Israel attacks Iran: ಇರಾನ್ ರಾಜಧಾನಿಗೆ ನುಗ್ಗಿದ ಇಸ್ರೇಲ್ ಪಡೆ, ಭೀಕರ ದಾಳಿ, ಮಹಾಯುದ್ಧದ ಆತಂಕ
Israel attacks Iran: ಶುಕ್ರವಾರ ಬೆಳಿಗ್ಗೆ ಇರಾನ್‌ನ ರಾಜಧಾನಿ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ತೆಹ್ರಾನ್‌ನಾದ್ಯಂತ ಸ್ಫೋಟಗಳ ಸದ್ದು ಕೇಳಿಬಂದಿದೆ. ಅಣುಸ್ಥಾವರ ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಇರಾನ್ ದೇಶವು ಅಣು ಯೋಜನೆಯನ್ನು ತೀವ್ರಗೊಳಿಸಿರುವ ಹಿನ್ನೆಲೆ ಈ ದಾಳಿಯನ್ನು ಮಾಡಲಾಗಿದೆ ಇಸ್ರೇಲ್ ಸಮಜಾಯಿಸಿ ನೀಡಿದೆ.
ಗಾಜಾಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ಅಮಾನುಷ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿಕೊಳ್ಳತ್ತಲೇ ಇದೆ. ಇದರ ಹಿನ್ನೆಲೆಯಲ್ಲಿ ಇರಾನ್ ದೇಶವು ಅಣು ಯೋಜನೆಯನ್ನು ತೀವ್ರಗೊಳಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಪರಿಣಾಮವಾಗಿ ಇಸ್ರೇಲ್ ದಾಳಿಗೆ ಮುಂದಾಗಿರಬಹುದು ಎಂಬ ಮಾತುಗಳನ್ನು ತಜ್ಞರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅಮೆರಿಕದ ಕಾರ್ಯದರ್ಶಿ ಮಾರ್ಕೋ ರೂಬಿಯೋ, 'ಇರಾನ್ ವಿರುದ್ಧ ಏಕಪಕ್ಷೀಯ ಕ್ರಮವನ್ನು ಇಸ್ರೇಲ್ ಕೈಗೊಂಡಿದೆ. ಈ ಕುರಿತು ಇಸ್ರೇಲ್ ಅನ್ನು ಸಂಪರ್ಕಿಸಿದ್ದೇವೆ. ಆತ್ಮರಕ್ಷಣೆಗೆ ಈ ದಾಳಿಯು ಅಗತ್ಯವೆಂದು ಇಸ್ರೇಲ್ ಹೇಳಿಕೊಂಡಿದೆ' ಎಂಬುದಾಗಿ ತಿಳಿಸಿದ್ದಾರೆ.
'ಇರಾನ್ ಮೇಲಿನ ದಾಳಿಗಳಲ್ಲಿ ನಮ್ಮ ಪಾತ್ರವಿಲ್ಲ. ಇದರಲ್ಲಿ ನಾವು ಭಾಗಿಯಾಗಿಲ್ಲ' ಎಂಬ ಹೇಳಿಕೆಯನ್ನು ವೈಟ್ ಹೌಸ್ ಬಿಡುಗಡೆ ಮಾಡಿದೆ. ಇರಾನ್‌ನ ಪರಮಾಣು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಹಲವು ದಾಳಿಗಳನ್ನು ಮಾಡಿದ್ದೇವೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ 15 ಪರಮಾಣು ಬಾಂಬ್‌ಗಳನ್ನು ತಯಾರಿಸುವಷ್ಟು ಸಾಮಗ್ರಿ ಇರಾನ್ ಬಳಿ ಇದೆ ಎಂದು ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಇರಾನ್ ತನ್ನ ಅಣು ಕಾರ್ಯಕ್ರಮವನ್ನು ವೇಗವಾಗಿ ಮುಂದುವರೆಸುತ್ತಿದೆ ಎಂದು ಪಶ್ಚಿಮ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಇರಾನ್‌ನ ಈ ನಡೆಯನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯು ತೀವ್ರವಾಗಿ ಟೀಕಿಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಹೊಸ ಅಣು ಸಮೃದ್ಧಿ ಕೇಂದ್ರವನ್ನು ಸ್ಥಾಪಿಸುವುದಾಗಿ ಹೇಳಿಕೊಂಡಿತ್ತು. ಇದು ಸಂಘರ್ಷಕ್ಕೆ ಗುರಿಮಾಡಿಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತ, 'ಇರಾನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇರಾನ್‌ನಲ್ಲಿ ನೆಲೆಗೊಂಡಿರುವ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಭಾರತ ಮೂಲದ ವ್ಯಕ್ತಿಗಳು ಜಾಗರೂಕರಾಗಿರಬೇಕು. ಅನಗತ್ಯವಾಗಿ ಹೊರಗೆ ಓಡಾಡಬಾರದು. ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅನುಸರಿಸಬೇಕು. ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ತಪ್ಪದೇ ಅನುಸರಿಸಬೇಕು' ಎಂದು ಸಲಹೆ ನೀಡಿದೆ.












Click it and Unblock the Notifications