Israel & Lebanon: ಅಂತೂ... ಇಂತೂ... ಇಸ್ರೇಲ್ & ಲೆಬನಾನ್ ಯುದ್ಧಕ್ಕೆ ಬಿತ್ತು ಬ್ರೇಕ್!
ಮಧ್ಯಪ್ರಾಚ್ಯ ಭಾಗದಲ್ಲಿ ನಿದ್ದೆಗೆಡಿಸಿದ್ದ ಇಸ್ರೇಲ್ & ಗಾಜಾ ಯುದ್ಧ, ಇಸ್ರೇಲ್ & ಲೆಬನಾನ್ ವಾರ್ ಹಾಗೂ ಇಸ್ರೇಲ್ & ಸಿರಿಯಾ ತಿಕ್ಕಾಟಕ್ಕೆ ನಿಧಾನವಾಗಿ ಬ್ರೇಕ್ ಬೀಳುತ್ತಿದೆ. ಮೊದಲ ಭಾಗವಾಗಿ ಇಸ್ರೇಲ್ & ಲೆಬನಾನ್ ವಾರ್ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡಲು ಇದೀಗ ಭಾರಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಿದ್ರೆ ದಿಢೀರ್ ಈ ರೀತಿಯ ನಿರ್ಧಾರ ಕೈಗೊಂಡ ಕಾರಣ ಏನು? ಇಸ್ರೇಲ್ & ಲೆಬನಾನ್ ನಡುವೆ ಸಂಧಾನ ಮಾಡಿಸಿದ್ದು ಯಾರು? ಆ ಕುರಿತು ಮಾಹಿತಿ ತಿಳಿಯೋಣ ಬನ್ನಿ.
ಇಸ್ರೇಲ್ & ಲೆಬನಾನ್ ನಡುವೆ ಅಕ್ಟೋಬರ್ ತಿಂಗಳಿಂದ ಘೋರವಾಗಿ ಗಲಾಟೆ ನಡೆಯುತ್ತಿದೆ. ಇಸ್ರೇಲ್ & ಲೆಬನಾನ್ ಬಡಿದಾಡ್ತಿರುವ ರೀತಿ ನೋಡಿದ್ರೆ, ಮುಂದಿನ ದಿನಗಳಲ್ಲಿ ಮಧ್ಯಪ್ರಾಚ್ಯ ರಕ್ತದ ಮಡುವಿನಲ್ಲಿ ಒದ್ದಾಡುವ ಭಯ ಆವರಿಸಿತ್ತು. ಆದರೆ ಈಗ ಅದೆಲ್ಲಾ ಕೊನೆಯಾಗಿ & ಶಾಂತಿ ಮೂಡುವ ಸಮಯ ಬಂದೇ ಬಿಟ್ಟಿದೆ. ಹಾಗಿದ್ರೆ ಇಸ್ರೇಲ್ & ಲೆಬನಾನ್ ಕದನ ವಿರಾಮಕ್ಕೆ ಹಾಕಿರುವ ಷರತ್ತು ಅಂದ್ರೆ ರೂಲ್ಸ್ ಏನೇನು? ಬನ್ನಿ ತಿಳಿಯೋಣ.

ಯುದ್ಧದ ಪರಿಣಾಮ 12 ಲಕ್ಷ ಜನರು...
ಇಸ್ರೇಲ್ & ಲೆಬನಾನ್ ನಡುವೆ ಗಲಾಟೆ ಜೋರಾದ ನಂತರ ಸುಮಾರು 1.2 ಮಿಲಿಯನ್ ಅಂದ್ರೆ 12 ಲಕ್ಷ ಲೆಬನಾನ್ ನಾಗರಿಕರು & 50,000ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳು ನೆಲೆ ಇಲ್ಲದೆಯೇ ಅಲೆದಾಡುವ ಪರಿಸ್ಥಿತಿ ಬಂದಿತ್ತು. ಪುಟಾಣಿ ಮಕ್ಕಳು ಅಪ್ಪ & ಅಮ್ಮನ ಕಳೆದುಕೊಂಡು ಈಗ ಅನಾಥರಾಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದು, ಯುದ್ಧ ನಿಲ್ಲಿಸಲು ಆಗ್ರಹ ಕೂಡ ಕೇಳಿ ಬಂದಿತ್ತು.
ಇದೆಲ್ಲವನ್ನೂ ಮೀರಿ 3,700 ಜನರು ಸುಮಾರು 1 ತಿಂಗಳ ಅಂತರದಲ್ಲಿ ಜೀವ ಕಳೆದುಕೊಂಡು, ಹತ್ತಾರು ಸಾವಿರ ಜನರು ಆಸ್ಪತ್ರೆ ಸೇರಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗ ಇಸ್ರೇಲ್ & ಲೆಬನಾನ್ ನಡುವೆ ದಿಢೀರ್ ಮಹತ್ವದ ಒಪ್ಪಂದ ನಡೆದು, 60 ದಿನಗಳ ಕಾಲ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಗಿದೆ.
ಗಡಿಯಲ್ಲಿ ಕೂಡ ಹೈ ಅಲರ್ಟ್!
ಇಸ್ರೇಲ್ & ಲೆಬನಾನ್ ನಡುವಿನ ಕದನ ವಿರಾಮದ ಪ್ರಕಾರ ಎರಡೂ ಕಡೆಯಿಂದ ಯಾವುದೇ ರೀತಿಯ ದಾಳಿ ನಡೆಯುವಂತೆ ಇಲ್ಲ. ಹಾಗೇ ಶಾಂತಿ ಮರುಸ್ಥಾಪನೆ ಹಿನ್ನೆಲೆ ದಕ್ಷಿಣ ಲೆಬನಾನ್ ಭಾಗದಿಂದ ಇಸ್ರೇಲ್ ತನ್ನ ಸೇನೆಯನ್ನು ಸಂಪೂರ್ಣವಾಗಿ ಹೊರಗಡೆ ಕರೆಸಿಕೊಳ್ಳಲು ಕೂಡ ಒಪ್ಪಿಗೆ ಸೂಚಿಸಿದೆಯಂತೆ. ಇಷ್ಟೆಲ್ಲದರ ನಡುವೆ ಮತ್ತೊಂದು ಮಹತ್ವದ ನಿರ್ಧಾರ ಕೂಡ ಈ ಕದನ ವಿರಾಮದಲ್ಲಿ ಕೈಗೊಳ್ಳಲಾಗಿದ್ದು, ಗಡಿಯಲ್ಲಿ ಯಾವುದೇ ರೀತಿಯ ಪ್ರಚೋದನೆಯನ್ನ ಪರಸ್ಪರರು ಮಾಡದಂತೆ ಸೂಚಿಸಲಾಗಿದೆ. ಅದರಲ್ಲೂ ಹಿಜ್ಬುಲ್ಲಾ ಬಂಡುಕೋರರು ಕದನ ವಿರಾಮ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ.












Click it and Unblock the Notifications