ರಷ್ಯಾ ಸೈನಿಕರಿಗೆ ಭಯಾನಕ ಕಾಯಿಲೆ? ಉಕ್ರೇನ್ ವಿರುದ್ಧ ಸೋಲು ಪಕ್ಕಾ?
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಘೋರವಾದ ಸಮಯದಲ್ಲೇ ಹೊಸ ಭಯ ಇದೀಗ ರಷ್ಯಾ ಸೇನೆಗೆ ಶುರುವಾಗಿದೆ. ಅದರಲ್ಲೂ ಉಕ್ರೇನ್ ವಿರುದ್ಧ ಇನ್ನೇನು ದಿಗ್ವಿಜಯ ಸಾಧಿಸಿ, ಹೊಸ ಇತಿಹಾಸ ಬರೆಯಬೇಕು ಎನ್ನುವಷ್ಟರಲ್ಲಿ ನಿಗೂಢ ಕಾಯಿಲೆ ಕಾರಣ ರಷ್ಯಾ ಸೈನಿಕ ಪಡೆ ನರಳುತ್ತಿದೆಯಂತೆ. ಅದರಲ್ಲೂ ಉಕ್ರೇನ್ ಪ್ರದೇಶಗಳನ್ನು ಇಷ್ಟುದಿನ ಒಂದೊಂದಾಗಿ ತಮ್ಮ ವಶಕ್ಕೆ ಪಡೆದಿದ್ದ ರಷ್ಯಾದ ಮುಂಚೂಣಿ ಸೈನಿಕರಿಗೇ ಈ ನಿಗೂಢ ರೋಗ ಬಂದಿದೆ.
ರಷ್ಯಾ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ನಿರಂತರವಾಗಿ ನಡೆಸಿದ ದಾಳಿ ಪರಿಣಾಮ, ಉಕ್ರೇನ್ ಭಾಗಶಃ ನಾಶವಾಗಿ ಹೋಗಿದೆ. ಜನ ದಿಕ್ಕಾಪಾಲಗಿ ಹುಟ್ಟಿ ಬೆಳೆದ ಊರು ಓಡಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಈಗ ಅಲ್ಲಿ ನಿಗೂಢ ರೋಗ ಆವರಿಸಿದೆ. ಅದ್ರಲ್ಲೂ ರಷ್ಯಾ ಸೈನಿಕರಲ್ಲೇ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದನ್ನು ಮೇಲ್ನೋಟಕ್ಕೆ 'ಇಲಿ ಜ್ವರ' ಎನ್ನುತ್ತಾ ಭಯ ಹುಟ್ಟಿಸಿದ್ದಾರೆ ಸ್ಥಳೀಯರು. ಅದರಲ್ಲೂ ಉಕ್ರೇನ್ ನೀಡಿರುವ ಮಾಹಿತಿ ಆಧರಿಸಿ ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮ ವರದಿ ಪ್ರಕಟಿಸಿ, ಸಂಚಲನವನ್ನೇ ಈಗ ಸೃಷ್ಟಿಸಿದೆ.

