‘ಗಾಜಾಪಟ್ಟಿ’ ಪ್ರದೇಶವನ್ನು ಮತ್ತೆ ವಶಕ್ಕೆ ಪಡೆಯುತ್ತಾ ಇಸ್ರೇಲ್?

ಹಮಾಸ್ ಉಗ್ರರು VS ಇಸ್ರೇಲ್ ನಡುವೆ ರಣರಂಗ ರಕ್ತಪಾತವಾಗಿದ್ದು, ಎಲ್ಲೆಲ್ಲೂ ಶವಗಳೇ ಕಾಣುತ್ತಿವೆ. ಸಾವಿರಾರು ಜನರು ಬಲಿಯಾಗಿ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದರೂ ಯುದ್ಧದ ರಕ್ತದಾಹ ಕಡಿಮೆಯಾಗಿಲ್ಲ. ಪರಿಸ್ಥಿತಿ ಹೀಗಿದ್ದಾಗಲೇ ಇಸ್ರೇಲ್ ಸೇನೆ ಮತ್ತೊಮ್ಮೆ 'ಗಾಜಾಪಟ್ಟಿ' ನಗರವನ್ನು ತನ್ನ ವಶಕ್ಕೆ ಪಡೆಯುತ್ತಾ? ಎಂಬ ಪ್ರಶ್ನೆ ಭುಗಿಲೆದ್ದಿದೆ.

ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ ಇದುವರೆಗೂ ಹತ್ತಿರ ಹತ್ತಿರ 11,000 ಪ್ಯಾಲೆಸ್ತೀನ್ ಜನರು ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ 4,000ಕ್ಕೂ ಹೆಚ್ಚು ಮಕ್ಕಳೇ ಸೇರಿದ್ದಾರೆ. ಇಸ್ರೇಲ್ ಕಡೆ ಕೂಡ 1,400ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹೀಗಿದ್ದರೂ ಯುದ್ಧ ಮಾತ್ರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಜೊತೆಗೆ 'ಗಾಜಾಪಟ್ಟಿ' ನಗರದ ಮೇಲೆ ಇಸ್ರೇಲ್ ಮತ್ತೆ ತನ್ನ ಹಕ್ಕು ಸಾಧಿಸಿ, ಗಾಜಾಪಟ್ಟಿ ನಗರವನ್ನ ವಶಕ್ಕೆ ಪಡೆಯುತ್ತದೆ ಎಂಬ ಸುದ್ದಿ ಭುಗಿಲೆದ್ದ ಬೆನ್ನಲ್ಲೇ ಈ ಬಗ್ಗೆ ಇಸ್ರೇಲ್ ಸ್ಪಷ್ಟನೆ ನೀಡಿದೆ.

Israel Gave Explanation Why They Will Not Acquiring The Gaza Strip After War

'ಗಾಜಾಪಟ್ಟಿ' ಸಂಪೂರ್ಣ ಇಸ್ರೇಲ್ ವಶಕ್ಕೆ?

ಹೌದು ಈ ಹಿಂದೆ ಕೂಡ ಇಸ್ರೇಲ್ ಸೇನೆ ಇದೇ ರೀತಿ 'ಗಾಜಾಪಟ್ಟಿ' ನಗರದ ಮೇಲೆ ದಾಳಿ ಮಾಡಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಆದ್ರೆ ಅಂತಾರಾಷ್ಟ್ರೀಯ ಒಪ್ಪಂದ ಹಿನ್ನೆಲೆ ತನ್ನ ಸೇನೆಯ ಹಿಂದಕ್ಕೆ ಪಡೆದಿತ್ತು. ಹೀಗಿದ್ದಾಗ ಕಳೆದ ತಿಂಗಳು, ಅಂದ್ರೆ ಅಕ್ಟೋಬರ್ 7 ರಂದು ಹಮಾಸ್ ಹಾಗೂ ಇಸ್ರೇಲ್ ನಡುವೆ ಮತ್ತೆ ಯುದ್ಧ ಶುರುವಾದಾಗ ಪರಿಸ್ಥಿತಿ ಕೈಮೀರಿತ್ತು. ಹೀಗಾಗಿ ಮತ್ತೊಮ್ಮೆ ಇಸ್ರೇಲ್ 'ಗಾಜಾಪಟ್ಟಿ' ನಗರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ, ಎನ್ನುವ ಮಾತು ಬಿರುಗಾಳಿ ಎಬ್ಬಿಸಿತ್ತು. ಅಲ್ಲದೆ ಅಮೆರಿಕ ಕೂಡ ಇದೇ ಕಾರಣಕ್ಕೆ ತೀವ್ರ ಆಕ್ರೋಶ ಹೊರಹಾಕಿತ್ತು ಎಂಬ ವರದಿ ಹೊರಬಿದ್ದಿತ್ತು. ಇದೀಗ ಅಸಲಿ ಕಹಾನಿ ರಿವೀಲ್ ಆಗಿದೆ.

ಇಸ್ರೇಲ್ ಹೇಳುತ್ತಿರುವುದು ಏನು?

