Israel-Hamas war: ಗಾಜಾ ಪಟ್ಟಿ ಬಳಿ 1,500 ಹಮಾಸ್ ಉಗ್ರರ ಶವ ಪತ್ತೆ: ಪ್ರತಿಕಾರದ ಅತಿರೇಕ ಮೆರೆಯುತ್ತಿರುವ ಇಸ್ರೇಲ್

Israel-Hamas war updates: ಹಮಾಸ್‌ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್‌ ಭೀಕರ ದಾಳಿ ಮಾಡುತ್ತಿದೆ. ಗಾಜಾ ಪಟ್ಟಿಯಲ್ಲಿ ಬಾಂಬುಗಳ ಸುರಿಮಳೆಗೈಯುತ್ತಿದೆ. ಹಮಾಸ್‌ ಉಗ್ರರ ಅಡಗುದಾಣಗಳನ್ನು ನಿರ್ನಾಮ ಮಾಡುತ್ತಿದೆ. ಇದೇ ವೇಳೆ, ಗಾಜಾ ಪಟ್ಟಿ ಬಳಿ 1,500 ಹಮಾಸ್ ಉಗ್ರರ ಶವ ಪತ್ತೆಯಾಗಿದೆ ಎಂದು ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ.

ಗಾಜಾದಲ್ಲಿ ಹಮಾಸ್ ಉಗ್ರರನ್ನು ಗುರಿಯಾಗಿಸಿ ಭಾರಿ ಪ್ರಮಾಣದಲ್ಲಿ ವಾಯು ಮತ್ತು ಫಿರಂಗಿ ಬಾಂಬ್ ದಾಳಿಗಳನ್ನು ಇಸ್ರೇಲ್‌ ನಡೆಸುತ್ತಿದೆ ಎಂದು ವರದಿಯಾಗಿದೆ.

Israel-Hamas war: 1,500 bodies of Hamas militants found in near Gaza Strip

ಗಾಜಾ ಪಟ್ಟಿಯ ಸುತ್ತ ಸುಮಾರು 1,500 ಹಮಾಸ್ ಉಗ್ರರ ಶವಗಳು ಪತ್ತೆಯಾಗಿವೆ ಎಂದು ಸೈನ್ಯವು ಮಂಗಳವಾರ ತಿಳಿಸಿದೆ.

'ಗಾಜಾ ಪಟ್ಟಿಯ ಸುತ್ತ ( ಇಸ್ರೇಲ್‌ ಒಳಗೆ ) ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ' ಎಂದು ಮಿಲಿಟರಿ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗಾಜಾದೊಂದಿಗೆ ಅಂಟಿಕೊಂಡಿರುವ ಗಡಿಯ ಮೇಲೆ ಇಸ್ರೇಲ್‌ ನಿಯಂತ್ರಣ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.

Israel-Hamas war: 1,500 bodies of Hamas militants found in near Gaza Strip

'ಕಳೆದ ರಾತ್ರಿಯಿಂದ ಯಾರೂ ಒಳಗೆ ಬಂದಿಲ್ಲವೆಂಬುದ ನನಗೆ ಗೊತ್ತಾಗಿದೆ. ಆದರೆ ಒಳನುಸುಳುವಿಕೆಗಳು ಇನ್ನೂ ಸಂಭವಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ' ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಗಡಿಯ ಸುತ್ತಲಿನ ಎಲ್ಲಾ ಸಮುದಾಯಗಳ ಸ್ಥಳಾಂತರ ಪ್ರಕ್ರಿಯೆಯನ್ನು ಸೇನೆಯು ಬಹುತೇಕ ಪೂರ್ಣಗೊಳಿಸಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಶನಿವಾರ ಬೆಳಿಗ್ಗೆ ರಾಕೆಟ್ ಮೂಲಕ ಗುಂಡಿನ ದಾಳಿಯನ್ನು ಹಮಾಸ್‌ ಉಗ್ರರು ಇಸ್ರೇಲ್‌ನಲ್ಲಿ ಆರಂಭಿಸಿದರು. ಗಡಿಗಳ ಮೂಲಕ ನುಗ್ಗಿರುವ ಹಮಾಸ್‌ ಉಗ್ರರು ಇಸ್ರೇಲ್‌ನಲ್ಲಿ ಈ ವರೆಗೂ 900 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ. ಹಮಾಸ್ ಉಗ್ರರ ಮಾರಣಾಂತಿಕ ದಾಳಿಗೆ ಇಸ್ರೇಲ್ ತತ್ತರಿಸಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳ ಮೇಲೆ ಬೃಹತ್ ವಾಯು ಮತ್ತು ಫಿರಂಗಿ ಬಾಂಬ್ ದಾಳಿಯನ್ನು ಇಸ್ರೇಲ್‌ ನಡೆಸುತ್ತಿದೆ.

ಗಾಜಾದಲ್ಲಿ 1,00,000 ಕ್ಕೂ ಹೆಚ್ಚು ಜನರ ಸ್ಥಳಾಂತರ

ವಿಶ್ವಸಂಸ್ಥೆ ಪ್ರಕಾರ, ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. ಮನೆಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳ ಮೇಲೆ ಶೆಲ್ ದಾಳಿಗಳು ನಡೆದಿವೆ. ಗಾಜಾದಲ್ಲಿ ಈ ವರೆಗೂ ಸುಮಾರು 1,23,538 ಜನರನ್ನು ಸ್ಥಳಾಂತರ ಮಾಡಲಾಗಿದೆ.

ನಾಗರಿರಕರನ್ನು ತಮ್ಮ ಮನೆಗಳಿಂದ ಪಲಾಯನ ಮಾಡವಂತೆ ಅಲ್ಲಿನ ಆಡಳಿತ ಸೂಚಿಸಿದೆ. ಅನೇಕರು ಕರಾವಳಿ ತೀರದಲ್ಲಿರುವ ಸುಮಾರು 64 ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುಎನ್ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ತನ್ನ ಇತ್ತೀಚಿನ ಮಾಹಿತಿಯಲ್ಲಿ ತಿಳಿಸಿದೆ.

ಇಸ್ರೇಲಿ ದಾಳಿಯಲ್ಲಿ ನಾಶವಾದ ಕಟ್ಟಡಗಳು ಬಹುತೇಕ ವಸತಿ ಘಟಕಗಳಾಗಿವೆ. ಬಹು ಮಹಡಿ ಕಟ್ಟಡಗಳನ್ನೇ ಇಸ್ರೇಲ್‌ ನಾಶಪಡಿಸುತ್ತಿದೆ. ಈ ವರೆಗೆ ಒಟ್ಟು 159 ವಸತಿ ಘಟಕಗಳು ನಾಶವಾಗಿವೆ. 1,210 ಕಟ್ಟಡಗಳು ತೀವ್ರ ಹಾನಿಯನ್ನು ಅನುಭವಿಸಿವೆ ಎಂಬ ಮಾಹಿತಿಯನ್ನು ಯುಎನ್ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+