ಬಾಂಬ್ ಹಾಕಿ ನಕ್ಕ ಮಹಿಳೆ, ನಗುವಿನಲ್ಲೂ ಸಾರ್ಥಕತೆ!

ದುಬೈ, ಸೆ.26: ಆಕೆ ಬಾಂಬ್ ಹಾಕಿ ಸಂತೋಷದಿಂದ ಥಮ್ಸ್ ಅಪ್ ಎನ್ನುತ್ತಾ ಮುಗುಳ್ನಗೆ ಚೆಲ್ಲಿದಳು. ಆಕೆಯತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಈ ಸೇನಾನಿ ಟಾಪ್ ಟ್ರೆಂಡಿಂಗ್ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರ ಮೇಲೆ ಬಾಂಬ್ ಹಾಕಿರುವ ಫೈಟರ್ ಪೈಲಟ್ ಮರಿಯಂ ಈಗ ಎಲ್ಲರ ಗಮನ ಸೆಳೆದಿದ್ದಾರೆ.

ಯುಎಇನ ಮಹಿಳಾ ಫೈಟರ್ ಪೈಲಟ್ 35 ವರ್ಷ ವಯಸ್ಸಿನ ಮರಿಯಮ್ ಅಲ್ ಮನ್ಸೌರಿ ಅವರು ಐಎಸ್ಐಎಸ್ ಉಗ್ರರ ಮೇಲೆ ಬಾಂಬ್ ಹಾಕಿದ ಮೊದಲ ಮಹಿಳಾ ಪೈಲಟ್ ಎಂದು ಜೀನ್ ಪಿಯರ್ ಡುಥಿಯಾನ್ ಟ್ವೀಟ್ ಮಾಡಿದ ಮೇಲೆ ಭಾರಿ ಚರ್ಚೆಗೊಳಾಗಿದೆ. ಹಲವಾರು ಮಂದಿ ಮರಿಯಾಮ್ ಸಾಹಸವನ್ನು ಮೆಚ್ಚಿದರೆ, ಕೆಲವರು ಅಯ್ಯೋ ಉಗ್ರರ ಕಣ್ಣು ಈಕೆ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ. [ಜಿಹಾದಿಗಳಿಂದ ಕೊಲೆ ಬೆದರಿಕೆ, ಟ್ವಿಟ್ಟರ್ ಹೈ ಅಲರ್ಟ್]

35 ವರ್ಷ ವಯಸ್ಸಿನ ಸ್ಕ್ವಾಡ್ರಾನ್ ಕಮಾಂಡರ್ ಮರಿಯಾಮ್ ಅವರು ಸಿರಿಯಾ ಮೇಲೆ ಬಾಂಬ್ ದಾಳಿಯ ನೇತೃತ್ವವನ್ನು ವಹಿಸಿಕೊಂಡಿದ್ದರು. ಫೈಟರ್ ಜೆಟ್ ಕಾಕ್ ಪಿಟ್ ನಲ್ಲಿ ಕುಳಿತುಕೊಂಡು ಮಂದಹಾಸ ಬೀರುತ್ತಾ ಥಮ್ಸ್ ಅಪ್ ಮಾಡುವ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

ಉಗ್ರರ ವಿರುದ್ಧ ಸಿಡಿದೆದ್ದ ಮಹಿಳಾ ಫೈಟರ್

ಉಗ್ರರ ವಿರುದ್ಧ ಸಿಡಿದೆದ್ದ ಮಹಿಳಾ ಫೈಟರ್

ಸಿರಿಯಾದ ಅಡ್ಲಿಬ್, ಅಲೆಪ್ಪೋ, ರಖ್ಕಾ ಪ್ರಾಂತ್ಯಗಳಲ್ಲಿ ಅಡಗಿರುವ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ ತಂಡದ ನೇತೃತ್ವವನ್ನು ಮರಿಯಮ್ ವಹಿಸಿಕೊಂಡಿದ್ದರು. ಐಎಸ್ ಐಎಸ್ ಉಗ್ರರ ಮೇಲೆ ಸಮರ ಸಾರಿರುವ ಯುಎಇ ಈಗ ಅಮೆರಿಕ, ಸೌದಿ ಅರೇಬಿಅಯ, ಜೋರ್ಡನ್, ಬಹರೇನ್, ಕತಾರ್ ದೇಶಗಳಂತೆ ದಾಳಿ ಮುಂದುವರೆಸಿದೆ.

ಮಹಿಳೆ ಎಂದು ಪ್ರಾಶಸ್ತ್ಯ ಸಿಕ್ಕಿಲ್ಲ

ಮಹಿಳೆ ಎಂದು ಪ್ರಾಶಸ್ತ್ಯ ಸಿಕ್ಕಿಲ್ಲ

ನಾನು ಮಹಿಳೆ ಎಂದು ಯಾರೂ ನನಗೆ ಆದರ,ಆತಿಥ್ಯ ನೀಡಿಲ್ಲ. ನನ್ನ ಕರ್ತವ್ಯ ನಿಭಾಯಿಸಲು ನನಗೆ ಸೂಕ್ತ ತರಬೇತಿ ಸಿಕ್ಕಿದೆ ಎಂದಿದ್ದಾರೆ. ಅಬುದಾಬಿಯಲ್ಲಿ ಜನಿಸಿರುವ ಖಲೀಫಾ ಬಿನ್ ಜಾಯೇದ್ ಏರ್ ಕಾಲೇಜ್ ನಲ್ಲಿ ಪದವಿ ಪಡೆದಿರುವ ಮರಿಯಮ್ ಈಗ ಎಫ್ 16ನ ಹಿರಿಯ ಪೈಲಟ್.

ಬಾಂಬ್ ಹಾಕಿ ಸಂತೋಷದಿಂದ ಥಮ್ಸ್ ಅಪ್

ಬಾಂಬ್ ಹಾಕಿ ಸಂತೋಷದಿಂದ ಥಮ್ಸ್ ಅಪ್ ಎನ್ನುತ್ತಾ ಮುಗುಳ್ನಗೆ ಚೆಲ್ಲಿದ ಚಿತ್ರ ಟ್ವೀಟ್

ವೇಕ್ ಅಪ್ ಇಂಡಿಯಾ

ವೇಕ್ ಅಪ್ ಇಂಡಿಯಾ,ಮಹಿಳಾ ಶಕ್ತಿ ಯುಎಇನಲ್ಲಿ ಅನಾವರಣ ಎಂದು ಹೊಗಳಿದ ಟ್ವೀಟ್

ಮರಿಯಮ್ ಲೈಫ್ ರಿಸ್ಕ್ ನಲ್ಲಿದೆ

ಆಕೆ ಲೈಫ್ ರಿಸ್ಕ್ ನಲ್ಲಿದೆ ಉಗ್ರರ ಕಣ್ಣು ಆಕೆ ಮೇಲೆ ಬಿದ್ದಿದೆ ಎಂದು ಕಳಕಳಿಯ ಟ್ವೀಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+