ಇರಾಕ್ ನ ಟೈಗ್ರಿಸ್ ನದಿಯಲ್ಲಿ ದೋಣಿ ದುರಂತ; ಕನಿಷ್ಠ 100 ಮಂದಿ ಸಾವು
ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ದೋಣಿ ಮುಳುಗಿ, ಕನಿಷ್ಠ 100 ಮಂದಿ ಸಾವನ್ನಪ್ಪಿದ ಘಟನೆ ಇರಾಕ್ ನ ಮೊಸುಲ್ ಬಳಿ ಇರುವ ಟೈಗ್ರಿಸ್ ನದಿಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದವರ ಪೈಕಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದುಬಂದಿದ್ದು, ಅವರಿಗೆ ಈಜಲು ಸಾಧ್ಯವಾಗಿಲ್ಲ ಎಂದು ಮೊಸುಲ್ ನಾಗರಿಕ ರಕ್ಷಣಾ ಮುಖ್ಯಸ್ಥ ಹುಸುಮ್ ಖಲೀಲ್ ಹೇಳಿದ್ದಾರೆ.
ಪರಿಹಾರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ತಂಡವು ಈ ವರೆಗೆ ಹನ್ನೆರಡು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೂವತ್ತು ಮಂದಿ ನಾಪತ್ತೆಯಾಗಿದ್ದಾರೆ. ಈ ದೋಣಿಯಲ್ಲಿ ನೂರು ಮಂದಿ ಇದ್ದರು. ಅವರ ಪೈಕಿ ಬಹುತೇಕರಿಗೆ ಈಜಲು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಈ ದೋಣಿಯು ಪ್ರವಾಸಿಪರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉಮ್ ರಬೇನ್ ದ್ವೀಪದ ಕಡೆಗೆ ತೆರಳುತ್ತಿತ್ತು. ಮೊಸುಲ್ ನಲ್ಲಿ ಅಣೆಕಟ್ಟೆ ಗೇಟ್ ಗಳನ್ನು ತೆಗೆದಿದ್ದರಿಂದ ನೀರಿನ ಪ್ರಮಾಣ ಹೆಚ್ಚಿತ್ತು. ಆದ್ದರಿಂದ ನದಿಯಲ್ಲಿ ತೆರಳದಂತೆ ಸೂಚಿಸಲಾಗಿತ್ತು. ಇದನ್ನು ಮೀರಿಯೂ ಜನರು ತೆರಳಿದ್ದಾರೆ ಎಂದು ದೋಣಿ ನಡೆಸುವವರ ವಿರುದ್ಧ ಆರೋಪ ಮಾಡಲಾಗಿದೆ.












Click it and Unblock the Notifications