Gaza War: ಪ್ಯಾಲೆಸ್ತೀನ್ ವೈದ್ಯರ ಸಾವಿಗೆ ಇಸ್ರೇಲ್ ಸೇನಾಧಿಕಾರಿ ಅಮಾನತು?

ಗಾಜಾ ಮೇಲೆ ದಾಳಿ ಮಾಡುವ ಭರದಲ್ಲಿ ಇಸ್ರೇಲ್ ಮಾಡಿಕೊಂಡ ಎಡವಟ್ಟುಗಳು ಒಂದಾ, ಎರಡಾ. ಹೀಗೆ ಹೇಳುತ್ತಾ ಹೋದರೆ ಅದರ ಪಟ್ಟಿಗೆ ಕೂಡ ಇತಿಮಿತಿ ಇರುವುದಿಲ್ಲ. ಇಸ್ರೇಲ್ ಈಗಾಗಲೇ ಅರ್ಧ ಲಕ್ಷಕ್ಕೂ ಹೆಚ್ಚು ಜನರನ್ನು ಗಾಜಾ ಪಟ್ಟಿಯಲ್ಲಿ ಬಲಿ ಹಾಕಿದೆ ಎಂಬ ಭಾರಿ ಗಂಭೀರ ಆರೋಪ ಇದೆ. ಜಾಗತಿಕ ಮಟ್ಟದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ಬಗ್ಗೆ ಚರ್ಚೆ ನಡೆಯುವಾಗಲೇ, ಪ್ಯಾಲೆಸ್ತೀನ್ ವೈದ್ಯರ ಸಾವಿಗೆ ಇಸ್ರೇಲ್ ಸೇನಾಧಿಕಾರಿ ಅಮಾನತು?

ಮಧ್ಯಪ್ರಾಚ್ಯ ಒಡೆದ ಮನೆಯಾಗಿದ್ದು, ಗಾಜಾ ಪಟ್ಟಿಯಲ್ಲಿ ರಕ್ತದ ನದಿಯೇ ಹರಿಯುತ್ತಿದೆ. ಒಂದು ಕಡೆ ಇಸ್ರೇಲ್ ಸೇನೆಯಿಂದ ನಿರಂತರ ದಾಳಿ ನಡೆಯುತ್ತಿದ್ದು, ಇನ್ನೊಂದು ಕಡೆಯಲ್ಲಿ ಗಾಜಾ ಪಟ್ಟಿ ನಿವಾಸಿಗಳು ಕೂಡ ಜೀವ ಕಳೆದುಕೊಂಡು ನರಳುತ್ತಿದ್ದಾರೆ. ಹೀಗಿದ್ದಾಗ ಲಕ್ಷ, ಲಕ್ಷ ನಿರಾಶ್ರಿತರು ಗಾಜಾ ಪಟ್ಟಿಯಲ್ಲಿ ಇರುವ ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿದ್ದರು. ಆದರೆ ಇಸ್ರೇಲ್ ಸೇನೆ ಅಧಿಕಾರಿಗಳು ಆಸ್ಪತ್ರೆಗಳ ಮೇಲೆಯೂ ದಾಳಿ ಮಾಡುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಇದೆ. ಇಷ್ಟೆಲ್ಲದರ ನಡುವೆ ಇಸ್ರೇಲ್ ಸೇನೆಯ ಕೃತ್ಯಕ್ಕೆ ಸಿಕ್ಕಾಪಟ್ಟೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇಂತಹ ಸಮಯದಲ್ಲೇ ಮಹತ್ವದ ಕ್ರಮ ಕೈಗೊಳ್ಳಲು ಇಸ್ರೇಲ್ ಇದೀಗ ಮುಂದಾಗಿದೆ.

Israel Expected to Dismiss Deputy Commander Over Palestinian Medics Deaths

ಇಸ್ರೇಲ್ ಸೇನಾಧಿಕಾರಿಗಳ ವಿರುದ್ಧ ಕ್ರಮ?

ಹಮಾಸ್ & ಇಸ್ರೇಲ್ ನಡುವೆ ಯುದ್ಧ ಶುರುವಾದ ನಂತರ ಗಾಜಾ ಪಟ್ಟಿ ಸ್ಮಶಾನವಾಗಿದೆ. ಅಂದಹಾಗೆ ಇಸ್ರೇಲ್ ಮೇಲೆ ಒತ್ತಡ ಹೆಚ್ಚಾಗಿದ್ದು, ವಿಶ್ವಸಂಸ್ಥೆ ಸಿಬ್ಬಂದಿ ಸೇರಿದಂತೆ ಹಲವು ಅಮಾಯಕರ ಹತ್ಯೆಗೆ ನ್ಯಾಯ ಬೇಕು ಎಂಬ ಆಗ್ರಹ ಜಾಸ್ತಿ ಆಗಿತ್ತು. ಇದು ಇಸ್ರೇಲ್ ಮೇಲೆ ಸಿಕ್ಕಾಪಟ್ಟೆ ಒತ್ತಡ ಹೇರುವಂತೆ ಮಾಡುತ್ತಿರುವಾಗಲೇ, ತನಿಖೆಗೆ ಕೂಡ ಆಗ್ರಹ ಕೇಳಿ ಬಂದಿದೆ. ಹೀಗಾಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಇಸ್ರೇಲ್ ಮಹತ್ವದ ಕ್ರಮಕ್ಕೆ ಮುಂದಾಗಿದೆ. ತಪ್ಪು ಮಾಡಿದ ತಮ್ಮದೇ ದೇಶದ ಸೇನಾಧಿಕಾರಿಗಳ ವಿರುದ್ಧವೇ ಕ್ರಮಕ್ಕೆ ನಿರ್ಧಾರ ಮಾಡಿದೆ ಇಸ್ರೇಲ್ ಎಂಬ ಸುದ್ದಿಯು ಇದೀಗ ಹಲ್‌ಚಲ್ ಎಬ್ಬಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+