Israel attacks Iran: ಅಮೆರಿಕಾ, ಇಸ್ರೇಲ್‌ನಿಂದ ಇರಾನ್‌ನ ಯಾವೆಲ್ಲಾ ಪ್ರದೇಶಗಳ ಮೇಲೆ ದಾಳಿ?
Israel attacks Iran: ಪರಮಾಣು ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ ಹಾಕದಿರುವ ಹಿನ್ನೆಲೆ ಇರಾನ್ ಮೇಲೆ ಪ್ರಾಬಲ್ಯ ಮೆರೆಯಲು ಇಸ್ರೇಲ್ ಮತ್ತು ಅಮೆರಿಕ ಒಂದಾಗಿ ಜಂಟಿ ದಾಳಿ ನಡೆಸಿವೆ. ಟೆಹ್ರಾನ್ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿ ನಡೆದಿದೆ. ಇದರಲ್ಲಿ ಇರಾನ್‌ನ ಅಧ್ಯಕ್ಷರ ಭವನ ಕೂಡ ಸೇರಿದೆ.
ಯಾವುದೇ ಮುನ್ಸೂಚನೆ ನೀಡದೇ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ತಿಳಿದುಬಂದಿದೆ. ಟೆಹ್ರಾನ್ ನಗರದ ಹಲವೆಡೆ ಭಾರೀ ಸ್ಫೋಟಗಳ ಶಬ್ಧ ಕೇಳಿಬಂದಿದ್ದು, ದಟ್ಟ ಹೊಗೆ ಆಕಾಶಕ್ಕೆ ಚಿಮ್ಮಿದ ದೃಶ್ಯಗಳು ಕಂಡುಬಂದಿವೆ. ಇಸ್ರೇಲ್ ಅಧ್ಯಕ್ಷರ ಭವನ, ಗುಪ್ತಚರ ಸಂಸ್ಥೆ, ವಿಮಾನ ನಿಲ್ದಾಣ, ಕೋಮ್ ನಗರ ಸೇರಿದಂತೆ ಸುಮಾರು 30 ಗುರಿಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ದಾಳಿ ಮುಂದುವರೆಸುವುದಾಗಿ ಅಮೆರಿಕಾ ಎಚ್ಚರಿಕೆ
ಈ ನಡುವೆಯೇ ಅಮೆರಿಕವೂ ಇರಾನ್‌ನಲ್ಲಿ ತನ್ನ ದಾಳಿಗಳನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ. ಕ್ಷಿಪಣಿಗಳು ಅಪ್ಪಳಿಸುತ್ತಿದ್ದಂತೆಯೇ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ಟೆಹ್ರಾನ್‌ನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಯಾವೆಲ್ಲಾ ಪ್ರದೇಗಳ ಮೇಲೆ ದಾಳಿ?
ಮತ್ತೊಂದೆಡೆ, ಇರಾನ್ ಪ್ರತೀಕಾರವಾಗಿ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಹಾರಿಸುವ ಸಾಧ್ಯತೆ ಇರುವ ಹಿನ್ನೆಲೆ, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವಾಯುದಾಳಿ ಸೈರನ್‌ಗಳ ಮೂಲಕ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನೂ ಇಸ್ರೇಲ್ ಇರಾನ್‌ನ ಟೆಹ್ರಾನ್, ಕೋಮ್, ತಬ್ರಿಜ್, ಕೆರ್ಮನ್‌ಶಾ, ಕರಾಜ್, ಇಸ್ಫಹಾನ್ ನಗರಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಕಟ್ಟುನಿಟ್ಟಿನ ಸೂಚನೆ
ಸದ್ಯದ ಬೆಳವಣಿಗೆಯ ಗಮನದಲ್ಲಿಟ್ಟುಕೊಂಡು ಯಾರೂ ಇರಾನ್ ಪ್ರವಾಸ ಮಾಡದಂತೆ ವಿದೇಶಾಂಗ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ ಸೂಚನೆ ಬರುವವರೆಗೂ ಯಾರೂ ಇರಾನ್ ದೇಶನಕ್ಕೆ ಪ್ರಯಾಣ ಮಾಡದಂತೆ ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಅನಿವಾರ್ಯ ಅಲ್ಲದ ಪ್ರಯಾಣ ಮಾಡಬೇಡಿ ಎಂದು ಸಲಹೆಯಲ್ಲಿ ಉಲ್ಲೇಖ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಸೂಚನೆ ನೀಡಲಾಗಿದೆ.
ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಾರಕಕ್ಕೇರಿರುವ ನಡುವೆಯೇ, ಇರಾನ್ ಅಮೆರಿಕದ ಹಲವು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ ಘಟನೆ ನಡೆದಿದೆ. ಕತಾರ್‌ನ ಅಲ್-ಉದೈದ್ ವಾಯುನೆಲೆ, ಕುವೈತ್‌ನ ಅಲ್-ಸೇಲಂ ವಾಯುನೆಲೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್-ದಫ್ರಾ ವಾಯುನೆಲೆ ಹಾಗೂ ಬಹ್ರೇನ್‌ನ ನೌಕಾನೆಲೆ ಮೇಲೆ ದಾಳಿ ನಡೆದಿರುವುದಾಗಿ ವರದಿ ಆಗಿದೆ. ಇದೇ ವೇಳೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸ್ಫೋಟಗಳು ಸಂಭವಿಸಿದ ಮಾಹಿತಿ ಲಭ್ಯವಾಗಿದೆ. ಇರಾನ್ ಕ್ಷಿಪಣಿ ದಾಳಿಯ ಬೆನ್ನಲ್ಲೇ ಗಲ್ಫ್ ರಾಷ್ಟ್ರಗಳು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ವಾಯುಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
In the last few minutes, sirens were sounded all throughout Israel, with an advance instruction alert directly to cellular devices to stay within proximity to protected spaces.
— Israel Defense Forces (@IDF) February 28, 2026
This is a proactive alert to prepare the public for the possibility of missiles being launched toward…












Click it and Unblock the Notifications