ರಷ್ಯಾ ವಿರುದ್ಧ ಒಂದು ನ್ಯಾಯ, ಇಸ್ರೇಲ್‌ಗೆ ಇನ್ನೊಂದು ನ್ಯಾಯ?
ಅಮೆರಿಕ ವಿರುದ್ಧ ಇರುವ ಆರೋಪಗಳು ಒಂದಲ್ಲ, ಎರಡಲ್ಲ. ಅದರಲ್ಲೂ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧಕ್ಕೆ ಮುನ್ನುಗ್ಗಿದ ಸಮಯದಲ್ಲಿ ಅಮೆರಿಕ ಹೇಳಿದ್ದು ಏನು? ಈ ಹಿಂಸಾಚಾರ ಸರಿಯಲ್ಲ, ರಷ್ಯಾ ಯುದ್ಧ ಘೋಷಿಸಿ ಮಾನವ ವಿರೋಧಿಯಾಗಿದೆ ಅಂತಾ. ಆದರೆ ಈಗ, ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ದಾಳಿ ಮಾಡಿರುವ ಬಗ್ಗೆ ಅಮೆರಿಕ ಏನ್ ಹೇಳುತ್ತಿದೆ? ಅರೆರೆ, ಈ ಮಾತನ್ನ ನಾವು ಹೇಳ್ತಿಲ್ಲ ರೀ, ಜನರು ಕೇಳ್ತಿದ್ದಾರೆ ಸ್ವಾಮಿ!
ಒಂದು ಯುದ್ಧ ಶುರು ಮಾಡುವುದು ಎಷ್ಟು ಸುಲಭವೋ, ಅದೇ ರೀತಿ ಆ ಯುದ್ಧದಿಂದ ಉಂಟಾಗುವ ನಷ್ಟ ಅನುಭವಿಸುವುದು ಅಷ್ಟೇ ಕಷ್ಟ. ಈಗ ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಕೂಡ ಇದೇ ರೀತಿ ಆಗಿದೆ. ರಷ್ಯಾದ ಸೇನೆ ಉಕ್ರೇನ್ ವಿರುದ್ಧ ಆಕ್ರಮಣ ಮಾಡಿರುವ ಸಮಯದಲ್ಲೇ, ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಇವರಿಬ್ಬರ ವಿಚಾರದಲ್ಲಿ ವಿಶ್ವಸಂಸ್ಥೆ ಹಾಗೂ ಅಮೆರಿಕ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಭಾರಿ ಆಕ್ರೋಶ ಮೊಳಗಿದೆ. ಹಾಗಾದರೆ ಜನ ಹೇಳ್ತಿರೋದು ಏನು?

ಪುಟಿನ್ ವಿರುದ್ಧ ಕುತಂತ್ರ ನಡೆದಿತ್ತಾ?
ಹೌದು, ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಸಾರಿದ ಕಾರಣಕ್ಕೆ ಅಮೆರಿಕದ ನಾಯಕರು ಉರಿದು ಬಿದ್ದರು. ಅದರಲ್ಲೂ ರಷ್ಯಾ ವಿರುದ್ಧ ರೊಚ್ಚಿಗೆದ್ದು, ಹಲವು ಕ್ರಮ ಕೈಗೊಂಡರು. ಹಾಗೇ ಉಕ್ರೇನ್ ನೆಲದಲ್ಲಿ ಉಂಟಾದ ನಷ್ಟಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕಾರಣ ಎಂಬ ಆರೋಪ ಹೊರಿಸಿದ್ದಾರೆ. ಆದರೆ ಈಗ ಇಸ್ರೇಲ್ ಸೇನೆ ಹಮಾಸ್ ವಿರುದ್ಧದ ಯುದ್ಧದ ನೆಪದಲ್ಲಿ ನಡೆಸುತ್ತಿರುವ ದಾಳಿ ಬಗ್ಗೆ ಏನ್ ಹೇಳ್ತಿದೆ ಅಮೆರಿಕ & ವಿಶ್ವಸಂಸ್ಥೆ? ಅಂತಾ ಜಗತ್ತಿನಾದ್ಯಂತ ಜನ ಸಾಮಾನ್ಯರು ಪ್ರಶ್ನೆ ಕೇಳುತ್ತಿದ್ದಾರೆ. ಅಲ್ಲದೆ ಅಮೆರಿಕ ಮತ್ತು ವಿಶ್ವಸಂಸ್ಥೆ ವಿರುದ್ಧ ಆಕ್ರೋಶ ಮೊಳಗಿದೆ.
🇵🇸🇮🇱 “Not a drop of water, not a grain of wheat, or a liter of fuel was allowed to enter the Gaza Strip during the past eight days.” - United Nations
— Jackson Hinkle 🇺🇸 (@jacksonhinklle) October 16, 2023
🇷🇺🇺🇦 If Putin did this to Ukraine, nukes would be flying towards Moscow. pic.twitter.com/klsX0rBaEI
ರಷ್ಯಾ ವಿರುದ್ಧ ಒಂದು ನ್ಯಾಯ...