ಸೈನಿಕರಿಗೆ ಏನಿದು ನಿಗೂಢ ರೋಗ?
ರಷ್ಯಾ ಸೈನಿಕರು ಉಕ್ರೇನ್ ವಿರುದ್ಧ ಗೆಲುವಿಗಾಗಿ ಹಗಲು & ರಾತ್ರಿ ಲೆಕ್ಕ ಮಾಡದೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಸಾವಿರಾರು ರಷ್ಯಾ ಸೈನಿಕರಿಗೆ ಅದರಲ್ಲೂ ಉಕ್ರೇನ್‌ನ ಕುಪ್ಯಾನ್ಸ್ಕ್ ಪ್ರಾಂತ್ಯದಲ್ಲಿ ಹೋರಾಟ ನಡೆಸುತ್ತಿರುವ ರಷ್ಯಾ ಸೈನಿಕರಲ್ಲಿ, ಈ ನಿಗೂಢ ರೋಗ ಇದೀಗ ಕಂಡುಬಂದಿದೆ ಎನ್ನಲಾಗಿದೆ. ಇದರ ಪರಿಣಾಮ ರಷ್ಯಾ ಸೈನಿಕರು ನಿತ್ಯ ನರಳಾಡುತ್ತಿದ್ದಾರೆ ಅಂತಾ ವರದಿ ಹೇಳಿದೆ. ಮೊದಲೇ ಹೇಳಿದಂತೆ ಈ ರೋಗದ ಲಕ್ಷಣಗಳು 'ಇಲಿ ಜ್ವರ'ಕ್ಕೂ ಹೋಲಿಕೆ ಆಗುತ್ತಿದ್ದು, ಅದರ ಲಕ್ಷಣಗಳು ಏನು ಗೊತ್ತಾ?
ರಷ್ಯಾ ಸೈನಿಕರಿಗೆ ವಾಂತಿ, ಕಣ್ಣಲ್ಲಿ ರಕ್ತ?
ಈಗ ಉಕ್ರೇನ್ ಮಾಡಿರುವ ಆರೋಪದ ಪ್ರಕಾರ ರಷ್ಯಾ ಸೈನಿಕರು 'ಇಲಿ ಜ್ವರ'ದ ಹಿನ್ನೆಲೆ ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. 'ಇಲಿ ಜ್ವರ'ದ ಪರಿಣಾಮ ರಷ್ಯಾ ಸೈನಿಕರು ಜ್ವರದಿಂದ ನರಳುತ್ತಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ವಿಪರೀತ ವಾಂತಿ & ಕಣ್ಣಲ್ಲಿ ರಕ್ತ ಸೋರುವ ವರದಿ ಬಂದಿದೆ. ರಷ್ಯಾ ಸೈನಿಕರು ಇದರಿಂದ ಬಳಲಿ ಹೋಗಿದ್ದು, ಉಕ್ರೇನ್‌ನಲ್ಲಿ ಹೋರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಅಂತಾ ಉಕ್ರೇನ್ ನೀಡಿದ್ದ ಮಾಹಿತಿ ಉಲ್ಲೇಖ ಮಾಡಿ ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಹಾಗಾದರೆ ಈ ಬಗ್ಗೆ ರಷ್ಯಾ ಏನ್ ಹೇಳ್ತಾ ಇದೆ? ಮುಂದೆ ಓದಿ.

'ಎಲ್ಲಾ ಸುಳ್ಳು' ಅಂತಿದೆ ರಷ್ಯಾ!
ಹೌದು ಈ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ಇದೆಲ್ಲಾ ಸುಳ್ಳು. ಸುಖಾಸುಮ್ಮನೆ ಇಂತಹ ಸುದ್ದಿ ಹರಿಬಿಡುತ್ತಿದ್ದಾರೆ. ಹಾಗೇ ಕೆಲವರು ಯುದ್ಧದಲ್ಲಿ ಹೋರಾಟ ಮಾಡುವುದನ್ನ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಕೂಡ ಮಾಡಿದೆ. ಅಲ್ಲದೆ ಉಕ್ರೇನ್ ವಿರುದ್ಧ ಕೂಡ ರಷ್ಯಾ ಗರಂ ಆಗಿ, ಹರಿಹಾಯ್ದಿದೆ. ಒಟ್ನಲ್ಲಿ ಈ ನಿಗೂಢ ರೋಗ ರಷ್ಯಾ ಸೈನಿಕರನ್ನು ಕಾಡುತ್ತಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಈ ಸುದ್ದಿಯಂತು ಈಗ ಸಖತ್ ಆತಂಕ ಹುಟ್ಟಿಸಿರುವುದು ನಿಜ.
ಮತ್ತೊಂದು ಕಡೆ ರಷ್ಯಾ ಸೇನೆಗೆ ಈ ಯುದ್ಧದಲ್ಲಿ ಹೀಗೆ ಹಿನ್ನಡೆ ಮಾಡುವ ಉದ್ದೇಶದಿಂದ ಇಷ್ಟೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ, ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಆದ್ರೆ ರಷ್ಯಾ ಮಾತ್ರ ಇದನ್ನೆಲ್ಲಾ ಲೆಕ್ಕ ಮಾಡದೆ, ಉಕ್ರೇನ್‌ನ ಉಳಿದ ಪ್ರದೇಶಗಳ ಮೇಲೂ ದಾಳಿ ನಡೆಸುತ್ತಿದೆ. ಒಟ್ನಲ್ಲಿ ಯುದ್ಧ ಕ್ಷಣಕ್ಷಣಕ್ಕೂ ಮತ್ತಷ್ಟು ಭೀಕರವಾಗುತ್ತಿದೆ. ಇದರಿಂದ ಸಾಮಾನ್ಯ ಜನರು ನರಳುವಂತಾಗಿದೆ.












Click it and Unblock the Notifications