ಇರಾನ್ ಅಧ್ಯಕ್ಷರ ಚುನಾವಣೆ: ಭಾರಿ ಬಿಗಿ ಭದ್ರತೆ!
ಇರಾನ್ ಅಧ್ಯಕ್ಷರ ಸಾವಿನ ಬಳಿಕ ಮತ್ತೊಮ್ಮೆ ಆ ದೇಶದಲ್ಲಿ ಹೊಸ ಮನ್ವಂತರ ಮತ್ತು ನೆಮ್ಮದಿ ಮೂಡಿದೆ. ಅದರಲ್ಲೂ ಅಧ್ಯಕ್ಷರ ಸಾವಿನ ಬಳಿಕ ಇರಾನ್ ದೇಶದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಮತದಾರರು ಉತ್ಸಾಹದಿಂದ ಬಂದು ತಮ್ಮ ಹೊಸ ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಿದ್ದಾರೆ. ಹಾಗಾದ್ರೆ ಇರಾನ್ ದೇಶದಲ್ಲಿ ಈಗ ಏನು ನಡೆಯುತ್ತಿದೆ?
ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಘೋಷಣೆ ಮಾಡಿದ ನಂತರ ಮಧ್ಯಪ್ರಾಚ್ಯ ಕೊತ ಕೊತ ಕುದಿಯುತ್ತಿದೆ. ಹೀಗಿದ್ದಾಗಲೇ, ಇರಾನ್ ಅಧ್ಯಕ್ಷರು ದುರಂತ ಸಾವು ಕಂಡಿದ್ದರು. ಹೀಗಾಗಿ ಇರಾನ್ ಕೂಡ ಪರಿಸ್ಥಿತಿ ಅರಿತು ಇದೀಗ ಬೇಗ ಅಧ್ಯಕ್ಷೀಯ ಚುನಾವಣೆ ನಡೆಸಿದೆ. ಇರಾನ್ ಅಧ್ಯಕ್ಷೀಯ ಚುನಾವಣೆಗೆ ಒಟ್ಟಾರೆ 4 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಯೀದ್ ಜಲೀಲಿ, ಪಾರ್ಲಿಮೆಂಟ್‌ನ ಸ್ಪೀಕರ್ ಮೊಹಮ್ಮದ್ ಬಾಘಿರ್ ಖಲೀಬಫ್ ಸೇರಿದಂತೆ ಶಿಯಾ ಧರ್ಮಗುರು ಮೊಸ್ತಫಾ ಪೋರ್‌ಮೊಹಮ್ಮದಿ ಮಧ್ಯೆ 'ತ್ರಿಕೋನ' ಸ್ಪರ್ಧೆ ಕೂಡ ನಡೆದಿದೆ. ಈ ಮೂವರಲ್ಲಿ ಒಬ್ಬರು ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ.

ಇರಾನ್ ಚುನಾವಣೆ ಹೇಗೆ ನಡೆಯಿತು?
ಅಷ್ಟಕ್ಕೂ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ತನಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಜನ ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೂ ಇನ್ನೂ ಕೆಲವು ಪ್ರಾಂತ್ಯಗಳಲ್ಲಿ ಜನರ ಉತ್ಸಾಹ ಕಡಿಮೆ ಇದ್ದು, ಮತದಾನದ ಪ್ರಮಾಣ ಕಡಿಮೆ ಆಗಿದೆ ಎನ್ನಲಾಗಿದೆ. ಹಾಗಾದ್ರೆ ದಿಢೀರ್ ಇರಾನ್ ದೇಶದಲ್ಲಿ ಮಧ್ಯಂತರ ಚುನಾವಣೆ ನಡೆದಿದ್ದು ಏಕೆ? ಇಸ್ರೇಲ್ ವಿರುದ್ಧ ಯುದ್ಧ ಸಾರಲು ಇರಾನ್ ಸಿದ್ಧತೆ ನಡೆಸಿದೆಯಾ? ಬನ್ನಿ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.
ಇಸ್ರೇಲ್ ವಿರುದ್ಧ ಇರಾನ್ ಯುದ್ಧ?
ಅಷ್ಟಕ್ಕೂ ಮೇ 2024 ಅಂದ್ರೆ, ಕಳೆದ ತಿಂಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದ ಇಬ್ರಾಹಿಂ ರೈಸಿ ಸಾವು ತಲ್ಲಣ ಸೃಷ್ಟಿ ಮಾಡಿತ್ತು. ಹೀಗಾಗಿ ಇರಾನ್ ದೇಶವು ಇಸ್ರೇಲ್‌ಗೆ ಪಾಠ ಕಲಿಸಲು ಮುಂದಾಗಿತ್ತು. ಹೀಗಿದ್ದಾಗಲೇ ಪರಿಸ್ಥಿತಿ ಬಿಗಡಾಯಿಸಿದ್ದು, ಇರಾನ್‌ನ ಪರಿಸ್ಥಿತಿ ಸೂಕ್ಷ್ಮವಾಗಿದೆ. ಇದನ್ನೆಲ್ಲಾ ಅರಿತು ಇದೀಗ ಚುನಾವಣೆ ನಡೆಸಲಾಗಿದೆ. ಆದ್ರೆ ಚುನಾವಣೆ ನಂತರ ಇರಾನ್ ಯುದ್ಧ ನಡೆಸಬಹುದಾ.? ಎಂಬ ಪ್ರಶ್ನೆ ಕೂಡ ಕಾಡ್ತಿದೆ. ಹೊಸ ಅಧ್ಯಕ್ಷರ ಆಯ್ಕೆ ನಂತರ ಯುದ್ಧಕ್ಕೆ ಇರಾನ್ ಸಿದ್ಧವಾಗುತ್ತಿದೆಯಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಯುದ್ಧಗಳ ನಡುವೆ ಮತ್ತೊಂದು ಯುದ್ಧ?
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಮತ್ತೊಂದು ಯುದ್ಧ ನಡೆಯಬಾರದು ಎಂಬುದೇ ಈ ಜಗತ್ತಿನ ಆಶಯ. ಯಾಕಂದ್ರೆ ಈಗಾಗಲೇ ಜಗತ್ತಿನಲ್ಲಿ 2 ಯುದ್ಧಗಳು ನಡೆಯುತ್ತಿವೆ ಈ ಕಾರಣಕ್ಕೆ ಜಗತ್ತು ನಲುಗಿದೆ. ಹೀಗಿದ್ದಾಗ ಮತ್ತೊಂದು ಯುದ್ಧ ಆರಂವಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಇದೀಗ, ಇರಾನ್‌ನಲ್ಲಿ ಸುಮಾರು 6 ಕೋಟಿ ಮತದಾರರು ಇದ್ದಾರೆ. ಈ ಪೈಕಿ 1.8 ಕೋಟಿ ಮತದಾರರು 18 ರಿಂದ 30 ವರ್ಷದವರು. ಹೀಗಾಗಿ ಈ ಚುನಾವಣೆ ಭಾರಿ ಗಮನ ಸೆಳೆದಿದೆ.












Click it and Unblock the Notifications