ಪುಟ್ಟ ಕಂದನಿಗಾಗಿ ಟಿಕೆಟ್ ಖರೀದಿಸದೇ ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋದ ದಂಪತಿ!

ಕಂದಮ್ಮನಿಗಾಗಿ ಟಿಕೆಟ್ ಖರೀಸಿದೆ ವಿಮಾನ ನಿಲ್ದಾಣದಲ್ಲೇ ಬಿಟ್ಟು ದಂಪತಿ ತೆರಳಿರುವ ಕರುಣಾಜನಕ ಘಟನೆ ಇಸ್ರೇಲ್‌ನಲ್ಲಿ ನಡೆದಿದೆ.

ತಂದೆ ತಾಯಿ ಅದೆಷ್ಟೇ ಕಟುಕರಾಗಿದ್ದರೂ ತಮ್ಮ ಮಕ್ಕಳ ವಿಷಯದಲ್ಲಿ ಎಂದಿಗೂ ಪ್ರೀತಿ ಹೊಂದಿರುತ್ತಾರೆ. ಎಂತಹ ಸ್ಥಿತಿಯಲ್ಲು ಮಕ್ಕಳನ್ನು ಬಿಟ್ಟು ಕೊಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕೆಲವೊಂದು ಘಟನೆಗಳು ಇಂತಹ ನಂಬಿಕೆಯನ್ನು ತಲೆಕೆಳಗೆ ಮಾಡಿಬಿಡುತ್ತವೆ.

ಹೌದು, ಇಸ್ರೇಲ್‌ನ ಟೆಲ್ ಅವೀವ್‌ನ ವಿಮಾನ ನಿಲ್ದಾಣದ ಚೆಕ್ ಇನ್ ಕೌಂಟರ್‌ನಲ್ಲಿ ಮಗುವಿಗೆ ಟಿಕೆಟ್ ಇಲ್ಲ ಎಂದು ಅಪರಿಚಿತ ದಂಪತಿ ತಮ್ಮ ಕಂದಮ್ಮನನ್ನು ಬಿಟ್ಟು ಹೋಗಿದ್ದಾರೆ.

ಈ ದಂಪತಿ ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಲ್ಜಿಯಂನ ಬ್ರಸೆಲ್ಸ್‌ಗೆ ರಿಯಾನೇರ್ ಏರ್‌ಲೈನ್ಸ್ ವಿಮಾನದಲ್ಲಿ ಹೊರಟಿದ್ದರು. ತಪಾಸಣೆ ನಡೆಸುತ್ತಿದ್ದಾಗ ಮಗಿವಿಗಾಗಿ ಟಿಕೆಟ್ ತೆಗೆದುಕೊಳ್ಳದೇ ತಮ್ಮ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

Israel Couple refuses to buy ticket for infant, abandons at airport

ಚೆಕ್-ಇನ್ ಕೌಂಟರ್‌ನಲ್ಲಿದ್ದ ಅಧಿಕಾರಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ಎಚ್ಚರಿಸಿದರು. ತಕ್ಷಣ ಪ್ರಯಾಣಿಕರನ್ನು ಹಿಡಿದು ವಿಮಾನ ಹತ್ತದಂತೆ ತಡೆದಿದ್ದಾರೆ ಎಂದು ವರದಿ ತಿಳಿಸಿದೆ.

ರಿಯಾನೇರ್ ಏರ್‌ಲೈನ್ಸ್ ವಿಮಾನ ಬುಕ್ಕಿಂಗ್ ಮಾಡುವ ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಸೇರಿಸಬೇಕು ಎಂದು ತಿಳಿಸಲಾಗಿದೆ. ವಯಸ್ಕರ ತೊಡೆಯ ಮೇಲೆ ಮಕ್ಕಳನ್ನು ಕುರಿಸಿಕೊಂಡು ಹೋಗಲು ಒಂದು ಕಡೆಯ ಪ್ರಯಾಣಕ್ಕೆ ಏರ್‌ಲೈನ್ಸ್ 27 ಡಾಲರ್ ಶುಲ್ಕ ವಿಧಿಸುತ್ತದೆ. ವಯಸ್ಕರು ಮಗುವನ್ನು ಸೀಟಿನಲ್ಲಿ ಕುರಿಸಿ ಪ್ರಯಾಣಿಸಲು ಬಯಸಿದರೆ, ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬೇಕಾಗಿದೆ.

ವಿಮಾನದ ಚೆಕ್ ಇನ್ ಮುಗಿದ ನಂತರ ದಂಪತಿ ವಿಮಾನ ಏರಲು ತಡವಾಗಿ ಬಂದಿದ್ದಾರೆ. ಮಗುವನ್ನು ಬಿಟ್ಟು ವಿಮಾನದ ಬೋರ್ಡಿಂಗ್ ಗೇಟ್ ತಲುಪುವ ಪ್ರಯತ್ನದಲ್ಲಿದ್ದ ದಂಪತಿಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ ಎಂದು ವರದಿಯಾಗಿದೆ. ಬಳಿಕ ಈ ಸಮಸ್ಯೆಯನ್ನು ಇಸ್ರೇಲ್ ಪೊಲೀಸರು ಪರಿಹರಿಸಿದ್ದು, ಮಗು ಮತ್ತೆ ಪೋಷಕರ ಕೈ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+