Iran President: ದೇಶದ ಅಧ್ಯಕ್ಷನಾಗಿ ಮೆರೆದವನನ್ನು ಸತ್ತ ಪ್ರಾಣಿಯಂತೆ ಎತ್ತೊಯ್ದರು!
ಇರಾನ್ ದೇಶದ ಅಧ್ಯಕ್ಷರ ಮೃತದೇಹ ಕೊನೆಗೂ ಸಿಕ್ಕಿದ್ದು, ಹೆಲಿಕಾಪ್ಟರ್ ದುರಂತದ ಸ್ಥಳ ಈಗ ರಕ್ತಮಯ ಆಗಿದೆ. ನಿನ್ನೆ, ಅಪಘಾತಕ್ಕೆ ತುತ್ತಾಗಿದ್ದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿತ್ತು. ಹೀಗೆ ಇಬ್ರಾಹಿಂ ರೈಸಿ ಮೃತಪಟ್ಟ ಸುದ್ದಿ ಇದೀಗ ಜಗತ್ತಿನಾದ್ಯಂತ ಬಿರುಗಾಳಿ ಎಬ್ಬಿಸಿದ್ದು, ಮೃತಪಟ್ಟ ಇಬ್ರಾಹಿಂ ರೈಸಿ ಅವರ ದೇಹ ಯಾವ ರೀತಿ ಎತ್ತೊಯ್ದಿದ್ದಾರೆ ಗೊತ್ತಾ? ಆ ಭಯಾನಕ ವಿಡಿಯೋ ನೋಡಲು ಮುಂದೆ ಓದಿ.
ಮನುಷ್ಯ ಬದುಕಿರುವಾಗ ಮಾತ್ರ ಬೆಲೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಯಾಕಂದ್ರೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು ಈಗ ಅಂತಹ ಸಂಚಲನ ಸೃಷ್ಟಿ ಮಾಡಿದೆ. ಇಬ್ರಾಹಿಂ ರೈಸಿ ಬದುಕಿದ್ದಾಗ ಜಗತ್ತಿನಾದ್ಯಂತ ಸುದ್ದಿಯಾಗಿ ಸದ್ದು ಮಾಡಿದ್ದರು. ಯಾಕಂದ್ರೆ ಇಬ್ರಾಹಿಂ ರೈಸಿಗೆ ಇರಾನ್ ದೇಶದಲ್ಲಿ ಸಾಕಷ್ಟು ಜನ ಬೆಂಬಲ ಇತ್ತು. ಹೀಗಿದ್ದಾಗ ಒಬ್ಬ ಅಧ್ಯಕ್ಷನ ಜೀವವೇ ಹೋದಾಗ ಅವರ ದೇಹವನ್ನು ಯಾವ ರೀತಿ ಹೊತ್ತುಕೊಂಡು ಹೋಗಿದ್ದಾರೆ ಗೊತ್ತಾ? ಈಗ ವೈರಲ್ ಆಗುತ್ತಿರುವ ವಿಡಿಯೋ ಆ ಸತ್ಯ ಬಿಚ್ಚಿಟ್ಟಿದೆ ನೋಡಿ.

ಇರಾನ್ ದೇಶದಲ್ಲಿ ಹೈಅಲರ್ಟ್
ಹೆಲಿಕಾಪ್ಟರ್ ದುರಂತದ ಸುದ್ದಿ ಕಾಡ್ಗಿಚ್ಚಿನ ರೀತಿ ಹಬ್ಬಿದ್ದು, ಇಡೀ ಜಗತ್ತಿನಾದ್ಯಂತ ಇದೀಗ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಈ ದುರಂತ ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗುವಂತೆ ಮಾಡಿದೆ. ಇಲ್ಲಿ ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್ ನಿಯಂತ್ರಣ ಘಟಕದ ಸಂಪರ್ಕ ಕಡಿದುಕೊಂಡಿದ್ದು, ವೇಗವಾಗಿ ಭೂಮಿಗೆ ಅಪ್ಪಳಿಸಿದೆ ಎಂದು ಹೇಳಲಾಗಿದೆ. ಹಾಗೇ ಈ ದುರಂತಕ್ಕೆ ಹೆಲಿಕಾಪ್ಟರ್‌ನ ತಾಂತ್ರಿಕ ದೋಷ ಕಾರಣ ಎನ್ನಲಾಗಿದೆ.
ಮತ್ತೊಂದು ಕಡೆ ಇರಾನ್ ದೇಶದಲ್ಲಿ ಈಗ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಯಾಕೆ ಅಂದ್ರೆ ಯಾವುದೇ ಕ್ಷಣದಲ್ಲಿ ಇರಾನ್ ಒಳಗೆ ಆಂತರಿಕ ಹಿಂಸಾಚಾರ ಭುಗಿಲೇಳುವ ಭಯವು ಆವರಿಸಿದೆ. ಹಾಗೇ ಶತ್ರು ದೇಶಗಳು ಕೂಡ ದಾಳಿ ಮಾಡುವ ಆತಂಕ ಕಾಡುತ್ತಿದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಲಾಗಿದ್ದು, ಎಲ್ಲೆಲ್ಲೂ ಇಬ್ರಾಹಿಂ ರೈಸಿ ಬಗ್ಗೆ ಚರ್ಚೆ ನಡೆಯುವಾಗ ರೈಸಿ ದೇಹವನ್ನು ಹೊತ್ತೊಯ್ದಿರುವ ರೀತಿಗೆ ಆಕ್ರೋಶ ವ್ಯಕ್ತವಾಗಿದೆ.
Iran’s President Raisi and FM Amirabdollahian killed in the helicopter crash.#Mossad #Azerbaijan #helicoptercrash #Iran #Condolences #Raisi #IslamicRepublic pic.twitter.com/VOhPZaZq6m
— Aanand Krishna (Modi Ka Parivar) (@aanand_krishnaa) May 20, 2024
ಇಸ್ರೇಲ್ ವಿರುದ್ಧ ಇರಾನ್ ಯುದ್ಧ?
ಅಷ್ಟಕ್ಕೂ ಅಜೆರ್‌ಬೈಜಾನ್ ಅರಾಸ್ ನದಿಗೆ ನಿರ್ಮಿಸಿದ ಡ್ಯಾಂ ಉದ್ಘಾಟನೆಗೆ ರೈಸಿ ಅತಿಥಿಯಾಗಿ ಹೋಗಿದ್ದರು. ಆದರೆ ಇದೇ ಸಮಯದಲ್ಲಿ ಭೀಕರ ದುರಂತ ನಡೆದಿರುವುದು ಪರಿಸ್ಥಿತಿಯನ್ನ ಮತ್ತಷ್ಟು ಆತಂಕಕ್ಕೆ ದೂಡಿದೆ. ಹಾಗೇ ಇರಾನ್ ಸೇನೆ ಈಗ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುತ್ತಾ? ಎಂಬ ಪ್ರಶ್ನೆ ಮೂಡಿದೆ. ಈ ಬೆನ್ನಲ್ಲೇ ಇಸ್ರೇಲ್ ಕೂಡ ಅಲರ್ಟ್ ಆಗಿದ್ದು, ತನ್ನ ಗಡಿ ಪ್ರದೇಶ ಭದ್ರ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ಆಕಾಶದಲ್ಲೂ ಅಲರ್ಟ್ ಘೋಷಣೆ ಆಗಿದೆ. ಈ ಮೂಲಕ 3ನೇ ಮಹಾಯುದ್ಧದ ಬಗ್ಗೆ ಈಗ ಆತಂಕ ಶುರುವಾಗಿದೆ.












Click it and Unblock the Notifications