ಹೀಗೆ ಗಾಜಾಪಟ್ಟಿ ನಗರವನ್ನು, ಇಸ್ರೇಲ್ ವಶಕ್ಕೆ ಪಡೆಯಲಿದೆ ಎಂಬ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿರುವ ಇಸ್ರೇಲ್ ಹಿರಿಯ ಸೇನಾಧಿಕಾರಿ. 'ಗಾಜಾ ನಗರವನ್ನ ಮತ್ತೆ ವಶಕ್ಕೆ ಪಡೆಯುವ ಯಾವುದೇ ಉದ್ದೇಶ ಇಸ್ರೇಲ್‌ಗೆ ಇಲ್ಲ' ಎಂದಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್‌ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. 'ಹಮಾಸ್‌ ಉಗ್ರರೊಂದಿಗೆ ಯುದ್ಧವು ಮುಗಿದ ಬಳಿಕ, ಗಾಜಾ ನಗರವನ್ನ ಇಸ್ರೇಲ್ ವಶಕ್ಕೆ ಪಡೆಯಬಾರದು' ಅಂತಾ ಬ್ಲಿಂಕೆನ್ ಹೇಳಿದ್ದು ಸುದ್ದಿಯಾಗಿತ್ತು. ಈಗ ಇಸ್ರೇಲ್ ಕೂಡ ಈ ಕುರಿತು ಸ್ಪಷ್ಟನೆ ನೀಡಿದೆ.

ಅಮೆರಿಕ ಏನ್ ಹೇಳಿತ್ತು ಗೊತ್ತಾ?

ಇನ್ನ ಜಪಾನ್‌ನಲ್ಲಿ ನಡೆದ ವಿದೇಶಾಂಗ ಸಚಿವರ ಸಭೆ ವೇಳೆ ಬ್ಲಿಂಕೆನ್‌ ಮಾತನಾಡಿ ಈ ಬಗ್ಗೆ ಹೇಳಿಕೆ ನೀಡಿದ್ದರು, 'ಗಾಜಾದ ನೆಲದಿಂದ ಯಾವುದೇ ಕಾರಣಕ್ಕೂ ಪ್ಯಾಲೆಸ್ತೀನ್ ಪ್ರಜೆಗಳನ್ನ ಬಲವಂತದಿಂದ ಹೊರಗೆ ಕಳುಹಿಸಬಾರದು. ಹಾಗೆ ಯುದ್ಧ ಮುಗಿದ ಬಳಿಕ ಗಾಜಾಪಟ್ಟಿಯ ಜಾಗವನ್ನ ಇಸ್ರೇಲ್ ತನ್ನ ವಶಕ್ಕೆ ಪಡೆಯಬಾರದು' ಎಂದು ಖಡಕ್ ಸೂಚನೆ ನೀಡಿದ್ದರು. ಈ ಹೇಳಿಕೆ ನಂತರ ಇಸ್ರೇಲ್ ಹಾಗೂ ಅಮೆರಿಕದ ಮಧ್ಯೆ ಬಿರುಸಿನ ಮಾತುಕತೆ ನಡೆದಿತ್ತು. ಇದೇ ಕಾರಣಕ್ಕೆ ಈಗ ಇಸ್ರೇಲ್ ಕೂಡ ಸ್ಪಷ್ಟನೆ ನೀಡಿದಂತೆ ಕಾಣುತ್ತಿದೆ.

Israel Gave Explanation Why They Will Not Acquiring The Gaza Strip After War

ಹೀಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇಸ್ರೇಲ್‌ನ ಹಿರಿಯ ಸೇನಾಧಿಕಾರಿ, ಹಮಾಸ್ ವಿರುದ್ಧ ಹೋರಾಟ ಮುಂದುವರಿದಿದೆ ಎಂದು ತಿಳಿಸಿದ್ದು. ಗಾಜಾಪಟ್ಟಿ ಕರಾವಳಿ ಭಾಗದಲ್ಲಿ ದಾಳಿ ಮಾಡುತ್ತಿದ್ದೇವೆ. ಆದರೆ 'ಗಾಜಾಪಟ್ಟಿ'ಯನ್ನ ಮತ್ತೆ ವಶಕ್ಕೆ ಪಡೆಯುವ ಇಲ್ಲವೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಉದ್ದೇಶ ಇಲ್ಲ ಎಂದಿದ್ದಾರೆ. ಈ ಹೇಳಿಕೆಯ ಮೂಲಕ ಇಸ್ರೇಲ್ ಮತ್ತೆ ಗಾಜಾಪಟ್ಟಿ ನಗರವನ್ನ ತನ್ನ ವಶಕ್ಕೆ ಪಡೆಯಲ್ಲ ಎಂಬುದು ಸ್ಪಷ್ಟವಾಗಿದೆ. ಯುದ್ಧದ ಅಂತಿಮ ಹಂತದಲ್ಲಿ ಇರುವ ಇಸ್ರೇಲ್ ಸೇನೆ, ಇದೀಗ ಹಮಾಸ್ ಉಗ್ರರ ನೆಲೆಗಳ ಮೇಲೆ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. ಉಗ್ರರ ಮೇಲೆ ದಾಳಿ ಮಾಡಲು, ಹಮಾಸ್ ಉಗ್ರರ ಸುರಂಗವನ್ನೇ ಟಾರ್ಗೆಟ್ ಮಾಡುತ್ತಿದೆ ಇಸ್ರೇಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+