ಅಷ್ಟಕ್ಕೂ ಈಗ ವಿಶ್ವಸಂಸ್ಥೆ ಕೂಡ ಇಸ್ರೇಲ್ ಸೇನೆ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆಕ್ರೋಶ ಜಗತ್ತಿನಾದ್ಯಂತ ಮೊಳಗಿದೆ. ಅದರಲ್ಲೂ ನಿನ್ನೆ ಗಾಜಾದ ಆಸ್ಪತ್ರೆ ಮೇಲಿನ ದಾಳಿ ಆತಂಕ ಮೂಡಿಸಿದೆ. ಒಂದು ಕಡೆ ಇದನ್ನ ಹಮಾಸ್ ಬಂಡುಕೋರರೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಅದಕ್ಕೆ ಸಾಕ್ಷ್ಯಗಳೇ ಇಲ್ಲ ಅಂತಾ ಜನರು ಹೇಳ್ತಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಬಲು ಜೋರಾಗಿದೆ ಯಾವ ಸಮಯ ಏನಾಗುತ್ತೋ ಗೊತ್ತಿಲ್ಲ. ರಷ್ಯಾ ಸೇನೆ ಕೂಡ ಈ ದಾಳಿಯನ್ನ ಮಾದರಿಯಾಗಿ ಇಟ್ಕೊಂಡು ಉಕ್ರೇನ್ ವಿರುದ್ಧ ಮತ್ತಷ್ಟು ಭೀಕರವಾಗಿ ಅಟ್ಯಾಕ್ ಮಾಡಿದ್ರೆ ಕಥೆ ಏನು? ಎಂಬ ಕುರಿತು ಮಾತುಕತೆ ಜೋರಾಗಿದೆ. ಪರ & ವಿರೋಧದ ಚರ್ಚೆ ಹಲ್‌ಚಲ್ ಎಬ್ಬಿಸಿದೆ.

ರಷ್ಯಾ & ಚೀನಾ ಒಗ್ಗಟ್ಟು, ಅಮೆರಿಕಗೆ ಆಪತ್ತು?
ಇದೆಲ್ಲಾ ಒಂದು ಕಡೆ ಇರಲಿ ಇನ್ನೊಂದು ಕಡೆ ಗಾಜಾಪಟ್ಟಿಯ ಮೇಲಿನ ದಾಳಿ ವಿಚಾರಕ್ಕೆ ರಷ್ಯಾ ಮತ್ತು ಚೀನಾ ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಹೀಗಾಗಿ ಅಮೆರಿಕ ಈಗಿನ ಎಲ್ಲಾ ಬೆಳವಣಿಗೆ ಪರಿಣಾಮ ದೊಡ್ಡ ಹಿನ್ನಡೆ ಅನುಭವಿಸುತ್ತಿದೆ. ನಿನ್ನೆ ಚೀನಾಗೆ ಭೇಟಿ ನೀಡಿದ ಪುಟಿನ್ ಪ್ರಮುಖವಾಗಿ ಪ್ಯಾಲೆಸ್ತೀನ್ ಪರಿಸ್ಥಿತಿ ಮತ್ತು ಇಸ್ರೇಲ್ ಯುದ್ಧದ ಬಗ್ಗೆಯೇ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಚೀನಾ, ರಷ್ಯಾ ಸೇರಿ ಈ ವಿಚಾರದಲ್ಲಿ ಅಮೆರಿಕ ವಿರುದ್ಧ ತಂತ್ರ ರೂಪಿಸುತ್ತಿರುವ ಮುನ್ಸೂಚನೆ ಸಿಕ್ಕಿದೆ.
Look what Putin did to Ukraine.
— Dr. Anastasia Maria Loupis (@DrLoupis) October 17, 2023
Oh, wait. This is what Israel did to Gaza. pic.twitter.com/gEA7K6yRfo
ಮನುಷ್ಯನಿಗೆ ಬುದ್ಧಿ ಬಂದಿಲ್ಲ ಬುದ್ಧಿ ಬರೋದು ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಇಸ್ರೇಲ್ ವಿರುದ್ಧ ಹಮಾಸ್ ದಾಳಿ ಮಾಡಿದ ಕಾರಣಕ್ಕೆ ಶುರುವಾಗಿರುವ ಯುದ್ಧ ಜಗತ್ತಿಗೇ ಕಂಟಕ ತಂದಿದೆ. ಆದರೆ ವಿಶ್ವಸಂಸ್ಥೆ ಈ ವಿಚಾರದಲ್ಲಿ ತಾರತಮ್ಯ ತೋರುತ್ತಿದೆ ಎಂಬುದು ಜಗತ್ತಿನಾದ್ಯಂತ ಕೇಳಿಬರುತ್ತಿರುವ ಆರೋಪ. ಹೀಗಾಗಿ ನೋಡ ನೋಡುತ್ತಲೇ ಮತ್ತೊಂದು ಯುದ್ಧ ಗ್ಯಾಂಗ್ರಿನ್ ರೀತಿ ಪ್ರಪಂಚದ ಮೂಲೆ ಮೂಲೆಗೂ ಹಬ್ಬುತ್ತಿದೆ. ಇನ್ನು ಉಕ್ರೇನ್‌ನ ಪರವಾಗಿ ಒಂದು ನ್ಯಾಯ, ಗಾಜಾಪಟ್ಟಿ ಜನರ ವಿರುದ್ಧ ಇನ್ನೊಂದು ನ್ಯಾಯ ಅಂತಲೂ ಜನ ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications