Gaza War: ಲೆಬನಾನ್, ಗಾಜಾ & ಸಿರಿಯಾ ಜನರಿಗೆ ಶಾಕ್ ಕೊಟ್ಟ ಇಸ್ರೇಲ್

ಭೂಮಿಯ ಮೇಲೆ ನೆಮ್ಮದಿಯಾಗಿ ಬದುಕುವುದನ್ನು ಮನುಷ್ಯ ಲಕ್ಷಾಂತರ ವರ್ಷ ಕಳೆದರೂ ಕಲಿತಿಲ್ಲ, ಹಾಗೇ ಮುಂದಕ್ಕೂ ಕಲಿಯುವುದಿಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಯುದ್ಧ & ಹಿಂಸೆಯ ಬೇಗೆಯಲ್ಲಿ ಬೆಂದು ಹೋಗುತ್ತಿದೆ ಜಗತ್ತು. ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ, ಸಾಲು ಸಾಲು ಯುದ್ಧಗಳು ಆರಂಭವಾಗಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಇಷ್ಟೆಲ್ಲದರ ನಡುವೆ ಇದೀಗ ಮತ್ತೊಮ್ಮೆ ಮಧ್ಯಪ್ರಾಚ್ಯ ನಲುಗಿ ಹೋಗಿದೆ. ಇಸ್ರೇಲ್ ಕೊಟ್ಟ ಸುದ್ದಿಯನ್ನ ಕೇಳಿ ಲೆಬನಾನ್, ಗಾಜಾ & ಸಿರಿಯಾ ಜನರು ಅಲ್ಲಾಡಿ ಹೋಗಿದ್ದಾರೆ.

ಮಧ್ಯಪ್ರಾಚ್ಯ ಭಾಗದಲ್ಲಿ ಒಟ್ಟು 3 ಯುದ್ಧಗಳು ನಡೆಯುತ್ತಿದ್ದು, ಅಶಾಂತ ವಾತಾವರಣ ಇದೆ. 2023ರ ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಗಾಜಾ & ಇಸ್ರೇಲ್ ನಡುವಿನ ಫೈಟಿಂಗ್ ಮುಂದೆ ಮಧ್ಯಪ್ರಾಚ್ಯ ಭಾಗದ ನೆಮ್ಮದಿ ಕೆಡಿಸಿತ್ತು. ಗಾಜಾ ಹಾಗೂ ಇಸ್ರೇಲ್ ಯುದ್ಧ ನಡೆಯುವಾಗಲೇ ದಿಢೀರ್ ಲೆಬನಾನ್ ಹಾಗೂ ಸಿರಿಯಾ ಜೊತೆಯಲ್ಲೂ ಇಸ್ರೇಲ್ ಕಿರಿಕ್ ಮಾಡಿ ಬಡಿದಾಡುವಂತೆ ಆಗಿತ್ತು. ಮತ್ತೊಂದು ಕಡೆ ಇನ್ನೇನು 3ನೇ ಮಹಾಯುದ್ಧ ಈ ಜಾಗದಿಂದಲೇ ಆರಂಭ ಆಗುತ್ತಾ? ಎಂಬ ಅನುಮಾನ ಮೂಡಿದ್ದಾಗ ಲೆಬನಾನ್ ಹಾಗೂ ಸಿರಿಯಾ ಜೊತೆ ಶಾಂತಿ ಒಪ್ಪಂದವನ್ನ ಇಸ್ರೇಲ್ ಮಾಡಿಕೊಂಡಿತ್ತು. ಆದರೆ ಇದೀಗ ಮತ್ತೆ ಯುದ್ಧದ ಕಿಚ್ಚು ಸ್ಫೋಟಗೊಂಡಿದೆ.

Israel Defense Minister Confirms That The Troops Will Stay in Lebanon Including Gaza And Syria

ಇಸ್ರೇಲ್ ಹೇಳಿದ್ದು ಕೇಳಿ ಶಾಕ್!

ಗಾಜಾ ಪಟ್ಟಿ ಸೇರಿದಂತೆ ಲೆಬನಾನ್ ಹಾಗೂ ಸಿರಿಯಾ ಜೊತೆಗೂ ಕಿರಿಕ್ ಮಾಡಿಕೊಂಡಿರುವ ಇಸ್ರೇಲ್ ಇದೀಗ ಮಹತ್ವದ ನಿರ್ಧಾರ ಪ್ರಕಟಿಸಿದೆ. ಅದು ಏನು ಅಂದ್ರೆ, ಗಾಜಾಪಟ್ಟಿ ಮತ್ತು ಲೆಬನಾನ್ & ಸಿರಿಯಾದ ಜೊತೆಗೆ ಇನ್ನೂ ಕಾದಾಟ ನಿಂತಿಲ್ಲ ಎಂಬುದನ್ನು ಪರೋಕ್ಷವಾಗೇ ತಿಳಿಸಿದೆ ಇಸ್ರೇಲ್. ಈ ಬಗ್ಗೆ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಸ್ ಹೇಳಿಕೆಯನ್ನ ನೀಡಿ ತಲ್ಲಣ ಎಬ್ಬಿಸಿದ್ದಾರೆ. ಭದ್ರತಾ ವಲಯಗಳು ಅಂತ ಕರೆಯಲಾಗುವ ಪ್ರದೇಶಗಳಲ್ಲಿ ನಮ್ಮ ಸೇನೆ ಅನಿರ್ದಿಷ್ಟಾವಧಿವರೆಗೆ ಇರಲಿದೆ ಎಂದಿದ್ದಾರೆ ಇಸ್ರೇಲ್‌ನ ರಕ್ಷಣಾ ಸಚಿವ ಕ್ಯಾಟ್ಸ್. ಈ ಮೂಲಕ ಇನ್ನಷ್ಟು ಟೆನ್ಷನ್ ಶುರುವಾಗಿದ್ದು, ಮಧ್ಯಪ್ರಾಚ್ಯ ನರಕವಾಗಿ ಬದಲಾಗಿದೆ.

ಲಕ್ಷಾಂತರ ಜನರು ಬೀದಿ ಪಾಲು...

ಈಗಾಗಲೇ ಗಾಜಾ ಪಟ್ಟಿಯಲ್ಲಿ ನಡೆದಿರುವ ದಾಳಿಯನ್ನು ಗಮನಿಸಿದರೆ ಇನ್ನೂ ಹಲವಾರು ವರ್ಷಗಳ ಕಾಲ ಗಾಜಾ ಪಟ್ಟಿ ಸುಧಾರಣೆ ಕಾಣುವುದೇ ಅನುಮಾನವಾಗಿದೆ. ಹೀಗಾಗಿ ಅಲ್ಲಿ ಜನರು ಮನೆ ಕಳೆದುಕೊಂಡು, ಬೀದಿಗೆ ಬಿದ್ದು ನರಳುತ್ತಿದ್ದಾರೆ. 2023ರ ಅಕ್ಟೋಬರ್ 7 ರಂದು ಶುರುವಾಗಿದ್ದ ಯುದ್ಧ ಈಗಾಗಲೇ 1 ವರ್ಷ ಮುಗಿಸಿ 2ನೇ ವರ್ಷಕ್ಕೆ ಕಾಲು ಇಟ್ಟಿದೆ. ಹೀಗೆ ಒಂದು ಕಡೆ ಯುದ್ಧ ಮುಂದುವರಿದರೆ, ಇನ್ನೊಂದು ಕಡೆ ಲಕ್ಷ ಲಕ್ಷ ಮನೆಗಳು & ಕಟ್ಟಡಗಳು ಕುಸಿದು ಬಿದ್ದಿವೆ. ಇದೇ ಸಮಯದಲ್ಲಿ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ಹಾಗೇ ಸುಮಾರು 24 ಲಕ್ಷ ಜನರು ಹಸಿವಿನಿಂದ ಸಾಯುವ ಸ್ಥಿತಿ ನಿರ್ಮಾಣ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+