Israel: ಇಸ್ರೇಲ್ ಮಿಲಿಟರಿ ಕೈಗೆ ಸಿಕ್ಕಿಬಿದ್ದ ಹಮಾಸ್‌ನ 100 ಶಂಕಿತರು!
ಇಸ್ರೇಲ್ ಮಿಲಿಟರಿ ತನ್ನ ಕಾರ್ಯಾಚರಣೆ ತೀವ್ರಗೊಳಿಸಿ, ಹಮಾಸ್ ನಾಶ ಮಾಡಲು ತನ್ನದೇ ರೀತಿಯ ಆಪರೇಷನ್ ಶುರು ಮಾಡಿದೆ. ಒಂದು ಕಡೆ ಇಸ್ರೇಲ್ ಮಿಲಿಟರಿ ಕೊಡುತ್ತಿರುವ ಈ ಏಟಿಗೆ ನಲುಗಿ ಹೋಗಿರುವ ಹಮಾಸ್ ಸದಸ್ಯರು ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ. ಈ ಸಮಯದಲ್ಲೇ ಇನ್ನೊಂದು ಕಡೆ ಗಾಜಾ ಪಟ್ಟಿ ಭಾಗದಲ್ಲಿ ಹಿಂಸಾಚಾರ ಕೂಡ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ, ದಿಢೀರ್ ಇಸ್ರೇಲ್ ಮಿಲಿಟರಿ ಕೈಗೆ ಹಮಾಸ್‌ನ 100 ಶಂಕಿತರು ಸಿಕ್ಕಿ ಬಿದ್ದಿದ್ದಾರೆ.
ಗಾಜಾ ಪಟ್ಟಿಯ ಭಾಗಕ್ಕೆ ನುಗ್ಗಿರುವ ಇಸ್ರೇಲ್ ಸೇನೆ ಈಗಾಗಲೇ ಸುರಂಗ & ಇತರ ಕಡೆಗಳಲ್ಲಿ ಹುಡುಕಾಡಿ ಹಮಾಸ್ ಸದಸ್ಯರ ಜೀವ ತೆಗೆಯುತ್ತಿದೆ. ಅದರಲ್ಲೂ ನಿರಾಶ್ರಿತರ ಶಿಬಿರ ಇರುವ ಕಡೆಗಳಲ್ಲಿ ಕೂಡ ಇದೇ ರೀತಿಯ ಆಪರೇಷನ್ ನಡೆಸುತ್ತಿದೆ ಇಸ್ರೇಲ್ ಸೇನೆ. ಅದೇ ರೀತಿಯಾಗಿ ಇಸ್ರೇಲ್ ಮಿಲಿಟರಿ ಇದೀಗ ದಿಢೀರ್ ಉತ್ತರ ಗಾಜಾದ ಆಸ್ಪತ್ರೆಗೆ ನುಗ್ಗಿದ್ದು, ಆಸ್ಪತ್ರೆ ಒಳಗೆ ಇದ್ದ ಹಮಾಸ್ ಶಂಕಿತರನ್ನು ಏನು ಮಾಡಿದೆ ಗೊತ್ತೆ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ಶಂಕಿತರ ಬಂಧನಕ್ಕೆ ಇಸ್ರೆಲ್ ಹುಡುಕಾಟ
ಗಾಜಾ ಭಾಗದಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆಗೆ ಈಗಾಗಲೇ ಸುಮಾರು 40,000 ಜನರು ಬಲಿಯಾಗಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗ ನಿರಾಶ್ರಿತರ ಶಿಬಿರಗಳ ಒಳಗೆ ಹಮಾಸ್ ಸದಸ್ಯರು ಆಶ್ರಯ ಪಡೆದಿದ್ದಾರೆ ಎಂಬ ಆರೋಪ ಇಸ್ರೇಲ್ ಸೇನೆಯದ್ದು.
ಇದೇ ಅನುಮಾನದ ಕಾರಣಕ್ಕೆ ಗಾಜಾ ಭಾಗದ ಬೀಟ್ ಲಾಹಿಯಾ ಪ್ರದೇಶದಲ್ಲಿ ಇರುವ ಆಸ್ಪತ್ರೆ ಮೇಲಿ ಅಟ್ಯಾಕ್ ಮಾಡಿರುವ ಇಸ್ರೇಲ್ ಸೇನೆ ಶಂಕಿತ ಹಮಾಸ್ ಸದಸ್ಯರನ್ನು ವಶಕ್ಕೆ ಪಡೆದಿದೆ. ಸುಮಾರು 100 ಶಂಕಿತರು ಈ ರೀತಿ ಇಸ್ರೇಲ್ ಮಿಲಿಟರಿ ಕೈಗೆ ಸಿಕ್ಕಿಬಿದ್ದಿದ್ದಾರೆ.
ಯುದ್ಧ ನಿಲ್ಲುವ ಗ್ಯಾರಂಟಿ ಇಲ್ಲ!
ಗಾಜಾ ಪಟ್ಟಿ ಉತ್ತರ ಭಾಗದಲ್ಲಿ ನಿರಾಶ್ರಿತರ ಕಟ್ಟಡದ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಒಟ್ಟು 93 ಜನ ಬಲಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ಯುದ್ಧ ಕ್ಷಣಕ್ಷಣಕ್ಕೂ ಇದೀಗ ಭೀಕರವಾಗುತ್ತಿದೆ. ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಇನ್ನೂ ಎಷ್ಟು ಜನ ಈ ಯುದ್ಧಕ್ಕಾಗಿ ಜೀವನವನ್ನೇ ತ್ಯಾಗ ಮಾಡ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ಯುದ್ಧ ನಿಲ್ಲಿಸಲು ಜಗತ್ತಿನ ಹಲವು ದೇಶಗಳು ಯತ್ನಿಸುತ್ತಿವೆ. ಆದ್ರೆ ಇದ್ಯಾವುದೂ ಫಲ ನೀಡುತ್ತಿಲ್ಲ, ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.












Click it and Unblock the Notifications