ಇರಾನ್ ಸುಪ್ರೀಂ ಲೀಡರ್‌ಗೂ ಭಯ ಹುಟ್ಟಿಸಿದ ಇಸ್ರೇಲ್ ಮಿಲಿಟರಿ?
ಭೂಮಿ ಮೇಲೆ ನರಕ ನೋಡಬೇಕಾ? ನೀವು ನರಕ ನೋಡಲು ಬೇರೆ ಎಲ್ಲೆಲ್ಲಿಗೋ ಹೋಗಿ ಬರಬೇಕಿಲ್ಲ. ಜಸ್ಟ್ ಒಂದು ಬಾರಿ ಮಧ್ಯಪ್ರಾಚ್ಯಕ್ಕೆ ಹೋಗಿ ಬಂದರೆ ಸಾಕು ನಿಮಗೆ ನರಕದ ದರ್ಶನ ಆಗಲಿದೆ. ಯಾಕಂದ್ರೆ ಇಸ್ರೇಲ್ & ಮಧ್ಯಪ್ರಾಚ್ಯದ ದೇಶಗಳ ನಡುವೆ ಈಗ ಯುದ್ಧ ನಡೆಯುತ್ತಿದೆ. ಗಾಜಾ, ಲೆಬನಾನ್, ಸಿರಿಯಾ, ಇರಾನ್.. ಹೀಗೆ ಎಲ್ಲಾ ದೇಶಗಳು ಇಸ್ರೇಲ್ ವಿರುದ್ಧ ತಿರುಗಿಬಿದ್ದಿದ್ದು, ಇಸ್ರೇಲ್ ಕೂಡ ಈ ಎಲ್ಲಾ ದೇಶಗಳ ಮೇಲೆ ಮಾರಣಾಂತಿಕ ದಾಳಿ ನಡೆಸುತ್ತಿದೆ ಎಂಬ ಆರೋಪವಿದೆ. ಇಷ್ಟೆಲ್ಲದರ ನಡುವೆ ಇರಾನ್ ದೇಶಕ್ಕೂ ಇಸ್ರೇಲ್ ಭಯ ಶುರುವಾಗಿದೆ.
ದಿಢೀರ್ ಇಸ್ರೇಲ್ ಲೆಬನಾನ್ ದಕ್ಷಿಣ ಭಾಗದ ಮೇಲೆ ಮುಗಿಬಿದ್ದು ಬಂದಿದ್ದು, ಭೀಕರವಾಗಿ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಇಂದು ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಜೀವ ತೆಗೆದಿರುವ ಇಸ್ರೇಲ್, ಮತ್ತಷ್ಟು ಬಲಿಗಾಗಿ ಕಾದು ಕುಳಿತಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಇದೇ ಕಾರಣಕ್ಕೆ ಅಲರ್ಟ್ ಆಗಿರುವ ಇರಾನ್ ಕೂಡ ಯುದ್ಧ ಸಿದ್ಧತೆಯಲ್ಲಿ ತೊಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದೆಲ್ಲವನ್ನೂ ಮೀರಿ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲ ಅಲಿ ಖಮೇನಿ ಇದೀಗ ರಹಸ್ಯ ಸ್ಥಳಕ್ಕೆ ಹೋಗಿದ್ದು, ಜೀವ ಉಳಿಸಿಕೊಳ್ಳಲು ಖಮೇನಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಸಾವಿನ ಸುದ್ದಿ ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ಸಂಚಲನ ಸೃಷ್ಟಿಸಿದೆ.

ಇರಾನ್ ವಿರುದ್ಧವೂ ಇಸ್ರೇಲ್ ಅಟ್ಯಾಕ್?
ಭೂಮಿ ಮೇಲೆ ಹಲವು ಯುದ್ಧಗಳು ನಡೆಯುತ್ತಿದ್ದು, ಮತ್ತೊಂದು ವಿನಾಶಕ್ಕೆ ಮನುಷ್ಯರು ಮುನ್ನುಡಿ ಬರೆದಂತೆ ಕಾಣುತ್ತಿದೆ. ಯಾಕಂದ್ರೆ ಇಸ್ರೇಲ್ ಇದೀಗ ಗಾಜಾ, ಲೆಬನಾನ್, ಸಿರಿಯಾ ಮೇಲೆ ದಾಳಿ ಮಾಡುತ್ತಿದೆ. ಇದೇ ಸಮಯದಲ್ಲಿ ಇರಾನ್ ವಿರುದ್ಧ ಕೂಡ ಇಸ್ರೇಲ್ ಮಿಲಿಟರಿ ದಾಳಿ ಮಾಡುತ್ತಾ? ಎಂಬ ಭೀತಿ ಆವರಿಸಿದೆ. ಪರಿಸ್ಥಿತಿ ಹಿಗಿದ್ದಾಗ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲ ಅಲಿ ಖಮೇನಿ ರಕ್ಷಣೆಗೆ ಇರಾನ್ ಸರ್ಕಾರ ಮೊದಲ ಆದ್ಯತೆ ನೀಡಿದೆ. ಹೀಗಾಗಿ, ಆಯತೊಲ್ಲ ಅಲಿ ಖಮೇನಿ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆಯಲ್ಲಿ ಇಸ್ರೇಲ್ ಸೈಲೆಂಟ್ ಮಾಡಲು ಅಮೆರಿಕ ಪರದಾಡುತ್ತಿದೆ.
ಮತ್ತೊಂದು ಮಹಾಯುದ್ಧ ಶುರುವಾಯ್ತಾ?
ಹಿಜ್ಬುಲ್ಲಾ ಸಂಘಟನೆ ವಿರುದ್ಧ ಇಸ್ರೇಲ್ ಯಾವ ರೀತಿ ದಾಳಿ ಮಾಡುತ್ತಿದೆ ಎಂದರೆ, ಈಗಿನ ಪರಿಸ್ಥಿತಿ ನೋಡಿದರೆ ಹಿಜ್ಬುಲ್ಲಾ ಸಂಘಟನೆಯ ದೊಡ್ಡ ದೊಡ್ಡ ನಾಯಕರು ಜೀವ ಬಿಡುವುದು ಗ್ಯಾರಂಟಿ ಎನ್ನಲಾಗಿದೆ. ಅದೇ ರೀತಿ ಇದೀಗ, ಒಬ್ಬರಾದ ನಂತರ ಒಬ್ಬರು ಮುಖಂಡರು & ನಾಯಕರು ಜೀವ ಬಿಡುತ್ತಿದ್ದಾರೆ. ಒಂದು ದಿನದ ಹಿಂದಷ್ಟೆ ಹಿಜ್ಬುಲ್ಲಾ ಸಂಘಟನೆ ಕಮಾಂಡರ್ ಜೀವ ಕಳೆದುಕೊಂಡ ನಂತರ ಇದೀಗ ಮತ್ತೊಂದು ಭೀಕರ ಆರೋಪ ಕೇಳಿಬಂದಿದೆ. ಅದು ಏನಂದ್ರೆ, ಇಸ್ರೇಲ್ ಮಿಲಿಟರಿ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಉಸಿರು ಚೆಲ್ಲಿರುವ ಸುದ್ದಿ ಮಿಂಚಿನಂತೆ ಸಂಚರಿಸಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧ ಶುರುವಾಯ್ತಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications