Imran Khan: ಅಬ್ಬಬ್ಬಾ ಲಾಟರಿ.. ಇಮ್ರಾನ್ ಖಾನ್ ಜೈಲಿಂದ ರಿಲೀಸ್!
ಭ್ರಷ್ಟಾಚಾರ ಆರೋಪ ಹೊತ್ತು ಜೈಲು ಪಾಲಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಭರ್ಜರಿ ಸುದ್ದಿ ಸಿಕ್ಕಿದೆ. ತೋಷಾಖಾನ ಭ್ರಷ್ಟಾಚಾರ ಕೇಸ್‌ನಲ್ಲಿ 3 ವರ್ಷ ಜೈಲು ಶಿಕ್ಷೆ ನೀಡಿದ್ದನ್ನು ಪ್ರಶ್ನಿಸಿ, ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್ ಸಲ್ಲಿಸಿದ್ದ ಅರ್ಜಿಗೆ ಜಯ ಸಿಕ್ಕಿದೆ. ಈ ಮೂಲಕ ಕೆಳ ಹಂತದ ಕೋರ್ಟ್ ನೀಡಿರುವ ಆದೇಶ ರದ್ದು ಮಾಡಿ ಇಸ್ಲಾಮಾಬಾದ್ ಹೈಕೋರ್ಟ್ ಹೊಸ ಆದೇಶ ಹೊರಡಿಸಿದೆ.
ಅಷ್ಟಕ್ಕೂ ಇಮ್ರಾನ್ ಖಾನ್ ತಾವು ಪಾಕಿಸ್ತಾನ ಪ್ರಧಾನಿಯಾಗಿದ್ದ ಸಮಯದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಪ್ರಧಾನಿ ಆಗಿದ್ದ ಇಮ್ರಾನ್‌ಗೆ ಬಂದಿದ್ದ ಉಡುಗೊರೆ ಮಾರಾಟ ಮಾಡಿ, ಹೀಗೆ 14 ಕೋಟಿ ರೂಪಾಯಿ ಗಳಿಸಿದ್ದ ಆರೋಪ ಎದುರಿಸಿದ್ದರು ಇಮ್ರಾನ್. ಕೇಸ್ ಸಂಬಂಧ ಇಮ್ರಾನ್‌ಗೆ 3 ಜೈಲು ಶಿಕ್ಷೆ ಸೇರಿ 1 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿತ್ತು ಪಾಕಿಸ್ತಾನ ಕೋರ್ಟ್. ಹೀಗೆ ಕೆಳಹಂತದ ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು ಇಮ್ರಾನ್ ಖಾನ್. ಈ ಕಾನೂನು ಹೋರಾಟದಲ್ಲಿ ಇಮ್ರಾನ್‌ಗೆ ದೊಡ್ಡ ಗೆಲುವು ಸಿಕ್ಕಿದೆ.

ಕೊನೆಗೂ ಜೈಲಿನಿಂದ ಇಮ್ರಾನ್ ಮುಕ್ತ!
ಇಸ್ಲಾಮಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ಅಮೀರ್ ಫಾರೂಕ್ ಹಾಗೂ ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ ಅವರ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತ್ತು. ಇಮ್ರಾನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭವಾದಾಗ ಪಾಕ್ ಚುನಾವಣಾ ಆಯೋಗವನ್ನು ಪ್ರತಿನಿಧಿಸುವ ವಕೀಲ ಅಮ್ಜದ್ ಪರ್ವೇಜ್ ಗೈರು ಹಾಜರಿ ಕುರಿತು ಬೇಸರ ವ್ಯಕ್ತವಾಗಿತ್ತು. ಜೊತೆಗೆ ವಕೀಲರು ಪದೇ ಪದೆ ಗೈರು ಹಾಜರಾಗಿದ್ದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ನಿನ್ನೆಯಷ್ಟೇ ಅರ್ಜಿ ವಿಚಾರಣೆ ಮರು ಆರಂಭವಾಗಿ ಇಂದು ತೀರ್ಪು ಹೊರಬಿದ್ದಿದೆ.
ಮತ್ತೆ ಜೈಲಿಗೆ ಹೋಗ್ತಾರಾ ಇಮ್ರಾನ್?
ಇಮ್ರಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ, ಕೊಲೆ ಯತ್ನವೂ ಸೇರಿ ಭ್ರಷ್ಟಾಚಾರ ಕೇಸ್‌ಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ಸ್ಥಳೀಯ ನಿವಾಸಿಗಳ ಮೇಲೆ ಒತ್ತಡ ಹೇರಿ, ₹600 ಕೋಟಿ ಬೆಲೆ ಬಾಳುವ ಭೂಮಿಯನ್ನು ₹13 ಕೋಟಿ ರೂಪಾಯಿಗೆ ಖರೀದಿಸಿದ ಆರೋಪ ಕೇಳಿಬಂದಿತ್ತು. ಹೀಗೆ ಒಟ್ಟಾರೆ 140ಕ್ಕೂ ಹೆಚ್ಚು ಪ್ರಕರಣಗಳು ಇಮ್ರಾನ್ ಖಾನ್ ವಿರುದ್ಧ ದಾಖಲಾಗಿವೆ. ಹೀಗೆ ಯಾವ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಯಾವಾಗ ಕಂಟಕ ಎದುರಾಗುತ್ತೋ ಗೊತ್ತೇ ಆಗ್ತಿಲ್ಲ.

