Get Updates
Get notified of breaking news, exclusive insights, and must-see stories!

Syrian Conflict: ಇರಾನ್ & ಸಿರಿಯಾ ದೋಸ್ತಿ ಗಟ್ಟಿ ಮಾಡಲು ಇರಾನ್ ಸರ್ಕಾರದ ಪ್ರಯತ್ನ!

ಸಿರಿಯಾ ಗಲಾಟೆ ಇನ್ನೂ ತಣ್ಣಗೆ ಆಗಿಲ್ಲ, ಸಿರಿಯಾದಲ್ಲಿನ ಕಿರಿಕ್ ವಿಚಾರ ಮಧ್ಯಪ್ರಾಚ್ಯದ ದೇಶಗಳ ನೆಮ್ಮದಿ ಕೆಡಿಸುತ್ತಿದೆ. ಯಾವಾಗ ಏನಾಗುತ್ತೋ? ಬೇರೆ ಯಾವೆಲ್ಲಾ ದೇಶಗಳು ಈ ಸಮಯದಲ್ಲಿ ಸಿರಿಯಾ ವಿರುದ್ಧ ಯುದ್ಧ ಘೋಷಣೆ ಮಾಡುತ್ತವೋ? ಎಂಬ ಪ್ರಶ್ನೆಗಳ ಮಧ್ಯೆ ಸಿರಿಯಾ ಧಗಧಗ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಇಸ್ರೇಲ್ ಸೇನೆ ನೇರವಾಗಿ ಸಿರಿಯಾಗೆ ನುಗ್ಗಿ ಹಲವು ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿರುವ ಆರೋಪ ಕೂಡ ಕೇಳಿ ಬರುತ್ತಿದೆ. ಇದೇ ಸಮಯದಲ್ಲಿ ಇರಾನ್ ಹೊಸ ದಾಳ ಉರುಳಿಸಿದೆ!

ಇರಾನ್ & ಸಿರಿಯಾ ಅಕ್ಕಪಕ್ಕದ ದೇಶಗಳು, ಇದೆಲ್ಲಕ್ಕಿಂತ ಹೆಚ್ಚಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಹರಡಿಕೊಂಡಿರುವ ತೈಲ ನಂಬಿ ಬದುಕುವ ದೇಶಗಳು ಅಂದ್ರೆ ಅವು ಇರಾನ್ & ಸಿರಿಯಾ ಅಂತ ಹೇಳಬಹುದು. ಕೆಲ ದಿನಗಳ ಹಿಂದೆ ಸಿರಿಯಾದಲ್ಲಿ ಅಂತ್ಯವಾದ ಅಸ್ಸಾದ್ ಸರ್ಕಾರದ ಜೊತೆಗೆ ಸಿಕ್ಕಾಪಟ್ಟೆ ಆತ್ಮೀಯತೆ ಹೊಂದಿತ್ತು ಇರಾನ್ ಸರ್ಕಾರ.

Iran Is Trying To Build Good Relationship With Syria s New Leaders

ಆದರೆ ಇದೀಗ ಸಿರಿಯಾ ನೆಲದಲ್ಲಿ, ಹೊಸ ನಾಯಕರು ಹುಟ್ಟಿಕೊಂಡಿದ್ದಾರೆ. ಸಿರಿಯಾ ನಾಗರಿಕ ಯುದ್ಧದ ಮುಂಚೂಣಿ ನಾಯಕರ ಪಡೆ ಇದೀಗ ಸಿರಿಯಾದಲ್ಲಿ ಸರ್ಕಾರ ರಚನೆ ಮಾಡಿ ಆಡಳಿತ ನಡೆಸುವ ಸಾಧ್ಯತೆ ಇದೆ. ಹೀಗಿದ್ದಾಗ ಇರಾನ್‌ಗೆ ಇವರ ಜೊತೆಗೆ ಉತ್ತಮ ಸಂಬಂಧ ಹೊಂದಿ ನೆಮ್ಮದಿಯಾಗಿ ಬದುಕಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕೆ ಇರಾನ್ ಏನು ಮಾಡಿದೆ ಗೊತ್ತಾ?

ಸಿರಿಯಾ ಬಂಡಾಯ ನಾಯಕರ ಜೊತೆಗೆ ದೋಸ್ತಿ!

ಇರಾನ್ ಈಗ, ಸಿರಿಯಾ ನಾಯಕತ್ವದಲ್ಲಿ ಆಗಿರುವ ಬದಲಾವಣೆ ಬಗ್ಗೆ ವಾಸ್ತವವಾಗಿ ಚಿಂತೆ ಮಾಡಲು ಶುರು ಮಾಡಿದೆ. ಇದೇ ಕಾರಣಕ್ಕೆ ಅಸ್ಸಾದ್ ಸರ್ಕಾರ ಬಿದ್ದು ಹೋಗಿ, ಸಿರಿಯಾ ನೆಲದಿಂದ ಅಸ್ಸಾದ್ ಓಡಿ ಹೋದ ನಂತರ ಅಧಿಕಾರಕ್ಕೆ ಬಂದಿರುವ ಸಿರಿಯಾದ ಬಂಡಾಯ ಸೇನೆಯ ಆಡಳಿತದ ಜೊತೆಗೆ ಮಾತುಕತೆಗೆ ಇದೀಗ ಇರಾನ್ ಮುಂದಾಗಿದೆ. ಈ ಮೂಲಕವೇ ಮಧ್ಯಪ್ರಾಚ್ಯ ಭಾಗದಲ್ಲಿ ತನ್ನ ಸ್ನೇಹವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ಇರಾನ್‌ನ ಆಡಳಿತ ಮುಂದಾಗಿದೆ ಎಂಬ ಮಾತು ಕೇಳಿ ಬಂದಿದೆ.

ಸಿರಿಯಾ ಯುದ್ಧ ನಿಲ್ಲುತ್ತಾ?

ಒಟ್ನಲ್ಲಿ ಸಿರಿಯಾ ಆದಷ್ಟು ಬೇಗ ಶಾಂತವಾಗಬೇಕಿದೆ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ರೀತಿಯ ತಿಕ್ಕಾಟಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಇಸ್ರೇಲ್ & ಗಾಜಾದ ಯುದ್ಧ ಮತ್ತು ಇಸ್ರೇಲ್ & ಲೆಬನಾನ್ ಯುದ್ಧಗಳು ಭಾರಿ ಘೋರತೆ ತೋರಿಸಿವೆ. ಹೀಗಾಗಿ, ಆದಷ್ಟು ಬೇಗ ಸಿರಿಯಾ ನೆಲ ತಣ್ಣಗೆ ಆಗಬೇಕು ಎಂಬ ಒತ್ತಾಯ ಕೇಳಿ ಬರುತ್ತಲೇ ಇದೆ. ಆದ್ರೆ ಈ ಒತ್ತಾಯಕ್ಕೆ ಮಣಿಯುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+