ಕದನ ವಿರಾಮ ಉಲ್ಲಂಘನೆ ಮಾಡಿಲ್ಲ, ಇಸ್ರೇಲ್ ಆರೋಪಕ್ಕೆ ಉತ್ತರ ನೀಡಿದ ಇರಾನ್! Iran And Israel
ಇಸ್ರೇಲ್ & ಇರಾನ್ ನಡುವೆ ಕದನ ವಿರಾಮ ಘೋಷಣೆ ನಂತರ ನಿಯಮ ಉಲ್ಲಂಘಿಸಿದ ಆರೋಪವನ್ನು ಮಾಡಲಾಗಿತ್ತು. ಇರಾನ್ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿದೆ ಎಂಬ ಗಂಭೀರ ಆರೋಪ ಹೊರಿಸಲಾಗಿತ್ತು. ಈ ಬೆಳವಣಿಗೆ ಮತ್ತೆ ದೊಡ್ಡ ಕಿಚ್ಚು ಹೊತ್ತಿಸಿ, ಇಬ್ಬರೂ ಯುದ್ಧವನ್ನ ಮತ್ತೆ ಶುರು ಮಾಡಲಿದ್ದಾರೆ ಎಂಬ ಭಯದ ನಡುವೆ ದಿಢೀರ್ ಇರಾನ್ ಉಲ್ಟಾ ಹೊಡೆದಿದೆ. ನಾವು ಕದನ ವಿರಾಮ ಉಲ್ಲಂಘನೆ ಮಾಡಿಲ್ಲ, ಇದೆಲ್ಲಾ ಸುಳ್ಳು ಅಂತಾ ಹೇಳುವ ಮೂಲಕ ಕಹಾನಿಗೆ ಟ್ವಿಸ್ಟ್ ಕೊಟ್ಟಿದೆ!
ಯೆಸ್, ಇಸ್ರೇಲ್ & ಇರಾನ್ ಯುದ್ಧ ನಿಲ್ಲಿಸಿದ್ದೇನೆ ಅಂತಾ ಬೀಗುತ್ತಿದ್ದ ಅಮೆರಿಕದ ಎದೆ ಕೂಡ ಒಂದು ಕ್ಷಣ ನಿಂತು ಹೋಗುವ ಪರಿಸ್ಥಿತಿ ಎದುರಾಗಿತ್ತು. ಯಾಕಂದ್ರೆ ಇಸ್ರೇಲ್ & ಇರಾನ್ ಯುದ್ಧ ನಿಂತ ಬೆನ್ನಲ್ಲೇ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಘಟನೆಯ ನಂತರ ಮತ್ತೆ ತಿಕ್ಕಾಟ ಜೋರಾಗುವ ಭಯ ಕೂಡ ಆವರಿಸಿತ್ತು. ಆದರೆ ಇದೇ ಸಮಯದಲ್ಲಿ ಇರಾನ್ ಖಡಕ್ ಉತ್ತರವನ್ನ ಕೊಟ್ಟಿದ್ದು, ನಾವು ತಪ್ಪು ಮಾಡಿಲ್ಲ ಅಂತಿದೆ.

ಕದನ ವಿರಾಮ ಉಲ್ಲಂಘನೆ ಆರೋಪ ಸುಳ್ಳು?
ಅಮೆರಿಕ & ಇರಾನ್ ನಡುವೆ ದ್ವೇಷ ಶುರುವಾಗಿ ಹಲವು ದಶಕಗಳೇ ಕಳೆದು ಹೋಗಿವೆ. ಆದರೆ ಈ ದ್ವೇಷ ಕಡಿಮೆ ಆಗುವ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗಿತ್ತು. ಮತ್ತೊಂದು ಕಡೆ ಯಾವಾಗ ಇದೇ ಇರಾನ್ ಪರಮಾಣು ಬಾಂಬ್ ಪರೀಕ್ಷೆ ಮಾಡಲು ಮುಂದಾಗಿತ್ತೋ ಆಗಲೇ ನೋಡಿ ಜಗಳ ಜೋರಾಗಿದ್ದು, ಬಡಿದಾಟ ಹೆಚ್ಚಾಗಿದ್ದು. ಹೀಗಿದ್ದಾಗ ಇಬ್ಬರ ನಡುವೆ ಒಪ್ಪಂದ ಮಾಡಿಸಿ, ಯುದ್ಧವನ್ನ ನಿಲ್ಲಿಸಲಾಗಿತ್ತು.
ಇಸ್ರೇಲ್ ಮತ್ತೆ ದಾಳಿ ಮಾಡುತ್ತಾ?
ಆದರೆ ಹೀಗೆ ಕದನ ವಿರಾಮ ಘೋಷಣೆ ಮಾಡಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಇರಾನ್ ದಾಳಿ ನಡೆಸಿದ್ದ ಆರೋಪ ಮಾಡಲಾಗಿತ್ತು. ಈ ಆರೋಪದ ಬೆನ್ನಲ್ಲೇ ಇಸ್ರೇಲ್ ಕೂಡ ತಕ್ಕ ಉತ್ತರ ಕೊಡುತ್ತೀವಿ ಅಂತಾ ಗುಡುಗಿತ್ತು, ಆದರೆ ಇದೀಗ ಇರಾನ್ ಮಾತ್ರ ನಾವು ದಾಳಿ ಮಾಡಿಲ್ಲ ಎಲ್ಲಾ ಸುಳ್ಳು ಅಂತಿದೆ! ಹೀಗಾಗಿ ಈ ವಿಚಾರದಲ್ಲಿ ಇಸ್ರೇಲ್ & ಇರಾನ್ ನಡುವೆ ಫೈಟಿಂಗ್ ಜೋರಾಗುವ ಸಾಧ್ಯತೆ ದಟ್ಟವಾಗಿದೆ. ಮಧ್ಯಪ್ರಾಚ್ಯ ಭಾಗದ ದೇಶಗಳು ಈಗಾಗಲೇ ಇಸ್ರೇಲ್ & ಇರಾನ್ ಯುದ್ಧ ನೋಡಿ ಹೆದರಿ ಹೋಗಿದ್ದು, ಈಗ ಮತ್ತೊಮ್ಮೆ ಇಂತಹ ತಿಕ್ಕಾಟ ನಡೆಯದೇ ಇರಲಿ ಅನ್ನೋ ಆಶಯ ವ್ಯಕ್ತಪಡಿಸುತ್ತಿವೆ.












Click it and Unblock the Notifications