Israel & Gaza: ಇಸ್ರೇಲ್ ವಿರುದ್ಧ ರೊಚ್ಚಿಗೆದ್ದ ಹಮಾಸ್- ಯುದ್ಧ ನಿಲ್ಲುವುದೇ ಅನುಮಾನ?

ಗಜಾ ಪಟ್ಟಿ ಪ್ರದೇಶದಲ್ಲಿ ಕದನ ವಿರಾಮ ಘೋಷಣೆ ಮಾಡುವ ಹಮಾಸ್ ಪ್ರಸ್ತಾಪಕ್ಕೆ ಈಗ ಇಸ್ರೇಲ್ ಉಲ್ಟಾ ಹೊಡೆದಿದೆ. ಇಸ್ರೇಲ್ ತಾನು ಯುದ್ಧ ಮುಂದುವರಿಸುವ ಹೇಳಿಕೆ ನೀಡಿದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡು, ಹಮಾಸ್ ಕೂಡ ರೊಚ್ಚಿಗೆದ್ದಿದೆ. ಗಾಜಾ ಪಟ್ಟಿ ಪ್ರದೇಶದಲ್ಲಿ ಹಿಂಸಾಚಾರ ತೀವ್ರಗೊಂಡ ಬೆನ್ನಲ್ಲೇ ಕದನ ವಿರಾಮ ಘೋಷಣೆಗೆ ಹಮಾಸ್ ಪ್ರಸ್ತಾವನೆಯನ್ನ ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾವನೆಗೆ ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ ಮತ್ತೆ ಕಿತ್ತಾಟವೂ ಜೋರಾಗಿದೆ.

ಹಮಾಸ್ ಈಗ ಮತ್ತೆ ಇಸ್ರೇಲ್ ವಿರುದ್ಧ ರೊಚ್ಚಿಗೆದ್ದು ಕೂತಿದ್ದು, ಕದನ ವಿರಾಮ ಘೋಷಣೆ ಮಾಡುವ ಕನಸು ಕನಸಾಗಿಯೇ ಉಳಿಯಲಿದೆ. ಇಸ್ರೇಲ್ ಗಾಜಾ ಪಟ್ಟಿ ಸೇರಿದಂತೆ ಲೆಬನಾನ್ & ಸಿರಿಯಾ ಮೇಲೆ ಕೂಡ ಇದೀಗ ಹಿಡಿತ ಸಾಧಿಸಿದೆ. ಇದೇ ಬೆನ್ನಲ್ಲೇ ಹಮಾಸ್ ಯುದ್ಧವನ್ನ ನಿಲ್ಲಿಸುವ ಪ್ರಸ್ತಾವನೆ ಮುಂದೆ ಇಟ್ಟಿತ್ತು. ಆದರೆ ಬೇರೆಯದ್ದೇ ಟಾರ್ಗೆಟ್ ಇಟ್ಟಿರುವ ಇಸ್ರೇಲ್ ಸೇನೆ ಹಮಾಸ್ ಡಿಮ್ಯಾಂಡ್ ರಿಜೆಕ್ಟ್ ಮಾಡಿದೆ. ತನ್ನ ಬಳಿ ಇರುವ ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಬಗ್ಗೆಯೂ ಹಮಾಸ್ ಹೇಳಿದ್ದರೂ ಇಸ್ರೇಲ್ ಅದಕ್ಕೆ ಒಪ್ಪುತ್ತಿಲ್ಲ.

Israel And Hamas War May Continue After This Incident

ಹಮಾಸ್ ಡೀಲ್‌ಗೆ ಒಪ್ಪದ ಇಸ್ರೇಲ್?

