Donald Trump: ಡೊನಾಲ್ಡ್ ಟ್ರಂಪ್ ಬಗ್ಗೆ ಇರಾನ್ ಇಂತಹ ಹೇಳಿಕೆ ಕೊಡೋದಾ?
ಇರಾನ್ ಮತ್ತು ಅಮೆರಿಕ ಫೈಟಿಂಗ್ ನಿಲ್ಲಿಸುತ್ತಿಲ್ಲ, ಒಂದು ಕಡೆ ತಮ್ಮ ವಿರುದ್ಧ ದಾಳಿ ಮಾಡಿದ್ದರು ಎಂಬ ಕಾರಣಕ್ಕೆ ಇರಾನ್ ಈಗಲೂ ಕೊತ ಕೊತ ಕುದಿಯುತ್ತಿದೆ. ಮತ್ತೊಂದು ಕಡೆ, ಇಸ್ರೇಲ್ ಮತ್ತೆ ಏನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ವಿನಾಶ ಗ್ಯಾರಂಟಿ ಅಂತಿದೆ ಇರಾನ್. ಹೀಗೆಲ್ಲಾ ಇಸ್ರೇಲ್ ವಿರುದ್ಧ ಭಾರಿ ದೊಡ್ಡದಾಗಿ ಆವಾಜ್ ಇಡುತ್ತಿದ್ದ ಇರಾನ್ ಈಗ ನೇರವಾಗಿ ಡೊನಾಲ್ಡ್ ಟ್ರಂಪ್‌ಗೆ ವಾರ್ನಿಂಗ್ ಕೊಟ್ಟಿದೆ. ಹಾಗಾದ್ರೆ ಇರಾನ್ ಹೇಳಿದ್ದು ಏನು?
ಅಮೆರಿಕ ಜಗತ್ತಿನ ಶಕ್ತಿಶಾಲಿ ದೇಶವಾಗಿದ್ದು, ಜಾಗತಿಕವಾಗಿ ಪ್ರಭಾವಶಾಲಿ ದೇಶವಾಗಿದೆ. ಅದರಲ್ಲೂ ಈ ದೇಶದ ವಿರುದ್ಧ ಮಾತನಾಡುವ ಶಕ್ತಿ ಯಾರಲ್ಲೂ ಇಲ್ಲ ಅನ್ನುವಂತೆ ಬಾಳುತ್ತಿದೆ. ಆದರೆ ಇರಾನ್ ಮಾತ್ರ ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತು ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ನಂತರ ಏನೇನೋ ಮಾಡಿ ಈ ಎರಡೂ ದೇಶಗಳ ನಡುವೆ ಸಂಧಾನ ಮಾಡಿಸಿ ಯುದ್ಧ ನಿಲ್ಲಿಸಿತ್ತು ಅಮೆರಿಕ. ಇಷ್ಟೆಲ್ಲಾ ಒದ್ದಾಟದ ಮಧ್ಯೆ ಇದೀಗ ಇರಾನ್ ಅಧಿಕಾರಿ ನೀಡಿರುವ ಹೇಳಿಕೆ ಅಮೆರಿಕ & ಇರಾನ್ ದೇಶದ ನಡುವೆ ಇನ್ನಷ್ಟು ಬೆಂಕಿಯ ಕಿಡಿ ಹೊತ್ತಿಕೊಳ್ಳುವಂತೆ ಮಾಡಿದೆ.

ಡೊನಾಲ್ಡ್ ಟ್ರಂಪ್ ಜೀವಕ್ಕೆ ಇರಾನ್ ಬೆದರಿಕೆ?
ಹೌದು, ಇರಾನ್ ಸೇನಾಧಿಕಾರಿ ಇದೀಗ ಡೊನಾಲ್ಡ್ ಟ್ರಂಪ್‌ಗೆ ಒಂದು ಸವಾಲು ಹಾಕಿದ್ದಾರೆ. ಅಂದಹಾಗೆ ಡೊನಾಲ್ಡ್ ಟ್ರಂಪ್ ತಮ್ಮದೇ ನೆಲದಲ್ಲೂ ಸೇಫ್ ಆಗಿಲ್ಲ. ಟ್ರಂಪ್ ಅವರು ಆರಾಮವಾಗಿ ಇರುವಾಗಲೇ, ನಮ್ಮ ಡ್ರೋನ್‌ಗಳಿಗೆ ನಾವು ಕೆಲಸ ಕೊಡಬಹುದು ಅಂತಾ ಹೇಳಿದ್ದಾರೆ. ಹೀಗೆ ಇರಾನ್ ಅಧಿಕಾರಿ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಜಾದವ್ ಲಾರಿಜಾನಿ ನೀಡಿದ ಹೇಳಿಕೆಗೆ ಭಾರಿ ಆಕ್ರೋಶ ಕೂಡ ವ್ಯಕ್ತವಾಗುತ್ತಿರುವ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಇರಾನ್ ಬೆದರಿಕೆಗೆ ಕೇರ್ ಮಾಡೇ ಇಲ್ಲ.
ಅಮೆರಿಕದ ಒಳಗೆ ನುಗ್ಗುವುದು ಸುಲಭ?
ಇಡೀ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಸೇನೆಯನ್ನು ಹೊಂದಿರುವ ಅಮೆರಿಕ ಯಾವುದೇ ದೇಶದ ವಿರುದ್ಧ ಸುಲಭವಾಗಿ ಯುದ್ಧ ಮಾಡುವ ಶಕ್ತಿ ಹೊಂದಿದೆ. ಇದೇ ಕಾರಣಕ್ಕೆ ಸುಮ್ಮನೆ ಹಲವು ದೇಶಗಳ ವಿರುದ್ಧ ಯುದ್ಧ ಮಾಡಿ ಅಮೆರಿಕ ಅತಂತ್ರ ಮಾಡಿದೆ ಅನ್ನೋ ಆರೋಪ ಕೂಡ ಇದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಇರಾನ್ ಅಧಿಕಾರಿ ಅಮೆರಿಕದ ಒಳಗೆ ನುಗ್ಗಿ ಅಧ್ಯಕ್ಷರ ಮೇಲೆ ದಾಳಿ ಮಾಡುವ ಬೆದರಿಕೆ ಕೂಡ ಹಾಕಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಅಮೆರಿಕದ ಒಳಗೆ ಬೇರೆ ದೇಶದ ಕ್ಷಿಪಣಿ ಅಂದ್ರೆ ಮಿಸೈಲ್‌ಗಳು ನುಗ್ಗುವುದು ಕಷ್ಟದ ಕೆಲಸವೇ ಆಗಿದೆ.












Click it and Unblock the Notifications