ಇಸ್ರೇಲ್-ಪಾಲೆಸ್ಟೀನ್‌ ಯುದ್ಧ ಸಂಘರ್ಷ; 300 ಕ್ಕೂ ಹೆಚ್ಚು ಮಂದಿ ಸಾವು!

ಇಸ್ರೇಲ್‌, ಅಕ್ಟೋಬರ್‌ 07: ಉಕ್ರೇನ್ ಹಾಗೂ ರಷ್ಯಾ ನಡುವಿನ ಕದನ ಒಂದೂವರೆ ವರ್ಷ ದಾಟಿದರೂ ಮುಗಿಯುವ ಸೂಚನೆ ಕಾಣಿಸುತ್ತಿಲ್ಲ. ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಗಾಜಾ ಪಟ್ಟಿಯಿಂದ ಪ್ಯಾಲೆಸ್ಟೀನ್ ಹಮಾಸ್ ಬಂಡುಕೋರರು ಭೀಕರ ರಾಕೆಟ್ ದಾಳಿ ನಡೆಸಿದ್ದು, ಇಸ್ರೇಲ್‌ ಹಾಗೂ ಪಾಲೆಸ್ಟೀನ್‌ ನಡುವೆ ಯುದ್ದ ಸಂಘರ್ಷದಿಂದಾಗಿ 300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಗಾಜಾ ಪಟ್ಟಿಯ ಕಡೆಯಿಂದ ಇಸ್ರೇಲ್ ಮೇಲೆ 5000 ರಾಕೆಟ್​ಗಳ ದಾಳಿ ನಡೆಸಲಾಗಿದೆ. ಹೀಗಾಗಿ ಇಸ್ರೇಲ್ ಹಾಗೂ ಪಾಲೆಸ್ಟೀನ್ ನಡುವಿನ ಸಂಘರ್ಷ ಯುದ್ಧದ ಸ್ವರೂಪವನ್ನು ಪಡೆದಿದ್ದು, ಎರಡೂ ಕಡೆಗಳಿಂದ ನಡೆದ ದಾಳಿ ಹಾಗೂ ಪ್ರತಿದಾಳಿಯಲ್ಲಿ 300ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ.

Israel-Palestine War More than 300 people death

ಪಾಲೆಸ್ಟೀನ್‌ನ ಹಮಾಸ್ ಬಂಡುಕೋರರು ಶನಿವಾರ ನಸುಕಿನಲ್ಲಿ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ನಡೆಸಿದ ದಿಢೀ‌ರ್‌ ರಾಕೆಟ್ ದಾಳಿಗೆ ಕನಿಷ್ಠ 100 ಮಂದಿ ಸಾವಿಗೀಡಾಗಿದ್ದು, 740 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಲ್ಲದೇ ಇಸ್ರೇಲ್ ನಡೆಸಿದ ಪ್ರತಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿನ ಕನಿಷ್ಠ 200 ಜನರ ಹತ್ಯೆಯಾಗಿದ್ದು, 1620 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್‌ನ ಕೆಲವು ಸೈನಿಕರು ಮತ್ತು ನಾಗರಿಕರನ್ನು ಹಮಾಸ್ ಬಂಡುಕೋರರು ಗಾಜಾದಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಇಸ್ರೇಲ್‌ನಲ್ಲಿ ಶನಿವಾರ ಯೆಹೂದಿಗಳ ವಿಶೇಷ ಆಚರಣೆಗಾಗಿ ರಜೆ ಇತ್ತು. ಈ ಸಂದರ್ಭದಲ್ಲೇ ಭೂ, ಜಲ ಮತ್ತು ವಾಯು ಮಾರ್ಗದ ಮೂಲಕ ಬಂಡುಕೋರರು ದಾಳಿ ಎಸಗಿದ್ದಾರೆ ಎನ್ನಲಾಗಿದೆ.

ಇನ್ನೂ ದೇಶದ ದಕ್ಷಿಣ ಭಾಗದ ಮೂಲಕ ಒಳ ನುಸುಳಿದ್ದಾರೆ. ಅನೇಕ ಸೈನಿಕರು ಮತ್ತು ಜನರನ್ನು ವಶಕ್ಕೆ ಪಡೆದು ಗಾಜಾ ಪಟ್ಟಿಯತ್ತ ಕರೆದೊಯ್ದಿದ್ದಾರೆ. ಪ್ಯಾಲೆಸ್ಟೀನಿಯರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಇಸ್ರೇಲ್ ಅನ್ನು ಒತ್ತಾಯಿಸಲು ಇಸ್ರೇಲ್‌ನ ಹಿರಿಯ ಅಧಿಕಾರಿಗಳು ಸೇರಿ ಅನೇಕರನ್ನು ಒತ್ತೆಯಾಳುಗಳ ಇರಿಸಿಕೊಂಡಿದ್ದೇವೆ ಎಂದು ಹಮಾಸ್‌ನ ಉಪ ಮುಖ ಸ್ಥಸಲೇಖ ಆಲ್ ಅ‌ರಿ ಅಲ್ ಜಝೀರಾ ಸುದ್ದಿವಾಹಿನಿಗೆ ತಿಳಿಸಿದ್ದಾನೆ.

Israel-Palestine War More than 300 people death

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗಿದ್ದು, ದೇಶವು ಯುದ್ಧ ಎದುರಿಸುತ್ತಿದೆ, ವೈರಿಗಳು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು. ಹಮಾನ್ ಹಲವು ವರ್ಷಗಳಲ್ಲಿ ಇಸ್ರೇಲ್‌ಗೆ ಹೊಂಚು ಹಾಕಿ ಭಾರಿ ಪೂರ್ವ ತಯಾರಿಯೊಂದಿಗೆ ಒಳನುಸುಳುಳಿ ಭೀಕರ ದಾಳಿ ನಡೆಸಿದ ಪರಿಣಾಮ ಮೇಯರ್ ಸೇರಿದಂತೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ, 740 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇನ್ನೂ ಏಕಾಏಕಿ ಶನಿವಾರ ಬೆಳಗ್ಗೆ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾವಣೆ ಮಾಡಿದ್ದು, ಈ ದಾಳಿಯು ಗಾಜಾ ಪಟ್ಟಿಯಿಂದ ಹಲವಾರು ಒಳನುಸುಳುವಿಕೆಗಳು ಮತ್ತು ರಾಕೆಟ್ ದಾಳಿಗಳ ನಂತರ 'ಯುದ್ಧದ ಸ್ಥಿತಿಯನ್ನು ಘೋಷಿಸಲು ಇಸ್ರೇಲ್ ಅನ್ನು ಪ್ರೇರೇಪಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+