ಉಕ್ರೇನ್‌ಗೆ ಸಿಗುತ್ತಾ ಇಸ್ರೇಲ್ ಸೇನೆಯ ಭಯಾನಕ ಅಸ್ತ್ರ? ಅಮೆರಿಕದ ರಣತಂತ್ರ ಕಡೆಗೂ ಸಕ್ಸಸ್!

ಕೀವ್: ರಷ್ಯಾ ವಿರುದ್ಧ ಭೀಕರ ಕಾಳಗದಲ್ಲಿ ಉಕ್ರೇನ್ ಸೊರಗಿ ಹೋಗಿದೆ. ಹೀಗಾಗಿ ಅದರ ಆಪ್ತ ಮಿತ್ರ ಅಮೆರಿಕ ಈಗ ಉಕ್ರೇನ್ ಬೆಂಬಲಕ್ಕೆ ನಿಂತಿದೆ. ಇದೇ ಸಂದರ್ಭದಲ್ಲಿ ಇಸ್ರೇಲ್ ಕೂಡ ಅನಿವಾರ್ಯ ಸ್ಥಿತಿಯಲ್ಲಿ ಯುದ್ಧ ಭೂಮಿ ಪ್ರವೇಶ ಮಾಡುತ್ತಿದೆ. ಅಮೆರಿಕ ಹಾಕಿರುವ ಒತ್ತಡಕ್ಕೆ ಮಣಿದು ಉಕ್ರೇನ್‌ಗೆ ತನ್ನ ಭಯಾನಕ ಶಸ್ತ್ರಾಸ್ತ್ರಗಳನ್ನು ನೀಡುವ ಸಾಧ್ಯತೆ ಈಗ ದಟ್ಟವಾಗಿದೆ.

ಇಸ್ರೇಲ್ ಇಷ್ಟುದಿನ ಉಕ್ರೇನ್ ಮತ್ತು ರಷ್ಯಾ ಯುದ್ಧದ ವಿಚಾರದಲ್ಲಿ ಮೂಗು ತೂರಿಸದೇ ತನ್ನ ಪಾಡಿಗೆ ತಾನು ಇತ್ತು. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಒಂದಾಗಿ, ಉಕ್ರೇನ್-ರಷ್ಯಾ ಯುದ್ಧದಲ್ಲಿ ಪರೋಕ್ಷವಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿವೆ. ಈ ಕಾರಣಕ್ಕೆ ಇಸ್ರೇಲ್ ಮೇಲೆ ಕೂಡ ಒತ್ತಡ ಹೆಚ್ಚಾಗಿತ್ತು. ಈಗ ಕಡೆಗೂ ಅಮೆರಿಕದ ಒತ್ತಡಕ್ಕೆ ಮಣಿದು ಇಸ್ರೇಲ್ ಅಧಿಕಾರಿಗಳು ಉಕ್ರೇನ್ ಜೊತೆ ಚರ್ಚೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅರೆ ಅಕಸ್ಮಾತ್ ಇಸ್ರೇಲ್ ಉಕ್ರೇನ್ ಬೆನ್ನಿಗೆ ನಿಂತರೆ ಏನಾಗಬಹುದು? ಆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ (Russia Ukraine War).

Israel may be support Ukraine

ಇಸ್ರೇಲ್ ತುಂಬಾ ಸ್ಟ್ರಾಂಗ್ ಗುರೂ!

ಹೌದು ಜಗತ್ತಿನ ಪುಟಾಣಿ ದೇಶವಾದರೂ ಇಸ್ರೇಲ್ ತುಂಬಾನೆ ಸ್ಟ್ರಾಂಗ್. ಜಗತ್ತಿನ ಶಕ್ತಿಶಾಲಿ ಸೇನೆಗಳ ಪೈಕಿ ಇಸ್ರೇಲ್ ಕೂಡ ಟಾಪ್ 10ರಲ್ಲಿ ಸ್ಥಾನ ಪಡೆದಿದೆ. ಹೀಗೆ ಶಕ್ತಿಶಾಲಿ ಸೇನೆಯ ಬೆಂಬಲ ಉಕ್ರೇನ್‌ಗೆ ಆನೆಬಲ ನೀಡಲಿದೆ. ಈಗಾಗಲೇ ಅಮೆರಿಕ ಮತ್ತು ನ್ಯಾಟೋ ಪಡೆಗಳ ಸಪೋರ್ಟ್ ಉಕ್ರೇನ್ ಸೇನೆಗೆ ಸಿಕ್ಕಿದೆ. ಇದೇ ಕಾರಣಕ್ಕೆ ರಷ್ಯಾ ಕೂಡ ಯುದ್ಧದಲ್ಲಿ ಹಿನ್ನಡೆ ಕಾಣುತ್ತಿರುವುದು ಸ್ಪಷ್ಟವಾಗುತ್ತಿದೆ. ಅಕಸ್ಮಾತ್ ಈಗ ಇಸ್ರೇಲ್ ಕೂಡ ಅಖಾಡಕ್ಕೆ ಪ್ರವೇಶ ಕೊಟ್ಟು, ಉಕ್ರೇನ್ ಪರ ನಿಂತರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಹಾಗೇ ಯುದ್ಧದ ತೀವ್ರತೆ ಕೂಡ ವಿನಾಶಕಾರಿ ಆಗಲಿದೆ ಅನ್ನೋ ಆತಂಕ ಮೂಡಿದೆ.

