ಇರಾನ್ ಸುಪ್ರೀಂ ಲೀಡರ್‌ಗೆ ರಷ್ಯಾ ದೇಶದಲ್ಲಿ ನೆಲೆ ಸಿಗುತ್ತಾ? Israel And Iran
ಇರಾನ್ ನೆಲದಲ್ಲಿ ಗಲಾಟೆ ನಡೆಯುತ್ತಿರುವ ರೀತಿಗೆ ಅಲ್ಲಿನ ಜನರು ಭವಿಷ್ಯದ ಕನಸು ಮರೆತು ಇದೀಗ ಓಡಿ ಹೋಗುವಂತೆ ಆಗಿದೆ. ನೋಡ ನೋಡುತ್ತಲೇ ಇರಾನ್ ಪೂರ್ತಿ ನಾಶವಾಗುತ್ತಾ ಇದ್ದು, ಸುಮಾರು 19,000 ಕಟ್ಟಡಗಳು ಇಸ್ರೇಲ್ ದಾಳಿಯಲ್ಲಿ ಧೂಳ್ ಧೂಳ್ ಆಗಿ ಹೋಗಿವೆ ಅನ್ನೋ ಆರೋಪ ಕೂಡ ಇದೆ. ಇಂತಹ ಸಮಯದಲ್ಲೇ ಇರಾನ್ ಸುಪ್ರೀಂ ಲೀಡರ್‌ಗೆ ರಷ್ಯಾ ದೇಶದಲ್ಲಿ ನೆಲೆ ಸಿಗುತ್ತಾ? ಅನ್ನೋ ಚರ್ಚೆ ಶುರುವಾಗಿದೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ & ಇರಾನ್ ಯುದ್ಧ ಘೋರ ದುರಂತದ ಮುನ್ಸೂಚನೆ ನೀಡಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಶುರುವಾಗಲು ಪ್ರಮುಖ ಕಾರಣ ಡ್ರೋನ್ ದಾಳಿ ಎಂದು ಆರೋಪಿಸಲಾಗಿದೆ. ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ, ತಿರುಗೇಟು ನೀಡಲು ಮರುದಾಳಿ ನಡೆಸಿತ್ತು. ಹೀಗೆ ಶುರುವಾಗಿದ್ದ ಜಗಳ ಒಬ್ಬರ ಮೇಲೆ ಮತ್ತೊಬ್ಬರು ಪರಮಾಣು ಬಾಂಬ್ ಹಾಕುವಷ್ಟು ದೂರಕ್ಕೆ ಬಂದು ನಿಂತಿದೆ. ಆದರೆ ಇದೇ ಸಮಯದಲ್ಲಿ ಇರಾನ್ ಸುಪ್ರೀಂ ಲೀಡರ್ ಬಗ್ಗೆಯೇ ಭಾರಿ ಚರ್ಚೆ ನಡೆಯುತ್ತಿದೆ.

ಇರಾನ್ ಸುಪ್ರೀಂ ಲೀಡರ್ ರಷ್ಯಾಗೆ ಎಸ್ಕೇಪ್?
ಈಗಿರುವ ಮಾಹಿತಿ ಪ್ರಕಾರ ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಯಾರ ಕಣ್ಣಿಗೆ ಕೂಡ ಬಿದ್ದಿಲ್ಲ. ಅದರಲ್ಲೂ ಮತ್ತಷ್ಟು ಮೂಲಗಳ ಪ್ರಕಾರ ಈಗಾಗಲೇ ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ದೇಶವನ್ನೇ ಬಿಟ್ಟು ಎಸ್ಕೇಪ್ ಆಗಿರುವ ಸಾಧ್ಯತೆ ಇದೆಯಂತೆ. ಹಾಗೇ ರಷ್ಯಾ ದೇಶದಲ್ಲಿ ಅಲಿ ಖಮೇನಿಗೆ ನೆಲೆ ಅಂದ್ರೆ ಬದುಕಲು ಜಾಗ ಸಿಗಲಿದೆಯಾ? ಅನ್ನೋ ಚರ್ಚೆಗಳು ಕೂಡ ಜೋರಾಗುತ್ತಿವೆ. ಈ ಮೂಲಕ ಇರಾನ್ ದೇಶದ ಸುಪ್ರೀಂ ಲೀಡರ್ ಅಲಿ ಖಮೇನಿ ಬಗ್ಗೆ ಕುತೂಹಲ ಡಬಲ್ ಆಗುತ್ತಿದೆ.












Click it and Unblock the Notifications