ಮತ್ತೊಂದು ಭಯಾನಕ ಕೇಸ್ ಬಾಕಿ
ಇಮ್ರಾನ್ ಖಾನ್ ವಿದೇಶಾಂಗ ಇಲಾಖೆ ರಹಸ್ಯ ದಾಖಲೆ ಸೋರಿಕೆ ಮಾಡಿದ ಆರೋಪ ಕೂಡ ಹೊತ್ತಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ರಹಸ್ಯ ದಾಖಲೆಗಳ ಸೋರಿಕೆ ಆರೋಪ ಕೂಡ ಇಮ್ರಾನ್ ಖಾನ್ ಅವರ ತಲೆಗೆ ಸುತ್ತಿಕೊಂಡಿತ್ತು. ಸೈಫರ್ ಕೇಸ್ ದಾಖಲಾಗಿದ್ದೆ ತಡ ಇಮ್ರಾನ್ ಅಭಿಮಾನಿಗಳಿಗೆ ಭಯ ಶುರುವಾಗಿತ್ತು. ಈಗ ಆ ಭಯ ನಿಜವಾಗಿದ್ದು, ಇಮ್ರಾನ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈಗ ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಬಚಾವ್ ಆಗಿದ್ದರೂ, ಇನ್ನೂ ನೂರಾರು ಕೇಸ್ ಬಾಕಿ ಉಳಿದಿವೆ.
ಒಟ್ನಲ್ಲಿ ಪಾಕಿಸ್ತಾನದ ಪರಿಸ್ಥಿತಿ ಯಾರಿಗೂ ಬೇಡ, ಯಾಕಂದ್ರೆ ಅಲ್ಲಿನ ರಾಜಕೀಯ ಒಂದು ರೀತಿ ಭಯಾನಕ. ಹಾಗೇ ಮಾಜಿ ಪ್ರಧಾನಿಗಳು ಜೈಲಿಗೆ ಹೋಗುವುದು ಕೂಡ ಪಾಕಿಸ್ತಾನದ ಟ್ರೆಂಡ್. ಇಂತಹ ಟ್ರೆಂಡ್‌ನಲ್ಲಿ ಇಮ್ರಾನ್ ಕೂಡ ಒಬ್ಬರಾಗಿದ್ದಾರೆ. ಇದೀಗ ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್‌ಗೆ ರಿಲೀಫ್ ನೀಡಿದ್ದರೂ ಮುಂದೆ ಪಾಕಿಸ್ತಾನದ ಸೇನೆ ಮತ್ತು ಪಾಕಿಸ್ತಾನದ ಐಎಸ್‌ಐ ಏನು ತಂತ್ರ ಹೂಡುತ್ತೊ ಗೊತ್ತಿಲ್ಲ. ಹೀಗಾಗಿ ಪಾಕಿಸ್ತಾನ ಎಲೆಕ್ಷನ್ ಇನ್ನಷ್ಟು ಹೀಟ್ ಪಡೆಯೋದು ಪಕ್ಕಾ.












Click it and Unblock the Notifications