ಇಸ್ರೇಲ್ ಶತ್ರುಗಳ ನೆಲ ನಡುಗಿಸಲು ಮುನ್ನುಗ್ಗುತ್ತಿರುವ ಮಿಲಿಟರಿ!
ಶತ್ರುಗಳ ನಾಶಕ್ಕೆ ಪಣತೊಟ್ಟು ನಿಂತಂತೆ ಕಾಣುತ್ತಿರುವ ಇಸ್ರೇಲ್ ಸೇನೆ, ಇದೀಗ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. ಅದರಲ್ಲೂ ದಕ್ಷಿಣ ಲೆಬನಾನ್ ಪ್ರದೇಶದ ಮೇಲೆ ಇಸ್ರೇಲ್‌ನ ವಾಯುಪಡೆ ನಡೆಸುತ್ತಿರುವ ದಾಳಿಗೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಇಂತಹ ಸ್ಥಿತಿಯಲ್ಲಿ ಕೂಡ ಇಸ್ರೇಲ್ ಮಿಲಿಟರಿ ಎಲ್ಲವನ್ನೂ ಬಿಟ್ಟು ಸೈಲೆಂಟ್ ಆಗುವ ಲಕ್ಷಣ ಕಾಣುತ್ತಿಲ್ಲ. ಬದಲಾಗಿ, ಇನ್ನಷ್ಟು ಹೆಚ್ಚಿನ ದಾಳಿ ನಡೆಸುತ್ತಿರುವ ಇಸ್ರೇಲ್ ಇದೀಗ ನೇರವಾಗಿ ದಕ್ಷಿಣ ಲೆಬನಾನ್ ನೆಲ ತನ್ನ ವಶಕ್ಕೆ ಪಡೆಯಲು ಸಜ್ಜಾಗಿದೆ.
ಹೌದು, ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಯ ತೀವ್ರತೆ ಹೇಗಿದೆ ಎಂದರೆ ಜನರು ಇದೀಗ ಎಲ್ಲಾ ಪ್ರದೇಶಗಳಿಂದ ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದಾರೆ. ಅದರಲ್ಲೂ ಲೆಬನಾನ್ ಮತ್ತು ಸಿರಿಯಾ ನಡುವಿನ ಗಡಿ ಭಾಗದಲ್ಲಿ ರಕ್ತಪಾತವೇ ಆಗಿ ಹೋಗಿದೆ. ಹಿಜ್ಬುಲ್ಲಾ ವಿರುದ್ಧ ದಾಳಿ ಇನ್ನಷ್ಟು ತೀವ್ರಗೊಳಿಸಿರುವ ಇಸ್ರೇಲ್ ಮಿಲಿಟರಿ, ಇದೀಗ ಮನಸ್ಸಿಗೆ ಬಂದಂತೆ ಬಾಂಬ್‌ಗಳನ್ನು ಶತ್ರುಗಳ ಜಾಗದ ಮೇಲೆ ಎಸೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಇದೀಗ ಲೆಬನಾನ್‌ನಲ್ಲಿ ಒಂದು ವಾರದಲ್ಲಿ ಮೃತಪಟ್ಟಿರುವ ಜನರ ಸಂಖ್ಯೆ 700ಕ್ಕೂ ಹೆಚ್ಚಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಒಂದೇ ಕುಟುಂಬದ 9 ಜನರ ಸಾವು?
ದಕ್ಷಿಣ ಲೆಬನಾನ್‌ನ ಶೆಬಾ ಪಟ್ಟಣ ಇದೀಗ ನರಕವಾಗಿದ್ದು, ಇಸ್ರೇಲ್ ಮಿಲಿಟರಿಯ ವಾಯು ದಾಳಿ ತೀವ್ರತೆಗೆ ಇದೀಗ ಒಂದೇ ಕುಟುಂಬದ 9 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 4 ಮಕ್ಕಳು ಕೂಡ ಸೇರಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇಸ್ರೇಲ್ ದಾಳಿಯ ಕುರಿತು ದಕ್ಷಿಣ ಲೆಬನಾನ್‌ನ ಶೆಬಾ ಪಟ್ಟಣದ ಮೇಯರ್ ಮಾಹಿತಿ ನೀಡಿದ್ದು, ದಾಳಿ ತೀವ್ರತೆ ಹೆಚ್ಚಾದ ಕಾರಣ ಜನರು ಕೂಡ ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲೇ ಭೂ ದಾಳಿ ಮೂಲಕ, ಶತ್ರುಗಳ ನೆಲವನ್ನು ತನ್ನ ವಶಕ್ಕೆ ಪಡೆಯಲು ಈಗ ಇಸ್ರೇಲ್ ಸೇನೆ ಸಿದ್ಧತೆ ನಡೆಸಿದೆ. ಈ ಮೂಲಕ ಭೂ ಕಾರ್ಯಾಚರಣೆ ಕೂಡ ಶುರುವಾಗಲಿದೆ ಎಂಬ ಭಯ ಆವರಿಸಿದೆ.
3ನೇ ಮಹಾಯುದ್ಧಕ್ಕೆ ಮುನ್ನುಡಿ?
ಇಸ್ರೇಲ್ & ಲೆಬನಾನ್ ಮಾತ್ರವಲ್ಲ ಇಸ್ರೇಲ್ & ಗಾಜಾ ಪಟ್ಟಿ ನಡುವೆ ನಡೆಯುತ್ತಿರುವ ಈ ತಿಕ್ಕಾಟ ನೋಡುತ್ತಿದ್ದರೆ ಶೀಘ್ರದಲ್ಲೇ ಮತ್ತೊಂದು ಮಹಾಯುದ್ಧ, ಅಂದ್ರೆ 3ನೇ ಮಹಾಯುದ್ಧ ಗ್ಯಾರಂಟಿ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಇಬ್ಬರ ನಡುವೆ ಶುರುವಾಗಿರುವ ಯುದ್ಧ ಈಗಾಗಲೇ ಭಯ ಹುಟ್ಟು ಹಾಕಿದೆ. ಇದು ಸಾಲದು ಎನ್ನುವಂತೆ ಸಿರಿಯಾ ವಿರುದ್ಧ ಕೂಡ ಇಸ್ರೇಲ್ ತನ್ನ ದಾಳಿ ಹೆಚ್ಚಿಸಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಈಗಾಗಲೇ 3 ದೇಶಗಳು ನೇರ ಯುದ್ಧ ಮಾಡುತ್ತಿದ್ದು, ಇರಾನ್ ಕೂಡ ಯುದ್ಧಕ್ಕೆ ಎಂಟ್ರಿ ಆಗಲು ಕಾಯುತ್ತಿದೆ. ಹೀಗಾಗಿ, ಇಸ್ರೇಲ್‌ನ ಸೈಲೆಂಟ್ ಮಾಡಿಸಲು ಅಮೆರಿಕ ಕೂಡ ಪರದಾಡುತ್ತಿದೆ. ಮತ್ತೊಂದು ಕಡೆ ಈ ಯುದ್ಧ ನಿಲ್ಲಿಸಲ್ಲ, ಹಿಜ್ಬುಲ್ಲಾ ಬಂಡುಕೋರರು ಶರಣಾಗಬೇಕು ಎಂದು ಇಸ್ರೇಲ್ ಸೇನೆಯು ಪಟ್ಟು ಹಿಡಿದು ಕೂತಿದೆ.












Click it and Unblock the Notifications