ಗಾಜಾ ಪಟ್ಟಿ ಭಾಗಕ್ಕೆ ನುಗ್ಗಿ ಇಸ್ರೇಲ್ ಸೇನೆ ಈಗಾಗಲೇ ಸುರಂಗ & ಇತರ ಕಡೆಗಳಲ್ಲಿ ಹುಡುಕಾಡಿ ಹಮಾಸ್ ತಂಡದ ಜೀವ ತೆಗೆಯುತ್ತಿದೆ. ಅದರಲ್ಲೂ ನಿರಾಶ್ರಿತರ ಶಿಬಿರ ಇರುವ ಕಡೆಗಳಲ್ಲಿ ಕೂಡ ಇದೇ ರೀತಿಯ ಆಪರೇಷನ್ ನಡೆಸುತ್ತಿದೆ ಇಸ್ರೇಲ್ ಸೇನೆ. ಅದೇ ರೀತಿ ಇಸ್ರೇಲ್ ಮಿಲಿಟರಿ ಇದೀಗ ದಿಢೀರ್ ಉತ್ತರ ಗಾಜಾ & ಉತ್ತರ ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ನಡೆಸುತ್ತಿದೆ. ಇದರ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಅರ್ಧ ಲಕ್ಷಕ್ಕೂ ಹೆಚ್ಚು ಜನರು ಇದೇ ರೀತಿ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂಬ ಆರೋಪ ಇದೆ.

ಇದೇ ಕಾರಣಕ್ಕೆ ಯುದ್ಧ ನಿಲ್ಲಿಸಲು ಹಮಾಸ್‌ನ ನಾಯಕರು ಶಾಂತಿ ಮಾತುಕತೆಗೆ ಒಪ್ಪಿದ್ದರು. ಆದರೆ ಅದೆಲ್ಲಾ ಸರಿ ಹೊಂದುತ್ತಿಲ್ಲ, ಇಸ್ರೇಲ್ ಯುದ್ಧ ಮುಂದುವರಿಸುವ ಮಾತು ಆಡುತ್ತಿರುವ ಸಮಯದಲ್ಲೇ ಹಮಾಸ್ ಕೂಡ ರೊಚ್ಚಿಗೆದ್ದು ಮತ್ತೆ ದಾಳಿಗೆ ಮುಂದಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಮುಂದೆ ಇದು ಮತ್ತಷ್ಟು ಘೋರ ಹಿಂಸಾಚಾರಕ್ಕೆ ಕಾರಣವಗುವ ಮುನ್ಸೂಚನೆ ಸಿಗುತ್ತಿದೆ.

ಯುದ್ಧ ಶುರುವಾಗಲು ಕಾರಣ ಏನು?

ಅದು 2023 ಅಕ್ಟೋಬರ್ 7 ಶನಿವಾರ, ಇಸ್ರೇಲ್‌ ಜನ ವೀಕೆಂಡ್ ಖುಷಿಯಲ್ಲಿದ್ದ ಸಮಯದಲ್ಲೇ ನುಗ್ಗಿ ಬಂದ ವಿರೋಧಿ ಪಡೆಯ ರಾಕೆಟ್ & ಕ್ಷಿಪಣಿಗಳು ಘೋರ ಸ್ಥಿತಿಯ ಸೃಷ್ಟಿ ಮಾಡಿಬಿಟ್ಟವು. ಹೀಗೆ 2023 ಅಕ್ಟೋಬರ್ 7ಕ್ಕೆ ಶುರುವಾದ ಗಾಜಾ & ಇಸ್ರೇಲ್ ವಾರ್ ಇಂದಿಗೂ ನಿಂತಿಲ್ಲ. ಆದರೆ ಯುದ್ಧ ನಿಲ್ಲಿಸುವ ಪ್ರಯತ್ನ ನಡೆದರು ಅದು ಸಕ್ಸಸ್ ಕೊಡುತ್ತಿಲ್ಲ. ಹಮಾಸ್ ಕೂಡ ಇದೇ ರೀತಿ ಯುದ್ಧ ನಿಲ್ಲಿಸಲು ಕದನ ವಿರಾಮ ಒಪ್ಪಂದಕ್ಕೆ ಮುಂದಾಗಿತ್ತು, ಆದರೆ ಹಮಾಸ್‌ನಲ್ಲಿ ಮೂಡಿಬಂದ ಒಗ್ಗಟ್ಟು ಇಸ್ರೇಲ್ ಕಡೆಯಿಂದ ಮೂಡಿಬಂದಿಲ್ಲ. ಹೀಗಾಗಿ, ಹಮಾಸ್ ಕದನ ವಿರಾಮಕ್ಕೆ ಒಪ್ಪಿದರೂ ಇಸ್ರೇಲ್ ಒಪ್ಪಿಗೆ ಸೂಚಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+