ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಯಾವುದೇ ಶಾಂತಿ ಒಪ್ಪಂದ ಇಲ್ಲ ಎಂದ ಇರಾನ್! ಟ್ರಂಪ್‌ಗೆ ಮುಖಭಂಗ! Iran vs Israel Conflict
Iran vs Israel Conflict: ಇರಾನ್ ಮತ್ತು ಇಸ್ರೇಲ್ ಯುದ್ಧದ ವಿಚಾರದಲ್ಲಿ ಕ್ಷಣಕ್ಕೊಂದು ನಾಟಕೀಯ ಬೆಳವಣಿಗೆ ನಡೆಯುತ್ತಿದೆ. ಇನ್ನೇನು ಇಸ್ರೇಲ್ ಹಾಗೂ ಇರಾನ್‌ನ ನಡುವೆ ಯುದ್ಧ ನಿಂತೇ ಹೋಯಿತು. ಎರಡೂ ದೇಶಗಳು ಶಾಂತಿ ಒಪ್ಪಂದಕ್ಕೆ ಮುಂದಾಗಿವೆ. ಇನ್ನು ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಹಾಗೂ ಇರಾನ್‌ನ ನಡುವೆ ಕದನ ವಿರಾಮ ಘೋಷಣೆ ಆಗಲಿದೆ ಎನ್ನುವಾಗಲೇ ದೊಡ್ಡ ಟ್ವಿಸ್ಟ್ ಎದುರಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಗಳನ್ನು ಇರಾನ್ ನೇರವಾಗಿ ತಿರಸ್ಕರಿಸಿದೆ. ಅಲ್ಲದೇ ಟ್ರಂಪ್ ಹೇಳುವಂತೆ ಯಾವುದೇ ಶಾಂತಿ ಒಪ್ಪಂದ ಆಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸೋಷಿಯಲ್ ಮೀಡಿಯಾ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಇರಾನ್ ಈ ವಿಚಾರವಾಗಿ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೊಮ್ಮೆ ಮುಖಭಂಗವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ಎರಡು ತಿಂಗಳಿನಿಂದಲೂ ಭಾರೀ ಮುಜುಗರದ ಪ್ರಸಂಗಗಳನ್ನು ಎದುರಿಸುತ್ತಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಿಲ್ಲುವುದಕ್ಕೆ ನಾನೇ ಕಾರಣ ಅಂತ ಬೆನ್ನು ತಟ್ಟಿಕೊಂಡಿದ್ದ ಡೊನಾಲ್ಡ್ ಟ್ರಂಪ್‌ಗೆ ಭಾರತ ಹಾಗೂ ಪಾಕಿಸ್ತಾನ ಎರಡೂ ಕಡೆಯಿಂದಲೂ ತಿರುಗೇಟು ಸಿಕ್ಕಿತ್ತು. ನಾವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದಂತೆ ಕದನ ವಿರಾಮ ಘೋಷಿಸಿಕೊಂಡಿಲ್ಲ ಎಂದು ಭಾರತವು ಸ್ಪಷ್ಟಪಡಿಸಿತ್ತು. ಇದೀಗ ಇರಾನ್ ಮೇಲೆ ಅಮೆರಿಕ ದಾಳಿ ಮಾಡಿ, ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಹೇಳಿತ್ತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ರೀತಿ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಇರಾನ್ ಪ್ರತಿಕ್ರಿಯಿಸಿದೆ. ನಾವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದಂತೆ ಯಾವುದೇ ರಾಜಿ ಸಂಧಾನ ಮಾಡಿಕೊಂಡಿಲ್ಲ ಎಂದು ಹೇಳಿದೆ. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತೀವ್ರ ಮುಜುಗರ ಎದುರಾಗಿದೆ.
ಇರಾನ್ ಪದೇ ಪದೇ ಸ್ಪಷ್ಟಪಡಿಸಿದಂತೆ: ಇರಾನ್ ಮೇಲೆ ಇಸ್ರೇಲ್ ಯುದ್ಧ ಆರಂಭಿಸಿತು. ಪ್ರತಿ ದಾಳಿಯಾಗಿಯೂ ಅಲ್ಲ. ಈಗ, ಯಾವುದೇ ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಯಾವುದೇ "ಒಪ್ಪಂದ" ಇಲ್ಲ. ಆದಾಗ್ಯೂ, ಇಸ್ರೇಲಿ ಆಡಳಿತವು ಇರಾನ್ ಜನರ ವಿರುದ್ಧ ತನ್ನ ಕಾನೂನುಬಾಹಿರ ಆಕ್ರಮಣವನ್ನು ಟೆಹ್ರಾನ್ ಸಮಯ ಬೆಳಿಗ್ಗೆ 4 ಗಂಟೆಯೊಳಗೆ ನಿಲ್ಲಿಸಿದರೆ, ನಂತರ ನಮ್ಮ ಪ್ರತಿಕ್ರಿಯೆಯನ್ನು ಮುಂದುವರಿಸುವ ಉದ್ದೇಶ ನಮಗಿಲ್ಲ. ನಮ್ಮ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಕುರಿತು ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಇರಾನ್‌ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಘ್ಚಿ ಅವರು ಹೇಳಿದ್ದಾರೆ.












Click it and Unblock the Notifications