ & ಮುಂದೆ ಯೋಚನೆ ಮಾಡಲ್ಲ. ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಹಮಾಸ್ ಮುಖ್ಯಸ್ಥ ಮೃತಪಟ್ಟಿದ್ದು, ಈಗಲಾದರೂ ಗಾಜಾ ಪಟ್ಟಿ ಮೇಲಿನ ಯುದ್ಧ ನಿಲ್ಲಿಸಿ ಅಂತಾ ಇಡೀ ಜಗತ್ತು ಇಸ್ರೇಲ್‌ಗೆ ಈ ಸಮಯದಲ್ಲಿ ಸಲಹೆ ನೀಡುತ್ತಿದೆ. ಆದರೆ ಇಸ್ರೇಲ್ ಪ್ರಧಾನಿ ಮಾತ್ರ ಯುದ್ಧ ಇನ್ನು ನಿಂತೇ ಇಲ್ಲ ಎಂದಿದ್ದಾರೆ.
ಹಮಾಸ್ ಸಂಪೂರ್ಣ ಶರಣಾಗುವ ತನಕ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ವಿವರಣೆ ಪ್ರಕಾರ, ಇದೀಗ ಹಮಾಸ್ ಮುಖ್ಯಸ್ಥ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾನೆ ನಿಜ. ಆದರೆ ಹಮಾಸ್ ಸಂಪೂರ್ಣ ಇಸ್ರೇಲ್ ಎದುರು ಶರಣಾಗಬೇಕು. ಹೀಗೆ ಹಮಾಸ್ ಶರಣಾಗುವ ತನಕ ಯಾವುದೇ ರೀತಿಯಲ್ಲಿ ಕೂಡ ನಾವು ಯುದ್ಧ ನಿಲ್ಲಿಸೋದಿಲ್ಲ. ಹಮಾಸ್ ಸಂಪೂರ್ಣ ಶರಣಾಗುವ ತನಕ ಇಸ್ರೇಲ್ ಸೇನೆ, ಇಸ್ರೇಲಿ ಯೋಧರು ತಮ್ಮ ಕಾರ್ಯಾಚರಣೆ ಮುಂದುವರಿಸುತ್ತಾರೆ ಎಂದಿದ್ದಾರೆ ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು.












Click it and Unblock the Notifications