Pager explosion: ಇಸ್ರೇಲ್ ವಿರುದ್ಧ ಯುದ್ಧ ಸಾರಲು ಸಜ್ಜಾದ ಇರಾನ್: 3ನೇ ಮಹಾಯುದ್ಧ ಫಿಕ್ಸ್?
ಮನುಷ್ಯರಿಗೆ ನೆಮ್ಮದಿಯಾಗಿ ಬದುಕುವುದು ಬೇಡ ಅಂತಾ ಕಾಣುತ್ತೆ, ಈ ಮಾತು ಯಾಕಂದ್ರೆ 3ನೇ ಮಹಾಯುದ್ಧ ಬೇಡ ಅಂತಾ ಅದೆಷ್ಟೇ ಪ್ರಯತ್ನ ಮಾಡುತ್ತಿದ್ದರೂ ಸರಿ ಹೋಗುತ್ತಿಲ್ಲ. ಅದರಲ್ಲೂ ಇಸ್ರೇಲ್ ದೇಶ ಪದೇ ಪದೇ ತನ್ನ ಸುತ್ತಮುತ್ತಲ ದೇಶಗಳ ಜೊತೆಗೆ ಕಿರಿಕ್ ಮಾಡಿ ಯುದ್ಧಕ್ಕೆ ಪ್ರಚೋದನೆ ಮಾಡುತ್ತಿದೆ ಎಂಬ ಆರೋಪಗಳ ನಡುವೆ, ಇರಾನ್ ಸೇನೆ ರೊಚ್ಚಿಗೆದ್ದು ಕೂತಿದೆ. ಈ ಮೂಲಕ 3ನೇ ಮಹಾಯುದ್ಧ ಫಿಕ್ಸ್ ಆಗೋಯ್ತಾ? ಅನ್ನೋ ಅನುಮಾನ ಈಗ ಮೂಡಿದೆ. ಹಾಗಾದರೆ, ಇಸ್ರೇಲ್ ವಿರುದ್ಧ ಕೇಳಿ ಬಂದಿರುವ ಆ ಗಂಭೀರ ಆರೋಪ ಏನು? ಬನ್ನಿ ತಿಳಿಯೋಣ.
ಇಸ್ರೇಲ್‌ಗೆ ಅದೆಷ್ಟೇ ಹೇಳಿದರೂ ಬುದ್ಧಿ ಬಂದಿಲ್ಲ, ಹಾಗೇ ಇರಾನ್ ದೇಶವನ್ನ ಕೆಣಕುವ ತನ್ನ ಕೆಲಸ ಮುಂದುವರಿಸಿದೆ ಎಂಬುದು ಇಸ್ರೇಲ್ ವಿರೋಧಿಗಳ ಆರೋಪ. ಪರಿಸ್ಥಿತಿ ಹೀಗಿದ್ದಾಗ ನಿನ್ನೆ ಕೂಡ ಇಸ್ರೇಲ್ ದೊಡ್ಡ ತಪ್ಪು ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಲೆಬನಾನ್ ಮತ್ತು ಸಿರಿಯಾದ ಹಲವೆಡೆ ಪೇಜರ್ಸ್ ಮೂಲಕ ಸ್ಫೋಟ ನಡೆಸಿದ ಆರೋಪ ಕೇಳಿಬಂದಿದೆ. ಸುಮಾರು 2,800ಕ್ಕೂ ಹೆಚ್ಚು ಜನ ಘಟನೆಯಲ್ಲಿ ಗಾಯಗೊಂಡಿದ್ದು, 9 ಜನ ಇಲ್ಲಿಯವರೆಗೂ ಜೀವ ಬಿಟ್ಟಿದ್ದಾರೆ. ಹಾಗೆಯೇ ಗಾಯಗೊಂಡು ಪರದಾಡುತ್ತಿರುವ 2,800 ಜನರು ಆಸ್ಪತ್ರೆಗಳಲ್ಲಿ ನರಳುತ್ತಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವ ಆತಂಕ ಈಗ ಆವರಿಸಿದೆ.

ಇಸ್ರೇಲ್ ವಿರುದ್ಧ ಇರಾನ್ ಯುದ್ಧ?
2,800 ನಾಗರಿಕರು ನರಳುವ ರೀತಿ ಸ್ಫೋಟ ನಡೆಸಿರುವ ಆರೋಪ, ಇಸ್ರೇಲ್ ತಲೆಗೆ ಇದೀಗ ಸುತ್ತಿಕೊಂಡಿದೆ. ಅಷ್ಟಕ್ಕೂ ಹಿಜ್ಬುಲ್ಲಾ ಸಂಘಟನೆ ಮುಖಂಡ ಅಲಿ ಅಮ್ಮಾರ್ ಹಾಗೂ ಹಸನ್ ಫಲ್‌ಲಲ್ಲಾ ಮನೆಯಲ್ಲೂ ಈ ಘಟನೆ ಸಾವಿನ ಸೂತಕ ಬರೆದಿದೆ. ಯಾಕಂದ್ರೆ, ಭೀರಕವಾಗಿ ಸ್ಫೋಟಗೊಂಡ ಪೇಜರ್ಸ್ ಇದೀಗ ಹಿಜ್ಬುಲ್ಲಾ ಸಂಘಟನೆ ಮುಖಂಡರ ಮಗನ ಜೀವವನ್ನೂ ಬಲಿ ತೆಗೆದಿದೆ. ಲೆಬನಾನ್ ದೇಶದಲ್ಲಿ ಇರುವ ಇರಾನ್‌ನ ರಾಯಭಾರಿ ಮೊಜ್ತಬಾ ಅಮಾನಿ ಕೂಡ ಈ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.
200 ಜನರ ಸ್ಥಿತಿ ಗಂಭೀರ
ಪೇಜರ್ಸ್ ಸ್ಫೋಟದ ಪರಿಣಾಮ ಗಾಯಗೊಂಡು ನರಳುತ್ತಿರುವ 2,800 ಜನರ ಪೈಕಿ ಇದೀಗ ಬರೊಬ್ಬರಿ 200 ಜನರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಅದರಲ್ಲೂ ಮಕ್ಕಳು ಕೂಡ ಪೇಜರ್ಸ್ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಮತ್ತೊಂದು ಕಡೆ ಕೃತ್ಯದ ಹಿಂದೆ ಇಸ್ರೇಲ್‌ನ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ಅತ್ಯಾಧುನಿಕ ರಿಮೋಟ್ ತಂತ್ರಜ್ಞಾನ ಬಳಸಿ, ಈ ರೀತಿ ಭೀಕರ ಸ್ಫೋಟ ನಡೆಸಲಾಗಿದೆ ಎಂದು ಲೆಬನಾನ್ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಘಟನೆ ನಂತರ ಇರಾನ್ ಇದೀಗ ಮತ್ತಷ್ಟು ಕೊತ ಕೊತ ಕುದಿಯುತ್ತಿದ್ದು, ಇಸ್ರೇಲ್ ವಿರುದ್ಧ ಯುದ್ಧ ಸಾರುವ ಭಯ ಕೂಡ ಆವರಿಸಿದೆ. ಪರಿಸ್ಥಿತಿ ಸೂಕ್ಷ್ಮವಾಗಿದೆ ಎಂಬುದನ್ನು ಅರಿತು, ಅಮೆರಿಕ ಕೂಡ ಇರಾನ್‌ಗೆ ಸಮಾಧಾನ ಹೇಳಿದೆ. ಆದರೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಎಂಬುದನ್ನ ತಿಳಿಯಲು ಕಾದು ನೋಡಬೇಕಿದೆ.












Click it and Unblock the Notifications