ನಾವು ಮುಟ್ಟಿದರೆ ಮುಗಿಯಿತು ಹುಷಾರ್: ಇರಾನ್‌ಗೆ ವಾರ್ನಿಂಗ್ ಕೊಟ್ಟ ಇಸ್ರೇಲ್!
ಮನುಷ್ಯನಿಗೆ ದುರಾಸೆ & ದುರಹಂಕಾರ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾನೆ ಇದೆ. ಈ ಹಿನ್ನೆಲೆ ಭೂಮಿ ಮೇಲೆ ಸಾಲು ಸಾಲು ಘೋರ ಯುದ್ಧಗಳು ನಡೆಯುತ್ತಲೇ ಇವೆ. ಒಂದು ಕಡೆ ಈ ರೀತಿ ಯುದ್ಧಗಳು ಶುರುವಾದ ಬಳಿಕ ಆರ್ಥಿಕ ಪರಿಸ್ಥಿತಿ ಸ್ಮಶಾನ ಸೇರಿದ್ದು, ಮನುಷ್ಯರು ಬೀದಿಗೆ ಬೀಳುವ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದ್ಕಡೆ ಸಾಮಾಜಿಕ ಶಾಂತಿ ಕೂಡ ಇಂತಹ ಘಟನೆಗಳಿಂದ ಹಾಳಾಗಿ ಹೋಗ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ದಿಢೀರ್ ಇಸ್ರೇಲ್ ಪ್ರಧಾನಿ ಖುದ್ದಾಗಿ ಇರಾನ್‌ಗೆ ವಾರ್ನಿಂಗ್ ಕೊಟ್ಟು, ಮತ್ತೊಂದು ಯುದ್ಧ ಸಂದೇಶ ಕಳುಹಿಸಿದ್ದಾರೆ.
ಇಸ್ರೇಲ್ & ಲೆಬನಾನ್ ನಡುವೆ ಘೋರ ಯುದ್ಧ ನಡೆಯುತ್ತಿದ್ದ ಹಿನ್ನೆಲೆ, ದಕ್ಷಿಣ ಲೆಬನಾನ್ ಪ್ರದೇಶದ ಮೇಲೆ ಇಸ್ರೇಲ್ ಮಿಲಿಟರಿ ಡೆಡ್ಲಿ ಅಟ್ಯಾಕ್ ನಡೆಸುತ್ತಿದೆ. ಹೀಗೆ ಇಸ್ರೇಲ್ ಸೇನೆಯ ದಾಳಿಯ ಪರಿಣಾಮ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಮುಖ್ಯಸ್ಥ ಮೃತಪಟ್ಟಿರುವುದು ಇದೀಗ ದೊಡ್ಡ ಗಲಾಟೆಗೆ ಕಾರಣವಾಗಿದೆ. ಇಷ್ಟು ದಿನ ಇಸ್ರೇಲ್ ಏನು ಮಾಡಿದರೂ ಅತ್ತ ಇರಾನ್ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇತ್ತು. ಆದರೆ, ಯಾವಾಗ ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಮುಖ್ಯಸ್ಥ ಇಸ್ರೇಲ್ ಜೊತೆಗಿನ ಗಲಾಟೆಯಲ್ಲಿ ಜೀವ ಬಿಟ್ಟನೋ ಆಗಲೇ ನೋಡಿ ಶುರುವಾಗಿದ್ದು ಅಸಲಿ ಫೈಟಿಂಗ್. ಇಸ್ರೇಲ್ ವಿರುದ್ಧ ರೊಚ್ಚಿಗೆದ್ದ ಇರಾನ್ ಮೊನ್ನೆ ಮೊನ್ನೆ 200ಕ್ಕೂ ಹೆಚ್ಚು ಮಿಸೈಲ್‌ಗಳ ಮೂಲಕ ದಾಳಿ ಮಾಡಿತ್ತು.

ಇಸ್ರೇಲ್ ತಂಟೆಗೆ ಬರದಂತೆ ವಾರ್ನಿಂಗ್!
ಹೀಗೆ ಇರಾನ್ ದಿಢೀರ್ 200ಕ್ಕೂ ಹೆಚ್ಚು ಮಿಸೈಲ್‌ಗಳ ಮೂಲಕ ಇಸ್ರೇಲ್‌ನ ವಿರುದ್ಧ ದಾಳಿ ನಡೆಸಿದ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಯಾಕಂದ್ರೆ ಮಧ್ಯಪ್ರಾಚ್ಯ ಸೂಕ್ಷ್ಮ ಪ್ರದೇಶ, ಇಲ್ಲಿ ಜಗಳ ಶುರುವಾದರೆ ಜಾಗತಿಕ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಇರಾನ್ & ಇಸ್ರೇಲ್ ದೇಶಗಳ ನಾಯಕರನ್ನು ಕರೆದು ಮಾತನಾಡಿ ಸಮಾಧಾನದ ಮಾತುಗಳನ್ನ ಹೇಳಲು ಜಗತ್ತೇ ಸಿದ್ಧವಾಗಿತ್ತು. ಆದರೆ ಇದಕ್ಕೆಲ್ಲಾ ಕೇರ್ ಮಾಡದ ಎರಡೂ ದೇಶಗಳು ಯುದ್ಧ ಆರಂಭ ಮಾಡಿಬಿಟ್ಟಿವೆ. ಈ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ದೊಡ್ಡ ತಪ್ಪನ್ನು ಮಾಡೇ ಬಿಟ್ಟಿದೆ, ಈ ತಪ್ಪಿಗೆ ಇರಾನ್ ಬೆಲೆ ತೆರಲಿದೆ ಎಂದು ಹೇಳಿಕೆ ನೀಡಿರುವುದು ಮತ್ತಷ್ಟು ಆತಂಕ ಹುಟ್ಟು ಹಾಕಿದೆ.
ಮುಟ್ಟಿದರೆ ತಟ್ಟಿಬಿಡ್ತೀವಿ ಅಂತಿದೆ ಇಸ್ರೇಲ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದೀಗ ಇರಾನ್ ವಿರುದ್ಧ ಮತ್ತೊಂದು ದೊಡ್ಡದಾದ ದಾಳಿ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಯಾಕಂದ್ರೆ ಇರಾನ್ ಸೇನೆ ಕ್ಷಿಪಣಿಗಳ ಮೂಲಕವೇ ಇಸ್ರೇಲ್ ನೆಲದಲ್ಲಿ ಆತಂಕ ಹುಟ್ಟಿಸಿದ್ದು, ಅದೇ ರೀತಿಯಾಗಿ ಇಸ್ರೇಲ್ ಕೂಡ ಘೋರ ದಾಳಿ ನಡೆಸಿ ಉತ್ತರ ನೀಡಲು ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಹೀಗಾಗಿ ಇದೀಗ ಎಚ್ಚರಿಕೆಯ ಮಾತುಗಳನ್ನ ಆಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಮ್ಮ ಮೇಲೆ ಯಾರು ದಾಳಿ ಮಾಡುವರೋ ನಾವೂ ಅವರ ವಿರುದ್ಧ ದಾಳಿ ಮಾಡುವುದು ಗ್ಯಾರಂಟಿ ಎಂದಿದ್ದಾರೆ ಇಸ್ರೇಲ್ ಪ್ರಧಾನಿ.












Click it and Unblock the Notifications