ಇಸ್ರೇಲ್ ಮಾದರಿ ಯುದ್ಧತಂತ್ರ?

ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್ ಆಪ್ತರೇ ಕೆಲವು ದಿನಗಳ ಹಿಂದಷ್ಟೇ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಎಲ್ಲ ಕಾರಣಕ್ಕೆ ಅಮೆರಿಕ ಮತ್ತು ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿವೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇಸ್ರೇಲ್ ಖುದ್ದು ಅಖಾಡಕ್ಕೆ ಪ್ರವೇಶ ಮಾಡಲಿದೆ ಅನ್ನೋ ಮಾತು ಈಗ ರಣರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದೆ.

Israel may be support Ukraine

ರಷ್ಯಾ ಪರಮಾಣು ಅಸ್ತ್ರ ಬಳಸುತ್ತಾ?

ಉಕ್ರೇನ್ & ರಷ್ಯಾ ನಡುವೆ ಯುದ್ಧ ಆರಂಭವಾಗಿ ಇಂದಿಗೆ ಸರಿಯಾಗಿ 477ನೇ ದಿನ. ಹೀಗೆ ಎರಡೂ ರಾಷ್ಟ್ರಗಳ ಯುದ್ಧ 16 ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ಇನ್ನೇನು 500 ದಿನಗಳನ್ನು ಕೂಡ ಯುದ್ಧ ಪೂರೈಸಲಿದೆ. ಆದರೆ ಈ ಸಂದರ್ಭದಲ್ಲೇ ರೊಚ್ಚಿಗೆದ್ದ ರಷ್ಯಾ ಉಗ್ರಾಣದ ಒಳಗಿಟ್ಟಿದ್ದ ಡೆಡ್ಲಿ ನ್ಯೂಕ್ಲಿಯರ್ ವೆಪನ್ ಹೊರತೆಗೆದಿದೆ. ಅಮೆರಿಕ ಅದೆಷ್ಟೇ ಬಾಯಿ ಬಡಿದುಕೊಂಡರೂ ಕೇರ್ ಮಾಡದೆ, ನೇರವಾಗಿ ನ್ಯೂಕ್ಲಿಯರ್ ಅಸ್ತ್ರಗಳನ್ನು ತನ್ನ ಸ್ನೇಹಿತ ಬೆಲಾರಸ್‌ಗೆ ಕೊಟ್ಟು ಕಳುಹಿಸಿದೆ. ಆದರೆ ಇಲ್ಲಿ ಭಯ ಪಡುವ ಪರಿಸ್ಥಿತಿ ಯಾಕೆ ಎದುರಾಗಿದೆ ಎಂದರೆ, ಬೆಲಾರಸ್ ಗಡಿಯಿಂದ ಕೇವಲ 200 ಕಿಲೋ ಮೀಟರ್ ದೂರದಲ್ಲಿ ಉಕ್ರೇನ್‌ನ ರಾಜಧಾನಿ ಇದೆ (Nuclear Weapons).

ಒಟ್ನಲ್ಲಿ ದಿನದಿಂದ ದಿನಕ್ಕೆ ಭಯಾನಕ ರೂಪ ಪಡೆಯುತ್ತಿರುವ ಉಕ್ರೇನ್ ಹಾಗೂ ರಷ್ಯಾ ಯುದ್ಧಕ್ಕೆ ಮತ್ತೊಂದು ಶಕ್ತಿಶಾಲಿ ದೇಶ ಎಂಟ್ರಿ ಕೊಡೋದು ಬಹುತೇಕ ಗ್ಯಾರಂಟಿ ಆಗಿದೆ. ಶೀಘ್ರದಲ್ಲೇ ಇಸ್ರೇಲ್ ಬಳಿ ಇರುವ ಶಕ್ತಿಶಾಲಿ ಅಸ್ತ್ರ ಉಕ್ರೇನ್ ಸೇನೆಗೆ ಸೇರುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ ಯಾವುದನ್ನೂ ಅಧಿಕೃತವಾಗಿ ತಿಳಿಸಲಾಗಿಲ್ಲ. ಹೀಗಾಗಿ ಇನ್ನೂ ಒಂದಷ್ಟು ದಿನ ಕಾದು ನೋಡುವ ತಂತ್ರ ಕೂಡ ನಡೆಯುತ್ತಿದೆ. ಆದ್ರೆ ಅಪ್ಪಿತಪ್ಪಿ ಇಸ್ರೇಲ್ ಉಕ್ರೇನ್ ಬೆನ್ನಿಗೆ ನಿಂತರೆ ಯುದ್ಧ ಇನ್ನಷ್ಟು ಭೀಕರವಾಗುವುದು ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+