3ನೇ ಮಹಾಯುದ್ಧ ಫಿಕ್ಸ್, ಪ್ರಪಂಚ ಸರ್ವನಾಶ ಮಾಡಲು ಸಿದ್ಧವಾದ ಈ 2 ದೇಶಗಳು? Israel And Iran
ಯುದ್ಧ.. ಯುದ್ಧ.. ಯುದ್ಧ.. ಎಲ್ಲಿ ನೋಡಿದರೂ ಬರೀ ಹಿಂಸೆ, ಹಿಂಸಾಚಾರದ ಜೊತೆಗೆ ಭವಿಷ್ಯವೇ ಮಂಕಾಗುವ ಸುದ್ದಿಗಳು ಇದೀಗ ಇಡೀ ಜಗತ್ತನ್ನು ಕಾಡುತ್ತಿವೆ. ನೋಡ ನೋಡುತ್ತಲೇ ಹಲವು ಯುದ್ಧಗಳು ಜಗತ್ತಿನ ಮೂಲೆ ಮೂಲೆಗೆ ಹಬ್ಬಿವೆ. ರಷ್ಯಾ & ಉಕ್ರೇನ್ ಯುದ್ಧ, ಇಸ್ರೇಲ್ & ಗಾಜಾ ಯುದ್ಧ, ಇಸ್ರೇಲ್ & ಸಿರಿಯಾ ಯುದ್ಧ, ಇಸ್ರೇಲ್ & ಯೆಮನ್ ಯುದ್ಧದ ನಡುವೆ ಭಾರತ & ಪಾಕಿಸ್ತಾನ ನಡುವೆ ಕೂಡ ಘೋರ ಯುದ್ಧ ನಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದ್ರೆ ಕೆಲವೇ ದಿನಗಳಲ್ಲಿ ಭಾರತ & ಪಾಕಿಸ್ತಾನ ಯುದ್ಧಕ್ಕೆ ಬ್ರೇಕ್ ಬಿದ್ದಿತ್ತು. ಹೀಗಿದ್ದಾಗಲೇ ದಿಢೀರ್ ಇಸ್ರೇಲ್ & ಇರಾನ್ ನಡುವೆ ಬಡಿದಾಟ ಶುರುವಾಗಿದೆ.
ಅಂದಹಾಗೆ ಇಸ್ರೇಲ್ ಸೇನೆ ಇದೀಗ ದಿಢೀರ್ ಇರಾನ್ ವಿರುದ್ಧ ತೀವ್ರ ಪ್ರಮಾಣದ ದಾಳಿಯನ್ನ ಶುರು ಮಾಡಿದ್ದು, ಹೀಗೆ ಶುರುವಾಗಿರುವ ಯುದ್ಧ ಹಿನ್ನೆಲೆ ಜಾಗತಿಕ ಮಟ್ಟದಲ್ಲಿ ಭಯ ಕೂಡ ಎದುರಾಗಿದ. ಯಾಕೆ ಅಂದ್ರೆ ಇಬ್ಬರ ನಡುವಿನ ಈ ತಿಕ್ಕಾಟ ಭವಿಷ್ಯದಲ್ಲಿ ಇಡೀ ಜಗತ್ತನ್ನೇ ಉಡಾಯಿಸುವ ಭಯ ಕೂಡ ಕಾಡುತ್ತಿದೆ. ನೋಡ ನೋಡುತ್ತಲೇ ಪ್ರಪಂಚ ಸರ್ವನಾಶ ಆಗುವುದು ಗ್ಯಾರಂಟಿ ಆಗುತ್ತಿದೆ. ಹಾಗಾದ್ರೆ ಇಸ್ರೇಲ್ & ಇರಾನ್ ಯುದ್ಧದ ಬಗ್ಗೆ ಭಯ ಯಾಕೆ?

ಪರಮಾಣು ಬಾಂಬ್ ಹಾಕುವುದು ಗ್ಯಾರಂಟಿ?
ಹೌದು, ಇಸ್ರೇಲ್ & ಇರಾನ್ ನಡುವೆ ಅಕಸ್ಮಾತ್ ಪೂರ್ಣ ಪ್ರಮಾಣದ ಯುದ್ಧ ನಡೆದರೆ ಇಡೀ ಜಗತ್ತು ಸರ್ವನಾಶ ಆಗಿ ಹೋಗುವುದು ಗ್ಯಾರಂಟಿ. ಯಾಕಂದ್ರೆ ಇರಾನ್ ಕೈಯಲ್ಲಿ ಅಣ್ವಸ್ತ್ರಗಳು ಇವೆ, ಹಾಗೇ ಇಸ್ರೇಲ್ ಕೂಡ ಅಮೆರಿಕ ಸೇನೆಯ ಬೆಂಬಲ ಪಡೆದು ನ್ಯೂಕ್ಲಿಯರ್ ಅಂದ್ರೆ ಪರಮಾಣು ಬಾಂಬ್ ಹಾಕುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ ಈಗ ಆತಂಕ ಹೆಚ್ಚಾಗಿದ್ದು, ಭವಿಷ್ಯಕ್ಕೆ ಕೂಡ ಇದು ಮಾರಕ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಇಬ್ಬರ ನಡುವೆ ಭಾರಿ ದೊಡ್ಡ ತಿಕ್ಕಾಟ ಶುರುವಾಗಿದೆ.
100 ಡ್ರೋನ್ ಹಾರಿಸಿದ ಇರಾನ್?
ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಇರಾನ್ ಸೇನೆಯಿಂದ ಕೂಡ ಮತ್ತೊಂದು ಸುತ್ತಿನ ದಾಳಿಗೆ ಸಿದ್ಧತೆ ಸಾಗಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡು ದೊಡ್ಡ ಗಲಾಟೆ ಶುರುವಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ. ಮತ್ತೊಂದು ಕಡೆ ಪರಿಸ್ಥಿತಿ ಇದೇ ರೀತಿ ಇದ್ದರೆ ಅಮೆರಿಕ ಕೂಡ ಈ ಭೀಕರ ಗಲಾಟೆಗೆ ಎಂಟ್ರಿ ಆಗುತ್ತಾ? ಅನ್ನೋ ಭಯ ಕೂಡ ಆವರಿಸಿದೆ, ಯಾಕಂದ್ರೆ ಅಮೆರಿಕ ಎಂಟ್ರಿ ಕೊಟ್ಟರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications