ಇರಾಕಿ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಹತ್ಯೆ?

Posted By:
Subscribe to Oneindia Kannada

ತೆಹರಾನ್ (ಇರಾಕ್), ಜೂನ್ 14: ವಿಶ್ವದ ಅತ್ಯಂತ ಕುಖ್ಯಾತ ಭಯೋತ್ಪಾದಕ, ಇರಾಕಿ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕಲ್ ಅಲ್ ಬಗ್ದಾದಿ ಹತ್ಯೆಯಾಗಿದೆ ಎಂಬ ಸುದ್ದಿ ಮತ್ತೊಮ್ಮೆ ಕೇಳಿ ಬಂದಿದೆ. ಆದರೆ, ಬಗ್ದಾದಿ ಬಲಿಯಾದ ಕಥೆ 'ತೋಳ ಬಂತು ತೋಳ' ಕಥೆಯಂತೆ ಆಗಿರುವುದರಿಂದ ತಕ್ಷಣಕ್ಕೆ ನಂಬಲು ಸಾಧ್ಯವಿಲ್ಲದಿದ್ದರೂ ಈ ಬಾರಿ ಸ್ವತಃ ಇಸೀಸ್ ನ ನ್ಯೂಸ್ ಏಜೆನ್ಸಿ ಈ ಸುದ್ದಿಯನ್ನು ಹೊರಹಾಕಿದೆ.

ಜೂನ್ 10ರಿಂದ ಬಗ್ದಾದಿ ಸಾವಿನ ಸುದ್ದಿ ಹಬ್ಬಿದೆ. ವೈಮಾನಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಗ್ದಾದಿ ಎರಡು ದಿನಗಳ ಬಳಿಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹೀಗೆಂದು ಐಎಸ್ಐಎಸ್ ನ ನ್ಯೂಸ್ ಏಜೆನ್ಸಿ ಅಮಾಕ್ ಮಂಗಳವಾರ (ಜೂನ್ 14) ವರದಿ ಮಾಡಿದೆ. ತನ್ನನ್ನು 'ಅದೃಶ್ಯ ಶೇಖ್' ಎಂದು ಕರೆದುಕೊಳ್ಳುತ್ತಿದ್ದ ಬಗ್ದಾದಿ ಯಾವಾಗಲೂ ಮುಸುಕುಧಾರಿಯಾಗಿರುತ್ತಿದ್ದ.

Is Bhagdadi dead, alive or just faking it?

ಯುಎಸ್ ಮಿತ್ರಪಡೆಗಳು ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದಾಗ ಬಗ್ದಾದಿ ಗಾಯಗೊಂಡಿದ್ದ. ಹೀಗಾಗಿ ಮಾರ್ಚ್ ತಿಂಗಳಿನಿಂದ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇತೀಚೆಗೆ ಇಸೀಸ್ ಗೆ ಮುಂದಿನ ಉತ್ತರಾಧಿಕಾರಿ ನೇಮಿಸಲು ಸಭೆ ಕೂಡಾ ನಡೆಸಲಾಗಿತ್ತು.

ಆದರೆ, ಒಸಾಮಾ ಬಿನ್ ಲಾಡೆನ್ ವಿಷಯದಲ್ಲೂ ಇದೇ ರೀತಿ ಆಗಿತ್ತು. ಸದ್ದಾಂ ಹುಸೇನ್ ಸತ್ತಾಗಲೂ ಪುನರಾವರ್ತನೆಯಾಗಿತ್ತು. ಈಗ ಬಗ್ದಾದಿ ಹತ್ಯೆ ನಿಜವಾದರೆ, ಅದು ಉಗ್ರಗಾಮಿಗಳ ವಿರುದ್ಧ ಯುಎಸ್ ಹಾಗೂ ಮಿತ್ರಪಡೆಯ ಬಹುದೊಡ್ಡ ವಿಜಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
On June 10th a news report stated that the chief of the ISIS, Abu Bakr al-Baghdadi was injured in an air strike.Today according to Amaq the official news agency of the ISIS, Baghdadi had died. This is however not for the first time that the news regarding the death of the ISIS chief who is nicknamed the invisible sheikh has surfaced.
Please Wait while comments are loading...