Israel & Gaza: ಇಸ್ರೇಲ್ ಸಂಸತ್‌ನಲ್ಲಿ ಸಿಗದ ಒಪ್ಪಿಗೆ, ಕದನ ವಿರಾಮ ವಿಳಂಬ

ಇಸ್ರೇಲ್ & ಗಾಜಾ ಪಟ್ಟಿ ನಡುವೆ ನಡೆಯುತ್ತಿರುವ ಘೋರ ಯುದ್ಧ ನಿಂತು ಹೋಯ್ತು ಬಿಡು ಅಂತಾ ಎಲ್ಲರೂ ಅಂದುಕೊಳ್ಳುವ ಸಮಯದಲ್ಲೇ, ಮತ್ತೊಮ್ಮೆ ಘೋರ ದಾಳಿ ಶುರುವಾಗಿದೆ. ಇಬ್ಬರ ನಡುವೆ ವಿಪರೀತ ತಿಕ್ಕಾಟ ಶುರುವಾಗಿದ್ದು, ಒಬ್ಬರ ಮೇಲೆ ಮತ್ತೊಬ್ಬರು ದಾಳಿಯ ನಡೆಸುತ್ತಿದ್ದಾರೆ. ಅದರಲ್ಲೂ ಇಸ್ರೇಲ್ ಸಂಸತ್ ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ನೀಡದ ಕಾರಣ ಇದೀಗ ಮತ್ತಷ್ಟು ಗೊಂದಲ ಸೃಷ್ಟಿಯಾಗಿದೆ.

ಇಸ್ರೇಲ್ & ಗಾಜಾ ಕಾಳಗದ ನಡುವೆ ಅಮೆರಿಕ ಮಧ್ಯ ಪ್ರವೇಶ ಮಾಡಿತ್ತು. ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ಅಮೆರಿಕ & ಇಸ್ರೇಲ್ ಒಟ್ಟಾಗಿ ಇದ್ದು, ಇಸ್ರೇಲ್‌ಗೆ ಯಾವುದೇ ಸಂಕಷ್ಟ ಬಂದಾಗ ಇದೇ ಅಮೆರಿಕ ಮಧ್ಯ ಪ್ರವೇಶ ಮಾಡಿ ಸಹಾಯ ಮಾಡುತ್ತದೆ. ಅದೇ ರೀತಿಯಾಗಿ ಸಪೋರ್ಟ್ ಮಾಡಿತ್ತು ಅಮೆರಿಕ. ಕೊನೆಗೆ ಅಮೆರಿಕದ ಸಹಾಯ ಪಡೆದು ಶಾಂತಿ ಒಪ್ಪಂದ ಮಾಡಿದ್ದು, ಹಮಾಸ್ & ಇಸ್ರೇಲ್ ಅಂತಿಮ ಒಪ್ಪಂದಕ್ಕೆ ಬಂದಿದ್ದವು. ಈ ಮೂಲಕ ಇಸ್ರೇಲ್ & ಗಾಜಾ ಯುದ್ಧ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇದೀಗ...

Israel Delays Vote on Gaza Ceasefire Deal Amid Ongoing Attacks

ಯುದ್ಧ ನಿಂತಿಲ್ಲ.. ಯುದ್ಧ ನಿಂತಿಲ್ಲ..!

ಹೌದು, ಇಸ್ರೇಲ್ ಸಂಸತ್ ಗಾಜಾ ಪಟ್ಟಿ ವಿರುದ್ಧದ ಯುದ್ಧ ನಿಲ್ಲಿಸಲು ಬಹುಮತ ನೀಡಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಇದೀಗ ಇಸ್ರೇಲ್ & ಗಾಜಾ ಯುದ್ಧ ನಿಂತಿಲ್ಲ ಎನ್ನಲಾಗಿದ್ದು, ಇಸ್ರೇಲ್ ಮಿಲಿಟರಿ ತನ್ನ ದಾಳಿಯನ್ನು ಮತ್ತಷ್ಟು ವೇಗಗೊಳಿಸಿದೆ. ಈ ಮೂಲಕ ಗಾಜಾ ಪಟ್ಟಿ ಜನರು ನರಳಾಡಿ ಹೋಗಿದ್ದಾರೆ, ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಿಂಸಾಚಾರ ಕೂಡ ನಡೆಯುವ ಭಯ ಕಾಡುತ್ತಿದೆ.

ಕದನ ವಿರಾಮದಲ್ಲೂ 72 ಜನರ ಸಾವು?

ಗಾಜಾ ಪಟ್ಟಿ ಆರೋಗ್ಯ ಸಚಿವಾಲಯ ಇದೀಗ ನೀಡಿರುವ ಮಾಹಿತಿ ಪ್ರಕಾರ ಹಮಾಸ್ & ಇಸ್ರೇಲ್ ಸರ್ಕಾರದ ನಡುವೆ ಮಾತುಕತೆ ನಡೆದು, ಕದನ ವಿರಾಮ ಘೋಷಣೆ ಮಾಡಿದ ನಂತರ ಕೂಡ ವಾಯುದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ರೀತಿ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ಕದನ ವಿರಾಮ ಸಮಯದಲ್ಲಿ ಕೂಡ ದಾಳಿ ನಡೆಸಿರುವ ಪರಿಣಾಮ ಸುಮಾರು 72 ಜನ ಮೃತಪಟ್ಟಿದ್ದಾರೆ ಅಂತಾ ಆರೋಪ ಮಾಡಲಾಗಿದೆ.

ಈ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಕದನ ವಿರಾಮದ ಬಗ್ಗೆ ಕೂಡ ಚರ್ಚೆ ಹುಟ್ಟುಹಾಕಿದೆ. ಹಾಗೇ ಗಾಜಾ ಪಟ್ಟಿ ಸೇರಿ ಸುತ್ತಮುತ್ತಲ ಜನರು ಇದೀಗ ಸಾವಿರಾರು ಸಮಸ್ಯೆಗಳ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದು ಮುಂದೆ ಏನು ಮಾಡುವುದು ತಿಳಿಯದೆ ಪರದಾಡುತ್ತಿದ್ದಾರೆ. ಇದೇ ಸಮಯದಲ್ಲಿ ಮತ್ತಷ್ಟು ಹಿಂಸಾಚಾರ ನಡೆಯುವ ಭೀತಿ ಆವರಿಸಿದೆ. ಹಾಗೇ ವಿಶ್ವಸಂಸ್ಥೆ ಕೂಡ ಅಸಹಾಯಕ ಸ್ಥಿತಿಗೆ ತಲುಪಿದೆ ಎಂಬ ಆಕ್ರೋಶ ಕೂಡ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+